Sunday, July 31, 2011

ಹೂವಿನ ಬಾಳು

ಹೀಗೆಯೇ ಒಂದು ದಿನ
ನಾ ಕೇಳಿದೆ ಹೂಗಳ
"ಏಕೆ ನೀ ಪರಿಮಳ ಹರಡುವಿ"
ಹೂಗಳು ನಕ್ಕು ಹೇಳಿತು
"ಸೊತ್ತು ಇದು ನನ್ನ ಸಣ್ಣ ಬಾಳಿನ,
ನನ್ನಿಂದ ಪರಿಮಳಿಸಲಿ ಬೇರೆಯವರ ಜೀವನ
ಉಳಿಯದು ಈ ಅಂದ ಚೆಂದ
ಬಾಡುವ ಮುನ್ನ ಹರಡಲಿ ನನ್ನ ಸುಗಂಧ"
by ಹರೀಶ್ ಶೆಟ್ಟಿ, ಶಿರ್ವ

ಋಣವೇ ಋಣ

ಋಣವೇ ಋಣ
ಋಣವೇ ಋಣ

ಜನ್ಮವ ನೀಡಿದ
ತಾಯಿಯ ಮಮತೆ,
ಪ್ರೀತಿ ,ವಾತ್ಸಲ್ಯಕ್ಕೆ
ಮಾಡಿದ ತ್ಯಾಗಕ್ಕೆ
ಸಾಕಿ ಬೆಳೆಸಿದಕ್ಕೆ  
ಆ ದೇವತೆಯ ಋಣ.....

ಶಾಲೆಯ  ದಿವಸವ
ಅನಂತ ವಿದ್ಯೆ ಪಡೆದು
ವಿದ್ಯ ದಾನ  ಮಾಡಿದ
ಆ ಗುರುಗಳ ಋಣ......  

ಬಂಧು ಬಳಗದವರು
ಕಷ್ಟದ ಸಮಯವ 
ಆಶ್ರಯವನ್ನು ನೀಡಿ
ಕಾಪಾಡಿದಕ್ಕೆ
ಅವರ ಉಪಕಾರದ ಋಣ.....

ಮಿತ್ರರ ಅಮೂಲ್ಯ ಸಂಗತ
ಆನಂದದ ಆ ಮಧುರ ಕ್ಷಣಗಳು
ನಿಸ್ವಾರ್ಥ ಮನದಿಂದ ನೀಡಿದ
ಸುಖ ಸಹಾಯದ ಋಣ.....

ತನ್ನ ತನು ಮನದಿಂದ
ಮದುವೆ ಆಗಿ ಬಂದ
ಹೆಂಡತಿಯ ಪ್ರೀತಿ, ಪ್ರೇಮ
ಸಂಸಾರದ ಕಷ್ಟ  ಸುಖ  
ಗುಣ ಅವಗುಣ ಸಹಿಸಿದ
ಆ ಅರ್ಧಾಂಗಿಯ ಋಣ ......

ಮುಗಿಯಲಾರದ ಈ ಋಣ
ಋಣದಿಂದ ಮುಕ್ತಿ ಇಲ್ಲವೇ?
ಋಣವೇ ಋಣ.....
ಋಣವೇ ಋಣ.......
by ಹರೀಶ್ ಶೆಟ್ಟಿ, ಶಿರ್ವ

Kabir Doha (ಕಬೀರ ದೋಹ )

Kabir Doha

Pehle Agan Birha Ki, Pachhe Prem Ki Pyas
Kahe Kabir Tub Janiye, Naam Milan Ki Aaas

ಅನುವಾದ : ಹರೀಶ್  ಶೆಟ್ಟಿ, ಶಿರ್ವ

ಮೊದಲು ವಿರಹ ಅಗ್ನಿ, ನಂತರ ಬಯಕೆ ಪ್ರೇಮದ
ಕಬೀರ ಹೇಳುವನು ಅವಾಗ ಅರಿತುಕೊಳ್ಳಿ , ನಾಮ ಮಾತ್ರ ಆಸೆ ಮಿಲನದ 

Saturday, July 30, 2011

ಜಗತನ್ನು ಬದಲಾಯಿಸುವ ಮುನ್ನ ನಿಮ್ಮನ್ನು ಸುಧಾರಿಸಿ

ಒಂದು ಉರಿನಲ್ಲಿ ಒಬ್ಬಳು ಆಲಸಿ ಮುದುಕಿ ಇದ್ದಳು. ಅವಳು ಎಷ್ಟು ಆಲಸಿ ಎಂದರೆ ಅವಳ ಮೈ ಬಟ್ಟೆಗಳು ನೀರನ್ನು ಕಂಡು ವರ್ಷ ಕಳೆದಿದ್ದವು, ಅವಳು ಅವಳ ಮನೆಯನ್ನು ಕಟ್ಟಿಸಿದ ಮೇಲೆ ಅವಳ ಮನೆಯನ್ನು ತೊಳೆದು ಸ್ವಚ್ಛ ಮಾಡಿರಲಿಲ್ಲ, ಅವಳ ಮನೆಯ ಅಕ್ಕ ಪಕ್ಕದಲ್ಲಿ ವಾಸಿಸುವವರೆಲ್ಲರು ಇವಳಂತೆಯೇ ಇದ್ದರು, ದಿನವಿಡೀ ಅವಳ ಕೆಲಸವೆಂದರೆ ಇನ್ನೊಬ್ಬರನ್ನು ಟೀಕಿಸುವುದು. ಅವಳ ಸಂಬಂಧಿಕರಾಗಲಿ, ಗೆಳೆಯರಾಗಲಿ, ಯಾರೊಬ್ಬರೂ ಅವಳ ಮನೆಯ ಹತ್ತಿರ ಸುಳಿಯುತ್ತಿರಲಿಲ್ಲ.

ಒಂದು ದಿನ ಆ ಮುದುಕಿ ವಾಸವಾಗಿದ್ದ ಬೀದಿಯಲ್ಲಿ ನೆಡೆದು ಹೋಗುತ್ತಿದ್ದ ಒಬ್ಬ ಸಾಧು ಆ ಮುದುಕಿಗೆ ಬಂಗಾರದಿಂದ ಮಾಡಿದ ಒಂದು ಮೂರ್ತಿಯನ್ನು ಕೊಟ್ಟನು, ಸಂತೋಷದಿಂದ ಸ್ವೀಕರಿಸಿದ ಮುದುಕಿ ಅದನ್ನು ತನ್ನ ಮನೆಯ ಒಂದು ಮೂಲೆಯಲ್ಲಿಟ್ಟಳು, ಸುಂದರವಾದ, ಕಾಂತಿಯುಳ್ಳ ಮೂರ್ತಿ ಮನೆಯಲ್ಲಿದ್ದ ಕೊಳಕಿನಿಂದಾಗಿ ಕಳಾಹೀನವಾಗಿ ಕಾಣಿಸತೊಡಗಿತು.

ಸ್ವಲ್ಪ ಹೊತ್ತು ಚಿಂತಿಸಿದ ಮುದುಕಿ ಮೂರ್ತಿಯನ್ನು ಇರಿಸಿದ ಪೀಠವನ್ನು ತೊಳೆದು ಸ್ವಚ್ಛ ಮಾಡಿದಳು.ಕೊಳಕು ತುಂಬಿದ್ದ ಮನೆಯ ಮೂಲೆಯಲ್ಲಿ ಆ ಪೀಠವನ್ನು ಇರಿಸಿದ್ದು ಇನ್ನಷ್ಟು  ಆಭಾಸವಾಗಿ ಕಾಣಿಸಿತು. ಕೂಡಲೇ ಮುದುಕಿ ಮನೆಯ ಮೂಲೆಯಲ್ಲಿದ್ದ ಕೊಳಕನ್ನೆಲ್ಲಾ ಗುಡಿಸಿ ಸಾರಿಸಿ ಸ್ವಚ್ಛ ಗೊಳಿಸಿದಳು, ಆಗ ದೊಡ್ಡದ್ದಾದ ಮನೆಯಲ್ಲಿ ಕೇವಲ ಮೂಲೆ ಮಾತ್ರ ಶುದ್ದವಾದುದರಿಂದ ಅವಳಿಗೆ  ಉಳಿದ ಭಾಗ ಅಸಹ್ಯವಾಗಿ ಕಂಡಿತು, ಅವಳು ಕೂಡಲೆ ಆ ಕೋಣೆಯನ್ನೇ ಸ್ವಚ್ಛ ಮಾಡಿದಳು. 
ಹೀಗೆ ಮುದುಕಿ ಇಡೀ ಮನೆಯನ್ನೇ ಸ್ವಚ್ಛ ಮಾಡಿದಳು, ಮನೆಯನ್ನು ಸ್ವಚ್ಛ ಮಾಡಿದ ಮುದುಕಿ ಕನ್ನಡಿಯಲ್ಲಿ ತನ್ನನ್ನು ತಾನು ಕಂಡಾಗ ಇಷ್ಟು ಸುಂದರವಾದ ಮನೆಯಲ್ಲಿ ತನ್ನಂತಹ ಕೊಳಕು ಮನುಷ್ಯರು ಇರಲು ಯೋಗ್ಯರಲ್ಲ ಎಂದು ಭಾವಿಸಿ ಬೇಗ ಹೋಗಿ ಸ್ನಾನ ಮಾಡಿ, ಶುದ್ದ ಬಟ್ಟೆ ಧರಿಸಿದಳು, ಸುಂದರವಾಗಿ ಶುಚಿಯಾಗಿ ಹೊರ ಬಂದ ಮುದುಕಿಗೆ ತನ್ನ ಮನೆ ಸುಂದರ ಕಂಡರೂ  ಅಕ್ಕ ಪಕ್ಕದವರ ಮನೆಯೆಲ್ಲ ಕೊಳಕಾಗಿ ಕಂಡು ಬಂದು ಬೇಸರಿಸದಳು,  ಆದರೆ ಮುದುಕಿಯ ಮನೆಯ ಅಕ್ಕ ಪಕ್ಕದಲ್ಲಿರುವ ಎಲ್ಲರಿಗೂ ಮುದುಕಿಯ ಅಂದವಾದ ಮನೆಯ ಪಕ್ಕದಲ್ಲಿ ಇರುವ ತಮ್ಮ ಮನೆ, ತಮ್ಮ ಮಕ್ಕಳು ಎಲ್ಲರೂ ಇಷ್ಟು ಕೊಳಕಾಗಿ ಇರುವುದು ಸರಿಯಲ್ಲವೆಂದು ತಕ್ಷಣ ಎಲ್ಲರೂ ತಮ್ಮ ತಮ್ಮ ಮನೆಯನ್ನು ಮನೆ ಮಂದಿಯರನ್ನು ಸ್ವಚ್ಚಗೊಳಿಸಿದರು, ಹೀಗೆ ನೋಡುತ್ತಿದ್ದಂತೆಯೇ ಸಂಪೂರ್ಣ ಕೇರಿಯೇ  ಶುದ್ದವಾಗಿ ರಾರಾಜಿಸತೊಡಗಿತು.
ಆ ನಂತರ ಮುದುಕಿ ಹಾಗು ಎಲ್ಲರೂ  ಸಂತೋಷದಿಂದ ಇರಲಾರಂಭಿಸಿದರು. 

(ಎಲ್ಲೋ  ಓದಿದ್ದು  ) ಈ  ಕಥೆಯ ಲೇಖಕರ ಬಗ್ಗೆ ಗೊತ್ತಿಲ್ಲ . 

ಹೂವೊಂದು ಅರಳಿತು



ಹೂವೊಂದು ಅರಳಿತು
ಜೀವನದ  ಸುಖವ
ಅನುಭವಿಸುತ ನಲಿಯಿತು

ಅವಳ ಜೀವನವು ಹಾಗೆಯೇ
ಹೂವಿನ ಪುಟ್ಟ ಬಾಳಿನಂತೆ
ಪರಿಮಳ ಬೀರುತ
ಸುಗಂಧ ಹಂಚುತ
ಸುಖಮಯ ಆಗಿತು ಅವಳ ಜೀವನ

ಆದರೆ ಬಂತು ಒಂದು ತಿರುವು
ಕಾಯಿಲೆಯ ಅರಿವು
ವೈಧ್ಯ ತಪಾಸಣೆ  ಮುಗಿದಿತ್ತು 
ಇರಲಿಲ್ಲ ಆ ಕಾಯಲೆಯ ವಿಚಾರ
ಕೇಳುತ್ತಲೇ ಆಘಾತವಾಯಿತು

ಶೋಕ ಸಂಕೋಚದಿಂದ
ಅವಳು ಮೌನಲಾದಳು
ಅವಳ ಮುಖ ಬಾಡಿತು
ನಾನು ಮೂಕನಾದೆ
ಇಬ್ಬರ ಕಣ್ಣಿನಿಂದ
ನೀರು ಸುರಿಯುತಿತ್ತು

ನಡೆಯುತ್ತಲೇ ಹೋಗುತ್ತಿದ್ದೆವು 
ರಸ್ತೆಯಲ್ಲಿ ಬರುವ ಹೋಗುವವರ
ಬಗ್ಗೆ ಎಂಥದು ಗೋಚರವಿಲ್ಲ
ಅವಳು ಮೌನ ,ನಾನು ಮೌನ

ಕಡೆಗೆ ನಾನೇ
ಮಾತನಾಡಲು ಪ್ರೇರೇಪಿಸಿದೆ
"ಹೋಗಲಿ ಬಿಡು,
ನಮ್ಮ ಕೈಯಲ್ಲಿ ಏನಿದೆ "
ಜೋರಾಗಿ ಅತ್ತಳು ,
"ನನಗೇಕೆ ಈ ಶಾಪ ,
ನಾನು ಯಾವಾಗಲು
ಯಾರದು ಹಾಳು ಬಯಸಿಲ್ಲ"

ನನ್ನ ಹೃದಯ ಕೂಗಿತು
ಹೇಗೆ ಅವಳಿಗೆ ಸಮಾಧಾನ ಹೇಳಲಿ
"ನಾನಿದ್ದೇನೆ ಅಲ್ಲ , ನೀನು ಚಿಂತಿಸ ಬೇಡ "
"ನೀ ನನ್ನನ್ನು ಬಿಡುವುದಿಲ್ಲವೇ ?
ನೀ ಹೇಗೆ ನನ್ನೊಟ್ಟಿಗೆ ಇರುವಿ"
"ಇಷ್ಟೇನಾ ನನ್ನನ್ನು ನೀ ತಿಳಿದಿದ್ದು
ಆ ವಿಚಾರ ಬೇಡ "

ಬೇಗನೆ ಸಮಯ ಕಳೆಯಿತು
ಅವಳ ಬಾಳು ಮುಗಿಯಿತು
ಅರಳಿದ ಹೂವಿನ ಬಾಳು ಮುಗಿಯಿತು
by ಹರೀಶ್ ಶೆಟ್ಟಿ, ಶಿರ್ವ

Kabir Doha (ಕಬೀರ ದೋಹ )

Kabir Doha

Jab Tun Aaya Jagat Mein, Log Hanse Tu Roye
Aise Karni Na Kari, Pache Hanse Sab Koye

ಅನುವಾದ : ಹರೀಶ್ ಶೆಟ್ಟಿ, ಶಿರ್ವ

ನೀನು ಜಗತ್ತಿಗೆ ಬಂದ ಸಮಯ,  ಅಳುತ್ತಿದೆ ನೀನು,  ಜನರು ನಗುತ್ತಿದ್ದರು 
ಅಂತಹ ಕಾರ್ಯ ಮಾಡ ಬೇಡ , ನೀನು ಹೋದ ನಂತರ ಪುನಃ ಅವರು ನಕ್ಕರು

Friday, July 29, 2011

ಎಲ್ಲಿದ್ದಿ ನೀ ಮಳೆರಾಯ ?

ಎಲ್ಲಿದ್ದಿ ನೀ ಮಳೆರಾಯ ?
ಕಾದು ಕಾದು ಸೋತು ಹೋದೆ
ಉರಿಯುತ್ತಿದೆ ನನ್ನ ಜೀವ ಬಿಸಿಲಿನ ತಾಪದಿಂದ
ನರಳುತ್ತಿದ್ದೇನೆ ನೀರಿನ ಕೊರತೆಯಿಂದ
ಎಲ್ಲಿದ್ದಿ ನೀ ಮಳೆರಾಯ ?
ಮೋಡಗಳು ಕೆಲವೊಮ್ಮೆ
ನಮ್ಮ ಕೀಟಲೆ ಮಾಡುತ್ತಿವೆ
ಬಂದು  ಬಂದು ಮುಖ ತೋರಿಸಿ ಓಡುತ್ತಿವೆ 
ಎಲ್ಲಿದ್ದಿ ನೀ ಮಳೆರಾಯ ?
ಭೂಮಿಯ ತ್ರಾಣ ಮುಗಿಯುತ್ತಿವೆ
ಒಣಗಿ ಒಣಗಿ ಕೊರಗುತ್ತಿವೆ 
ಹನಿ ಹನಿಗಾಗಿ ಕಾಯುತ್ತಿವೆ
ಎಲ್ಲಿದ್ದಿ ನೀ ಮಳೆರಾಯ ?
ಮರ ಗಿಡಗಳು ನನ್ನನ್ನು
ನೋಡಿ ನೋಡಿ ಕೂಗುತ್ತಿವೆ
ಆಹಾರ ಇಲ್ಲದೆ ಬಾಡುತ್ತಿವೆ
ಎಲ್ಲಿದ್ದಿ ನೀ ಮಳೆರಾಯ ?
ಮುದಿ ಕಣ್ಣುಗಳು ಆಕಾಶ ನೋಡುತ್ತಿವೆ
ಮಕ್ಕಳ ಮುಗ್ದ ದೃಷ್ಟಿ ನಿನ್ನನ್ನೇ ಕೇಳುತ್ತಿವೆ
ಬೇಗ ಬಾ ಮಳೆರಾಯ
ಎಲ್ಲಿದ್ದಿ ನೀ ಮಳೆರಾಯ ?
by ಹರೀಶ್ ಶೆಟ್ಟಿ , ಶಿರ್ವ 

Kabir Doha (ಕಬೀರ ದೋಹ )


Kabir Doha

Jyon Naino Mein Putli, Tyon Maalik Ghat Mahin
Moorakh Log Na Janhin, Baahar Dhudhan Jahin

ಅನುವಾದ : ಹರೀಶ್ ಶೆಟ್ತ್ತಿ, ಶಿರ್ವ

ಹೇಗೆ ನಯನದಲಿ ಪಾಪೆ, ಹಾಗೆ ದೇವರು ಮನದೊಳಗೆ
ಅಜ್ಞಾನಿ ಮಾನವನಿಗೆ ಅರಿವಿಲ್ಲ, ಹುಡುಕುವನು ಹೊರಗೆ 

Thursday, July 28, 2011

ಮುತ್ತಿನಂತ ಮಾತುಗಳು


ಕಪ್ಪೆಯ ಬೆಟ್ಟದ ತುದಿಗೆ ತಲುಪುವ ಸ್ಪರ್ಧೆ ಜರಗಿತು.
ಎಲ್ಲಾ ಕಪ್ಪೆಗಳು, ಇದು ಅಸಾಧ್ಯ ಎಂದು ಕೂಗಿದರು, ಆದರೆ ಒಂದು ಕಪ್ಪೆ ಬೆಟ್ಟದ ತುದಿಗೆ ತಲುಪಿತು.
ಹೇಗೆ?
ಅ ಕಪ್ಪೆ ಕಿವುಡ ಆಗಿತ್ತು.
*ನಕಾರಾತ್ಮಕ ಟೀಕೆ ಟೀಕೆ ಟಿಪ್ಪಣಿಗಳಿಗೆ ಕಿವುಡರಾಗಿ".
-------------------------------------------------
 
ಅಳಿಲು ಬೀಜವನ್ನು ಹೆಕ್ಕಿ ಮಣ್ಣಲ್ಲಿ ಮುಚ್ಚಿಟ್ಟು ನಂತರ ಮರೆತು ಹೋಗುವುದರಿಂದ ಈ ವಿಶ್ವದಲ್ಲಿ ಲಕ್ಷಾಂತರ ಮರಗಳು ಆಕಸ್ಮಿಕವಾಗಿ ಬೆಳೆಯುತ್ತದೆ,
"ಒಳ್ಳೆಯ ಕಾರ್ಯ ಮಾಡಿ ಹಾಗು ಮರೆತು ಬಿಡಿ" .
________________________________________________
ಅದು ನನ್ನ ,ಇದು ನಿನ್ನ , ನಮ್ಮದೇನೂ ಇಲ್ಲಿ ಇಲ್ಲ ಚಿನ್ನ
ಹೋದ ನಂತರ, ಉಳಿಯುವುದಿಲ್ಲ ಏನೂ ,ಎಲ್ಲವೂ ಸೇರುವುದು ಮಣ್ಣ

ಉಪದೇಶ



ಒಂದು ಊರಿನಲ್ಲಿ ಒಬ್ಬರು ಹೆಸರಾಂತ ಸನ್ಯಾಸಿ ಇದ್ದರು. ಒಂದು ದಿನ ಅವರಲ್ಲಿ ದೂರದಿಂದ ಒಂದು ಹೆಂಗಸು ತನ್ನ ೯ ವರ್ಷ ಮಗನ ಒಟ್ಟಿಗೆ ಬಂದಳು. ಅವಳು ಸನ್ಯಾಸಿಗೆ ನಮಸ್ಕರಿಸಿ 
" ಗುರುಗಳೇ ಈ ನನ್ನ ಮಗ ತುಂಬಾ ಸಿಹಿ ತಿನ್ನುತ್ತಾನೆ, ನೀವು ಏನಾದರೂ ಉಪಾಯ ತಿಳಿಸಿ".



ಸನ್ಯಾಸಿ ಸ್ವಲ್ಪ ಹೊತ್ತು ಮಗನನ್ನು ದಿಟ್ಟಿಸಿ ನೋಡಿ  " ಕಂದಾ, ನೀ ನನ್ನತ್ರ ೧೦ ದಿವಸ ನಂತರ ಬಾ, ನಾ ನಿನಗೆ ಉಪಾಯ ಹೇಳುತ್ತೇನೆ " ಎಂದು ಹೇಳಿದರು.



೧೦ ದಿವಸ ನಂತರ ಪುನಃ ತಾಯಿ/ಮಗ ಸನ್ಯಾಸಿಯಲ್ಲಿಗೆ  ಬಂದರು, ಆಗ ಸನ್ಯಾಸಿಯವರು "ಕಂದಾ ನೀನು ಇನ್ನು ಮೇಲೆ ಸಿಹಿ ತಿನ್ನುವುದನ್ನು ಬಿಟ್ಟು ಬಿಡು" ಎಂದರು. ಇದನ್ನು ಕೇಳಿ ತಾಯಿ  "ಗುರುಗಳೇ ಇದನ್ನು ಹೇಳಲು ನೀವು ನಮಗೆ ಇಷ್ಟು ದೂರದಿಂದ ಕರೆದಿರಲ್ಲ, ಮೊದಲೇ ಹೇಳಬಹುದಿತ್ತಲ್ಲವೇ" ಎಂದು ಕೋಪಿಸಿದರು.



ಆಗ ಸನ್ಯಾಸಿಯವರು "ತಾಯಿ, ನೀವು ಮೊದಲು ಬಂದಾಗ , ನಾನು ಸ್ವತಹ ತುಂಬಾ ಸಿಹಿ ತಿನ್ನುತಿದ್ದೆ, ಆಗ ನಾನು ಇವನಿಗೆ "ನೀನು ಸಿಹಿ ತಿನ್ನುವುದು ಬಿಟ್ಟು ಬಿಡು ಅಂತ ಹೇಗೆ ಹೇಳಲಿ". 



ನೀವು ಹೋದ ಮೇಲೆ ನಾ ಸ್ವತಹ ಸಿಹಿ ತಿನ್ನುವುದನ್ನು ಬಿಟ್ಟು ಬಿಡಲು ಪ್ರಯತ್ನಿಸಿದೆ ಹಾಗು ಸಿಹಿ ತಿನ್ನುವುದನ್ನು ಬಿಡಲು ನಾನು ಯಶಸ್ವಿಯು ಆದೆ.


ಈಗ ನಾನು ಯಶಸ್ವಿಯಾದ ಮೇಲೆ ಇವನು ಸಹ ಸಿಹಿ ತಿನ್ನುವುದನ್ನು ಬಿಟ್ಟು ಬಿಡ ಬಹುದೆಂಬ ವಿಶ್ವಾಸ ಆದ ಮೇಲೆ ಮೇಲೆ ಇವನಿಗೆ ಸಹ "ನೀನು ಸಿಹಿ ತಿನ್ನುವುದು ಬಿಟ್ಟು ಬಿಡು ಅಂತ ಹೇಳಿದೆ ತಾಯಿ".

(ಬೇರೆಯವರಿಗೆ ಉಪದೇಶ ನೀಡುವ ಮೊದಲು ಸ್ವಂತ ಅದನ್ನು ಸಾದಿಸಿ ನೋಡಬೇಕು)

(ಎಲ್ಲೊ ಕೇಳಿದ್ದು ) 

by ಹರೀಶ್ ಶೆಟ್ಟಿ ...ಶಿರ್ವ

ಜೀವನ ಒಂದು ರೈಲು ಗಾಡಿ


ಜೀವನ ಒಂದು ರೈಲು ಗಾಡಿ
ಸೋತಿದ್ದೇವೆ ಓಡಿ  ಓಡಿ

ಅಲ್ಲಿ ಇಲ್ಲಿ ಜನರೇ ಜನರು
ಪರಿಚಯದವರಲ್ಲ
ಆದರು ಪರಿಚಯದವರೇ

ಹರಟೆ,  ಗಲಾಟೆ,  ಹಾಸ್ಯ, ವ್ಯಂಗ
ಸ್ವಲ್ಪ ಸಮಯ ಎಲ್ಲರ ಸಂಗ
ಹಲವು ಮುಖಗಳು
ಅನೇಕ ವೇಷಗಳು
ಸಂತೋಷ, ವ್ಯಾಕುಲ, ಕೋಪ, ತಾಪ
ಅನಂತ ಭಾವನೆಗಳ ತರಂಗ

ಮನೆಯ ವಿಚಾರ
ಕೆಲಸದ ಒತ್ತಡ
ಫ್ಲಾಟು, ಪ್ಲಾನು, ಪ್ಲಾಟ್
ಅವರ ಹಣ , ಇವರ ಹಣ
ಕಳ್ಳತನ, ಬುದ್ದಿವಂತಿಕೆ,ಆಚಾರ,ವಿಚಾರ 
ಮಂದಿರ, ಮಸ್ಜಿದ್ , ಚರ್ಚು 
ಇಲ್ಲ ಕೆಲವರ ಪರ್ಸು

ಜೀವನ ಒಂದು ರೈಲು ಗಾಡಿ
ಸೋತಿದ್ದೇವೆ ಓಡಿ  ಓಡಿ
by ಹರೀಶ್ ಶೆಟ್ಟಿ, ಶಿರ್ವ

Kabir Doha (ಕಬೀರ ದೋಹ )

Kabir Doha

Kabira Kiya Kutch Na Hote Hai, Ankiya Sab Hoye
Jo Kiya Kutch Hote Hai, Karta Aur Koye

ಅನುವಾದ  : ಹರೀಶ್ ಶೆಟ್ಟಿ, ಶಿರ್ವ

ಕಬೀರ ಮಾಡಿದ ಏನು ಆಗುವುದಿಲ್ಲ , ಮಾಡದ ಆಗುವುದೆಲ್ಲ ..
ಏನೆಲ್ಲಾ ನಾ  ಮಾಡುವೆ, ಬೇರೆಯವರು ಮಾಡುವುದು ಎಲ್ಲ......

Wednesday, July 27, 2011

ಅಗಲಿಕೆ


ನಮ್ಮ ಪ್ರೇಮದ
ಕಥೆಯನ್ನು ಮುಗಿಸಿ ಹೋಗುವೆಯಾ ?
ತಾಳು, ಸ್ವಲ್ಪ ತಾಳು
ಹಾಳು ಮಾಡಬೇಡ
ನನ್ನ ಬಾಳು

ನಾವು ಕಂಡ ಆ ಕನಸು
ಇಷ್ಟು ಬೇಗನೆ ಮರೆತು ಹೋದೆಯಾ  ?
ನಮ್ಮ ಮರಳಿನ ಆ ಪುಟ್ಟ ಮನೆ
ಅದರಲ್ಲಿ ಕಂಡ ಸಂಸಾರ
ಮರೆತು ಹೋದೆಯಾ ?

ನಮ್ಮ ಪ್ರೀತಿ
ಎಲ್ಲಿ ನಮ್ಮ ಪ್ರೀತಿ?
ಎಲ್ಲಿ ನಮ್ಮ ಒಂದಾದ ಹೃದಯ?
ತಾಳಲಾರದ ನೋವನ್ನು ಕೊಟ್ಟು
ಹೊರಟು ಹೋಗುವೆಯಾ ?

ನನ್ನ ತನು ಮನದಲ್ಲಿ
ನೀನೇ ನೀನು
ನನ್ನ ಬದುಕಲ್ಲಿ
ಕೇವಲ ನೀನು
ನನ್ನನ್ನು ಕಣ್ಣಿರ ಸಾಗರದಲ್ಲಿ
ಮುಳುಗಿಸಿ ಹೋಗುವೆಯಾ ?

ನಾ ನಿನ್ನ ಅಗಲಿಕೆ
ಸಹಿಸಲಾರೆ
ನಿನ್ನನ್ನು ಬಿಟ್ಟು ಬದುಕಲಾರೆ
ಪ್ರೀತಿಯ ಈ ಪವಿತ್ರ ಬಂಧನವನ್ನು
ತೊರೆದು  ಹೋಗುವೆಯಾ ?
by ಹರೀಶ್ ಶೆಟ್ಟಿ, ಶಿರ್ವ

Kabir Doha (ಕಬೀರ ದೋಹ )



Kabir Doha

Kabira Garv Na Keejiye, Kaal Gahe Kar Kes
Na Jaane Kit Mare Hai, Kya Des Kya Pardesh

ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಕಬೀರ ಹೆಮ್ಮೆಯ ಪಡಬೇಡ, ಸಮಯದ ಹಿಡಿತ ಅಜ್ಞಾತ
ಯಾರಿಗೆ ಎಲ್ಲಿ ಮೃತ್ಯು ನೀಡುವನೋ, ದೇಶ ಪರದೇಶದ ಇಲ್ಲ ಜ್ಞಾತ  

Tuesday, July 26, 2011

ಗೌರವಾರ್ಪಣೆ


ಹನ್ನೆರಡು ವರ್ಷ ಕಳೆಯಿತು
ಕಾರ್ಗಿಲ್ ಯುದ್ದ ಆಗಿ
ಆದರು ನೆನಪು ಸಾಯಲಿಲ್ಲ
ತಾಯಿಯ ಕಂದ ಸತ್ತು ಅಮರನಾದ
ಆದರೆ ತಾಯಿಯ ಮಮತೆ ಸಾಯಲಿಲ್ಲ
ಅಕ್ಕಳ ತಮ್ಮ ಸತ್ತು ಶಹಿದನಾದ
ಆದರೆ ಅಕ್ಕಳ ಪ್ರೀತಿ ಸಾಯಲಿಲ್ಲ
ಹನ್ನೆರಡು ವರ್ಷ ಕಳೆಯಿತು
ಕಾರ್ಗಿಲ್ ಯುದ್ದ ಆಗಿ
ಆದರು ನೆನಪು ಸಾಯಲಿಲ್ಲ
ಕೋಟಿ ಕೋಟಿ ನಮಸ್ಕಾರ ಆ ವೀರರಿಗೆ
ಜೀವ ನೀಡಿದ ಆ ಹುತಾತ್ಮರಿಗೆ
ಸದೈವ ಜಯವಾಗಲಿ ನಮ್ಮ ಸೇನೆ ಹಾಗು ಸೈನಿಕರಿಗೆ 
ಜೈ ಹಿಂದ್
by .ಹರೀಶ್ ಶೆಟ್ಟಿ , ಶಿರ್ವ

ಮೊದಲ ಮಳೆ


ನನ್ನ ಜೀವನದ
ಮೊದಲ ಮಳೆ ನೆನಪಿದೆ
ಆ  ಅಮೋಘ ಕ್ಷಣಗಳು
ಆ  ಸಂತೋಷ, ಉಲ್ಲಾಸ
ಮಣ್ಣು ಬೀರುತ್ತಿರುವ
ಆ ಮಧುರ ಸುವಾಸನೆ ನೆನಪಿದೆ

ಮೋಡಗಳನ್ನು ನೋಡಿ 
ಜೋರಾಗಿ ಕೂಗುವ
ಚಂಡಿ ಪುಂಡಿಯಾಗಿ
ಅಲ್ಲಿ ಇಲ್ಲಿ ಕುಣಿಯುವ
ಆ ಆಟ ಓಟಗಳು ನೆನಪಿದೆ

ಕೋಗಿಲೆ ಕೂಗುತ್ತಿರುವ
ಅದ್ಭುತ ಗಾನ
ನಿಸರ್ಗದ ಸೌಂದರ್ಯ
ಅದ್ಭುತ ದೃಶ್ಯಗಳು
ಆ ಅಮೂಲ್ಯ ನೋಟ ನೆನಪಿದೆ

ನನ್ನ ಜೀವನದ
ಮೊದಲ ಮಳೆ ನೆನಪಿದೆ

ಎಲ್ಲಿ ಕಳೆದು ಕೊಂಡೆ
ಆ ಆನಂದ ಉಲ್ಲಾಸ
ಜೀವನದ ಕಣ್ಣಿರಿನ ಮಳೆಯಲ್ಲಿ
ಸೋರಿ ಹೋಯಿತೆ?
ಉಳಿದಿದೆ ಕೇವಲ
ಮೊದಲ ಮಳೆಯ ನೆನಪು
by  ಹರೀಶ್ ಶೆಟ್ಟಿ, ಶಿರ್ವ

Kabir Doha (ಕಬೀರ ದೋಹ )

Kabir Doha

Kabira Garv Na Keejiye, Uncha Dekh Aavaas
Kaal Paron Bhuin Letna, Ooper Jamsi Ghaas

ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಕಬೀರ ಹೆಮ್ಮೆಯ ಪಡಬೇಡ, ಎತ್ತರ ಭವನವ ನೋಡಿ....
ಸಾವು ಒಪ್ಪಿಸುವುದು ಮಣ್ಣ ಅಡಿ, ಮೇಲೆ ಬೆಳೆಯುವುದು ಹುಲ್ಲಿನ ಕಡ್ಡಿ ...

Monday, July 25, 2011

ಪ್ರೀತಿ

ನಿನಗೆ ಪ್ರೀತಿ ಇಲ್ಲ ನನ್ನಲ್ಲಿ
ನನಗೆ ದ್ವೇಷ ಇಲ್ಲ ನಿನ್ನಲ್ಲಿ
ಆದರು ಏನಾದರೂ ಒಂದು ದೂರು ಇರುತ್ತದೆ
ನಿನಗೆ ನನ್ನಲ್ಲಿ
ನನಗೆ ನಿನ್ನಲ್ಲಿ
----------------------------------
ಅವನ ಪ್ರೀತಿ ನಿನ್ನ ಅದೃಷ್ಟದಲ್ಲಿಲ್ಲ
ಹೋಗಲಿ ಬಿಡು
ಕೈಯ ರೇಖೆಯನ್ನು ಓದಬೇಡ
 ----------------------------------
ಪ್ರೀತಿಯ ನೈಜತೆಯ ಬಗ್ಗೆ ನನಗೆ ಅರಿವಿತ್ತು
ಆದರು ಸ್ವಲ್ಪ
ಹೃದಯ ತ್ಯಜಿಸುವ ಆಸಕ್ತಿ ಇತ್ತು
by ಹರೀಶ್ ಶೆಟ್ಟಿ, ಶಿರ್ವ

ಕನ್ನಡಿ

ಈ ಕನ್ನಡಿಯು ಕೆಲವು ಸಲ ಸುಳ್ಳು ಹೇಳುತ್ತದೆ
ನಗುವ ಮುಖವ ನೋಡಿ
ಹೃದಯದ ಮಾತನ್ನು ಹೇಳುತ್ತದೆ

ವಿರಹದ ದುಃಖದಲ್ಲಿದ್ದ  ನನ್ನ
ಸಪಾಟು ಕಣ್ಣನ್ನು ನೋಡಿ
ಅದರಲ್ಲಿ ಅಶ್ರು ಧಾರೆ ಹುಡುಕುತ್ತದೆ

ಗುರುತಿಸ ಬಾರದೆಂದು
ಗುಪ್ತವಾಗಿ ಅಡಗಿಸಿದ್ದೇನೆ ನನ್ನ ದುಃಖವನ್ನು
ಆದರು ನನ್ನ ಕಣ್ಣನ್ನು ನೋಡಿ
ನನ್ನ ಕಥೆಯನ್ನು ವರ್ಣಿಸುತ್ತದೆ

ತುಂಡು ತುಂಡು ಮಾಡುವೇ
ಈ ಕನ್ನಡಿಯನ್ನು
ನನ್ನ ಹೃದಯದ ವ್ಯಥೆಯನ್ನು
ಪುನಃ ಪುನಃ ನನಗೆ ತೋರಿಸುತ್ತದೆ

ಈ ಕನ್ನಡಿಯು ಕೆಲವು ಸಲ ಸುಳ್ಳು ಹೇಳುತ್ತದೆ
ನಗುವ ಮುಖವ ನೋಡಿ
ಹೃದಯದ ಮಾತನ್ನು ಹೇಳುತ್ತದೆ
by ಹರೀಶ್ ಶೆಟ್ಟಿ , ಶಿರ್ವ

Kabir Doha (ಕಬೀರ ದೋಹ )

Kabir Doha (ಕಬೀರ ದೋಹ )

Chinta Aisee Dakini, Kat Kaleja Khaye
Vaid Bichara Kya Kare, Kahan Tak Dawa Lagaye

ಅನುವಾದ : ಹರೀಶ್ ಶೆಟ್ಟಿ, ಶಿರ್ವ

ಚಿಂತೆ ಅಂತಹ ಡಕಾಯಿತ, ಕತ್ತರಿಸಿ ಮನಸ್ಸನ್ನು ತಿನ್ನುವನು...
ವೈದ್ಯ ಏನು ಮಾಡುವನು , ಎಲ್ಲಿಯವರಗೆ ಪರಿಹಾರ ನೀಡುವನು  ....

Sunday, July 24, 2011

ನಾನು ಯಾರು?


ಎಲ್ಲಿದ್ದೇನೆ ನಾನು? 
ಈ ಪ್ರಪಂಚದ ಕಾಡಿನಲ್ಲಿ
ನಾನು ಯಾರು ಎಂದು
ಗೊತ್ತು ನನಗೆ
ಆದರೆ ನನ್ನನ್ನೇ ನಾ ಅರಿಯಲು
ಅಸಮರ್ಥನಾಗಿದ್ದೇನೆ

ಮನಸ್ಸು ಇದ್ದರೆ ಮಾರ್ಗ ಇದೆ
ಎಂದು ಕೇಳಿದೆ
ಈ ಪ್ರಪಂಚದಲ್ಲಿ ಇದ್ದೇನೆ ನಾನು
ಆದರೆ ಈ ನುಡಿ ಮಾತನ್ನು ನಂಬಲು
ಅಸಮರ್ಥನಾಗಿದ್ದೇನೆ

ಅನ್ಯರ  ಬೇಜಾರವನ್ನು ಅರಿತು
ಮನಸ್ಸಿನಲ್ಲಿದ ಮಾತನ್ನು
ಹೇಳಲು ಹಿಂಜರಿಯುತ್ತೇನೆ 
ಈ ಪ್ರಪಂಚದ ಸಮಾರಂಭದಲ್ಲಿ
ಭಾಗವಹಿಸಲು
ಅಸಮರ್ಥನಾಗಿದ್ದೇನೆ

ನಾನು ಸಮಾಜದಿಂದ ಪ್ರತ್ಯೇಕವಾಗಿಲ್ಲ
ಎಲ್ಲ ಹತ್ತಿರವೇ ಇದ್ದಾರೆ
ಆದರು ಈ ಪ್ರಪಂಚದ ಕತ್ತಲೆಯಲ್ಲಿ
ಬೆಳಕಲು
ಅಸಮರ್ಥನಾಗಿದ್ದೇನೆ

ಜೀವ ಇದ್ದು ಜೀವ ಇಲ್ಲ
ನಾನು ಎಲ್ಲರ ಹಾಗೆ ಇಲ್ಲ
ನನ್ನನ್ನೇ  ನಾನು ಹುಡುಕಲು
ಅಸಮರ್ಥನಾಗಿದ್ದೇನೆ 
by ಹರೀಶ್ ಶೆಟ್ಟಿ, ಶಿರ್ವ

ಪರೀಕ್ಷೆ

ಜೀವನ ನಮ್ಮ
ಪರೀಕ್ಷೆ ತೆಗೆದುಕೊಳ್ಳುತ್ತದೆ
ಎಂದು ಕೇಳಿದೆ...
ಆದರೆ ಇಲ್ಲಿ ಕ್ಷಣ ಕ್ಷಣದ ಪರೀಕ್ಷೆಯು
ಜೀವನ ತೆಗೆದುಕೊಳ್ಳುತ್ತಿದೆ.
by ಹರೀಶ್ ಶೆಟ್ಟಿ, ಶಿರ್ವ

Kabir Doha (ಕಬೀರ ದೋಹ )

Kabir Doha (ಕಬೀರ ದೋಹ )

Akath Kahani Prem Ki, Kutch Kahi Na Jaye
Goonge Keri Sarkara, Baithe Muskae

ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಪ್ರೀತಿಯ ಕಥೆ ಅವ್ಯಕ್ತ......ಅದನ್ನು ಪದದಲ್ಲಿ ಹೇಳುವುದು ಹೇಗೆ ....
ನಗು ನಗುತ ಮೂಕ ತಿನ್ನುತ್ತಾನೆ ಸಿಹಿ ಮಾಂಸ.....ಅದರ ರುಚಿ ಅವನು ಹೇಳುವುದು ಹೇಗೆ ..

Saturday, July 23, 2011

ನಿಮ್ಮ ಹೊಸ ಗೆಳೆಯ

ಈ  ಲೋಕಕ್ಕೆ
ನಾ ಬೇಡದವನು
ಆದರೆ ಈ  ಲೋಕದಲ್ಲಿ
ಇರಲು  ಬಯಸುವೆ

ಎಲ್ಲರೂ ಇಲ್ಲಿ ಈ
ಲೋಕದವರೇ
ನಾ ಒಬ್ಬ ಪರದೇಶಿ
ಅವರಿಗೆ ನಾನು ಒಂದು
ವಿಚಿತ್ರ ಪ್ರಾಣಿ
ಅಲ್ಲಿಂದ ಇಲ್ಲಿ
ತಿರುಗಾಡುವವನು

ನೋಡುತ್ತಿದ್ದರೆ ಆಶ್ಚರ್ಯದಿಂದ
ಯಾವನೋ ಇವನು?
ನನ್ನ ಕಣ್ಣಿನ ಯಾಚನೆ
ಅವರಿಗೆ ಕಾಣಲಿಲ್ಲ
ಎಲ್ಲರೂ ವ್ಯಸ್ತವಾಗಿದ್ದರೆ
ನನ್ನನ್ನು ನೋಡಲು
ಅವರಿಗೆ ಸಮಯವಿಲ್ಲ

ನನಗೆ ಕೊಡಿ ಸ್ವಲ್ಪ ಆಶ್ರಯ
ಸ್ವಲ್ಪ ನಿಮ್ಮ ಪ್ರೀತಿಯ ಸಮಯ
ನಾನು ನಿಮ್ಮವನೇ
ನಿಮ್ಮ ಹೊಸ ಗೆಳೆಯ
by ಹರೀಶ್ ಶೆಟ್ಟಿ, ಶಿರ್ವ

ನೆನಪು

ಕಳೆದ ದಿನಗಳ ನೆನಪು
ಮಳೆಯ ಮೋಡದ ಹಾಗೆ
ಮನ ಮೋಹಿಸುತ್ತದೆ
ನಿನ್ನ ಮನೆಯ ಹಾದಿಯಲ್ಲಿ
ಬೀಸುತ್ತಿದ್ದ  ತಂಪು ತಂಗಾಳಿಯಂತೆ
-------------------------------
ನಿನ್ನನ್ನು ಮರೆಯಲು
ವರ್ಷ ವರ್ಷ ಬೇಕಾಯಿತು
ಆದರೆ ಬೇಜಾರ ಏಕಾಂತ ದಲ್ಲಿ
ಬರುತ್ತದೆ ನಿನ್ನ ನೆನಪು
by  ಹರೀಶ್ ಶೆಟ್ಟಿ, ಶಿರ್ವ

ಸಂಭಾಷಣೆ

ನನ್ನ ಮತ್ತು ಅವಳ
ಮಧ್ಯೆ ಇಲ್ಲ
ಕೆಲ ಕಾಲದಿಂದ ಸಂಭಾಷಣೆ
ಒಮ್ಮೆ ಮಾತನಾಡಲಿ
ಎಂದು ಹಾಕುತ್ತಿದೇನೆ
ಈಗ ದೇವರಿಗೆ ಪ್ರದಕ್ಷಿಣೆ
by ಹರೀಶ್ ಶೆಟ್ಟಿ , ಶಿರ್ವ

ಆಮೆ ಮತ್ತು ಮೊಲ


ಮೊಲ ಒಂದು
ಕಂಡಿತು  ಸ್ವಪ್ನ
ಅದರಲ್ಲಿ ಬಂದರು
ಪೂರ್ವಜರು
ಆಮೆಯನ್ನು ಸೋಲಿಸು
ಮರ್ಯಾದೆ ಉಳಿಸು
ಎಂದು ಬೇಡಿದರು
ಮೊಲಕ್ಕೆ ಆಯಿತು ಎಚ್ಚರಿಕೆ
ಆಮೆಯ  ಹೇಗೆ ಸೋಲಿಸುವುದು
ಎಂಬ ಚಿಂತೆ
ಆದರು ಹೋಗಿ
ಬೇಡಿತು ಅಮೆಯಲಿ
ನಿನ್ನ ನನ್ನ ಮದ್ಯೆ
ಪುನಃ ಓಟ ನಡೆಯಲಿ
ಯಾರು ಶ್ರೇಷ್ಠ
ಎಂದು ಸಿದ್ದವಾಗಲಿ
ಆದರೆ ಪರಿಸ್ತಿತಿ
ಈಗ ವಿಪರಿತ
ಆಮೆಗೆ ಈಗ
ತುಂಬಾ ಜಂಬ
ಮೊಲಕ್ಕೆ ಬುದ್ದಿ ಬಂದಿತ್ತು
ಆಮೆ ಮತ್ತು ಮೊಲದ 
ಓಟ ಪುನಃ ನಡೆಯಿತು 
ಆಮೆ ಈಗ ಸೋತಿತು
ಮೊಲ ಗೆಲುವುನಿಂದ ಕುಣಿಯಿತು
ಜಂಬ ಮಾಡಿ ತನ್ನ ಸ್ಥಿತಿ ಮರೆಯಬಾರದು
ಮಾಡಿದ ತಪ್ಪನ್ನು  ಪುನಃ ಮಾಡಬಾರದು
by ಹರೀಶ್ ಶೆಟ್ಟಿ, ಶಿರ್ವ

ವಿಚಾರವಂತರು

ವಿಚಾರವಂತರು ಬೇರೆಯವರ ಸುಲಭ ಪದದಲ್ಲಿ ಬರೆದ ವಿಚಾರವನ್ನು ಮೆಚ್ಚುವುದಿಲ್ಲ.....
ಕಠಿಣ ಪದದಲ್ಲಿ ಬರೆದ ವಿಚಾರದ ಗುಟ್ಟನ್ನು ಅರ್ಥ ಮಾಡುವುದರಲ್ಲಿ ಅವರಿಗೆ ಹೆಚ್ಚು ಆಸಕ್ತಿ............
by ಹರೀಶ್ ಶೆಟ್ಟಿ, ಶಿರ್ವ

Kabir Doha (ಕಬೀರ ದೋಹ )

Kabir Doha (ಕಬೀರ ದೋಹ )

Jeevat Samjhe Jeevat Bujhe, Jeevat He Karo Aas
Jeevat Karam Ki Fansi Na Kaati, Mue Mukti Ki Aas 

ಅನುವಾದ  : ಹರೀಶ್ ಶೆಟ್ಟಿ, ಶಿರ್ವ
ಜೀವಿತ ತಿಳಿಯುವುದು  , ಜೀವಿತ ಊಹಿಸುವುದು  , ಜೀವಿತ ಮಾಡುವುದು ಆಸೆ
ಜೀವಿತ ಕರ್ಮದ ಕಾರ್ಯವನ್ನು ನೆರೆವೇರಿಸಲಿಲ್ಲ , ಮಾಡುವುದೇಕೆ ಮುಕ್ತಿಯ ಆಸೆ  

Friday, July 22, 2011

ಮೋಹ ಮಾಯೆ ...

ಅಲ್ಲಿಂದಲೂ  ಬೇಡ ಇಲ್ಲಿಂದಲೂ  ಬೇಡ
ಎಲ್ಲಿಂದಲೂ ಬೇಡ
ನನಗೆ ನನ್ನದೇ ಸಾಕು

ದೂರದ ಬೆಟ್ಟದ
ನುಣ್ನು ವಸ್ತುಗಳಲ್ಲಿ
ನನಗಿಲ್ಲ ಇಷ್ಟ
ನನ್ನ ಪಾಲಿಗೆ ಬಂದ
ಸುಖ ದುಃಖಗಳೇ
ನನಗೆ ಸಾಕು

ಪರರ ಕ್ಷೆಮವೇ ನಾ ಬೇಡುವೇ
ಪರರ ಐಸ್ವರ್ಯದಲ್ಲಿ
ನನಗಿಲ್ಲ ಆಶೆ
ನನ್ನ ಚಿಕ್ಕ ಸಂಸಾರದ
ಬಾಳೆ ನನಗೆ ಸಾಕು

ಗೀತ ಸಾರವು ನನ್ನ
ಜೀವನದ ಆಧಾರ
ಎಲ್ಲವೂ ಇಲ್ಲೇ
ಉಳಿಯುವುದು
ಅದೇ ನಿರ್ಧಾರ
ಕೃಷ್ಣ ಹೇಳಿದ ಈ
ವಚನಗಳೇ ನನ್ನ
ಜೀವನ ಕಳೆಯಲು ಸಾಕು

ಏಕೆ ಈ ಮೋಹ ಮಾಯೆ
ಎಲ್ಲವೂ ಸಮ್ಮೋಹನ
ಇನ್ನು ಬೇಕು ಇನ್ನು ಬೇಕು
ಎಂದು ಹೇಳುತ್ತದೆ ಮನ
ಆದರೆ ನನಗೆ ಸಿಕ್ಕಿದ ಸುಖದ 
ನಿದ್ರೆಯೇ ನನಗೆ ಸಾಕು
by ಹರೀಶ್ ಶೆಟ್ಟಿ , ಶಿರ್ವ
 

Kabir Doha (ಕಬೀರ ದೋಹ )

Kabir Doha (ಕಬೀರ ದೋಹ )
Gur Dhobi Sikh Kapda, Saboo Sirjan Har
Surti Sila Pur Dhoiye, Nikse Jyoti Apaar
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಗುರು ಮಡಿವಾಳ ಶಿಷ್ಯ ಬಟ್ಟೆ,   ದೇವರ ನಾಮ ಸಾಬೂನು
ಮನಸ್ಸನ್ನು ಸ್ವಚ್ಛ ಮಾಡಿ,  ಬೆಳಗಿಸು ಸತ್ಯದ ಜ್ಯೋತಿಯನು 

Thursday, July 21, 2011

ಮರಳಿ ಬಾ ಒಡೆಯ

ಸೋತು ಹೋದವು ಕಣ್ಣುಗಳು
ನಿನ್ನನ್ನು ಕಾಯುತ  ಕಾಯುತ
ಮರಳಿ ಬಾ ಒಡೆಯ
ಕಣ್ಣಿರು ಸಹ ಈಗಿಲ್ಲ ಬಾಕಿ
by ಹರೀಶ್ ಶೆಟ್ಟಿ, ಶಿರ್ವ

ಬರ ಬೇಡ ನೀ

ಬರ ಬೇಡ ನೀ
ನನ್ನ ಜೀವನವ ಹಿಂತಿರುಗಿ
ಸೋತು ಹೋಗಿದ್ದೇನೆ ನಾ
ಮೊದಲೇ ಕೊರಗಿ ಕೊರಗಿ
by ಹರೀಶ್ ಶೆಟ್ಟಿ , ಶಿರ್ವ

ಏಕಾಂತ

ನಿನ್ನಿಂದ ಏನೂ
ಸಂಬಂವಿಲ್ಲ ಈಗ
ಆದರು ನಿನ್ನ ಪಾಲಿನ
ಹೆಚ್ಹಿನ ಸಮಯ
ಏಕಾಂತದಲ್ಲಿ  ಕಳೆಯುತ್ತೇನೆ
by ಹರೀಶ್ ಶೆಟ್ಟಿ, ಶಿರ್ವ

ಕ್ಷಮಿಸು ನನ್ನನ್ನು ಪ್ರಿಯೆ .....


ನನ್ನಲ್ಲಿಲ್ಲ ಆ ಭಾವನೆ
ನನ್ನನ್ನು ತಪ್ಪು ತಿಳಿಯಬೇಡ
ನಾನೇಕೆ ನಿನ್ನನ್ನು ದ್ವೇಷಿಸುವೆ
ನಿನ್ನಿಂದಲೇ ನನ್ನ ಈ ಜೀವನವಲ್ಲವೇ

ನಿನ್ನ ದ್ವೇಷ ನಾ ತಾಳಲಾರೆ
ನನ್ನಲ್ಲಿದ್ದ ನಿನ್ನ ಹೃದಯ ನಾ ಕೊಲ್ಲಲಾರೆ
ಕಣ್ಣಿರ ಸಾಗರದಲ್ಲಿ ನಾ ಮುಳುಗಿದ್ದೇನೆ
ನನ್ನನ್ನು ಹೊರ ತಂದು ರಕ್ಷಿಸು ಪ್ರಿಯೆ

ಜಗತ್ತನ್ನು ನಂಬಿ ವರುಷ ವರುಷದ
ಆತ್ಮಿಕ  ಸಂಬಂಧವನ್ನು  ಏಕೆ ತೊರೆಯುವೆ
ಮಾಡದ ಅಪರಾಧವನ್ನು ನಾ  ಒಪ್ಪಿಕೊಳ್ಳುವೆ
ಶಿಕ್ಷೆಗಾಗಿ ಶಿರ ಬಾಗಿ ನಿಂತಿದ್ದೇನೆ

ಇನ್ನು ಕೋಪ ಬೇಡ
ಸಂಬಂಧದ ದಾರ ಆತಿ ತೆಳು
ತುಂಡಾದರೆ  ಅದು ಪುನಹ ಒಂದಾಗದು
ಇನ್ನಾದರೂ ಕ್ಷಮಿಸು ನನ್ನನ್ನು ಪ್ರಿಯೆ
by .ಹರೀಶ್ ಶೆಟ್ಟಿ, ಶಿರ್ವ

Kabir Doha (ಕಬೀರ ದೋಹ )

Kabir Doha (ಕಬೀರ ದೋಹ )
Dukh Mein Simran Sab Kare, Sukh Mein Kare Na Koye
Jo Sukh Mein Simran Kare, Tau Dukh Kahe Ko Hoye

ಅನುವಾದ   : ಹರೀಶ್  ಶೆಟ್ಟಿ , ಶಿರ್ವ
ದುಃಖದಲ್ಲಿ ಎಲ್ಲರೂ ಪ್ರಾರ್ಥಿಸುವರು......ಸುಖದಲ್ಲಿ ಯಾರೂ ಇಲ್ಲ....
ಸುಖದಲ್ಲಿ ಯಾರು ಪ್ರಾರ್ಥಿಸುವರೋ.......ದುಃಖ ಅವರಿಗೆ ಬರುವುದಿಲ್ಲ ..

Wednesday, July 20, 2011

ಮುತ್ತು

ನನ್ನ ಕಣ್ಣಿರ ಆಯಿತು ಮುತ್ತು
ಅವಳ ಕೈಯ ಮದ್ಯೆ ಬಿದ್ದಾಗ
ಇಚ್ಛೆ ಅವಳ ಕಂಡಿತು ಸ್ಪಷ್ಟ
ಮುತ್ತು ಅಂದರೆ ಅವಳಿಗೆ ಇಷ್ಟ
by ಹರೀಶ್ ಶೆಟ್ಟಿ, ಶಿರ್ವ

ಬಳೆ.......

ಹುಡುಗಿಯರಿಗೆ ಪ್ರಿಯ ಬಳೆ
ಗೊಂಬೆ ಆಟಕ್ಕೆ ಬೇಕು ಬಳೆ
ಹೆಂಗಸರ ಪ್ರೀತಿಯು ಬಳೆ
ಶ್ರಿಂಗಾರಕ್ಕೆ ಬೇಕು ಬಳೆ
ಸಿಂಗರಿಸಲು ಸುಲಭ ಬಳೆ
ಮದುವೆಯ ಮೊದಲ ರಾತ್ರಿ
ತುಂಡು ತುಂಡು  ಬಳೆ
ಮನೆ ಕಾರ್ಯದಲ್ಲಿ
ಚೂರು ಚೂರು ಬಳೆ
ಒಂದು ಸಮಯ ಆ ದುಃಖದ
ಹೊಡೆಯುತ್ತಾಳೆ ಅವಳು ಬಳೆ
ಕೈಗೆ ಈಗ ಇಲ್ಲ ಬಳೆ
ಕಣ್ಣೀರು ಈಗ ಅವಳ ಬಳೆ
ಜೀವನ ಅವಳ ಒಂದು ಬಲೆ
by ಹರೀಶ್ ಶೆಟ್ಟಿ. ಶಿರ್ವ 

Kabir Doha (ಕಬೀರ ದೋಹ )

Kabir Doha (ಕಬೀರ ದೋಹ )
Pothi Padh Padh Kar Jag Mua, Pandit Bhayo Na Koye
Dhai Aakhar Prem Ke, Jo Padhe so Pandit Hoye

ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಪುಸ್ತಕ ಓದಿ ಓದಿ ನಿಧನ ಹೊಂದಿದರು.... ಪಂಡಿತ ಆಗಲಿಲ್ಲ ಯಾರು
ಪ್ರೀತಿ ಪ್ರೇಮದ ಎರಡಕ್ಷರ ಓದಿದರೆ ..... ಪಂಡಿತ ಆಗುವರು ಅವರು

Tuesday, July 19, 2011

ಜೀವನದ ಗಣಿತ


ಜೀವನದ ಮುಸ್ಸಂಜೆಯಲ್ಲಿ
ಯೋಚಿಸುತ್ತಿದ್ದೇನೆ ನಾನು
ನಾನು ಮಾಡಿದನ್ನು
ಎಷ್ಟು ಸರಿ, ಎಷ್ಟು ತಪ್ಪು
ಲೆಕ್ಕ ಹಾಕಲು ಹೋದೆ ನಾನು




ಜೀವನದ ಗಣಿತ ತಿಳಿಯದಾದೆ
ಸಂಬಂದ ಜೋಡಿಸಲು
ಅಹಂ ಕಳೆಯಲು
ಅಸಮರ್ಥನಾದೆ
ನಿರಾಶೆಯ ಭಾಗಾಕಾರದಿಂದ
ನಾ ಮುರಿದು ಹೋದೆ
ಕಷ್ಟವನ್ನು ಗುಣಿಸಿ ಗುಣಿಸಿ
ಸೋತು ಹೋದೆ

ಗುಲಾಬಿ ಹೂವಿನ ಎಸಳು

ಪುಸ್ತಕದ ಹಾಳೆಯನ್ನು
ತಿರುಗಿಸುತ್ತಾ ಇದ್ದಾಗಲೇ
ಸಿಕ್ಕಿತು ಒಂದು ಗುಲಾಬಿ ಹೂವಿನ ಎಸಳು
ಮನಸ್ಸಿನ ಒಂದು ಕೊಣೆಯಲ್ಲಿ
ಬಚ್ಚಿಟ್ಟಿದ ಆ ನೆನಪಿನ ನೋವು
ಪ್ರತ್ಯಕ್ಷವಾಗಿ ಆಯಿತು ಒದ್ದೆ  ಕಂಗಳು
by ಹರೀಶ್ ಶೆಟ್ಟಿ ,ಶಿರ್ವ

ಅಳಿಲು

ಶಾಲೆ ಮುಗಿದ ನಂತರ ರಮಾ  ಹಾಗು ಜಯಲಕ್ಷ್ಮಿ ಇಬ್ಬರು ಅವಸರ ಅವಸರವಾಗಿ ನಡೆದು ಕೊಂಡು ಮನೆಗೆ ಹಿಂತಿರುಗುತ್ತಿದ್ದರು.  ಬಿಸಿಲಿನ ತಾಪ ಹೆಚ್ಚಾಗಿತ್ತು, ಅದರ ಮೇಲೆ ಇಬ್ಬರಿಗೂ ತಡೆಯಲಾರದ ಹಸಿವೆ.

ಜಯಲಕ್ಷ್ಮಿ "ಒಹ್.... ಇವತ್ತು ಊಟದಲ್ಲಿ ಏನು ಇರುತ್ತದೋ  ...ತುಂಬಾ ಹಸಿವೆ ಆಗ್ತಾ ಇದೆ.

ರಮಾ   "ನಿನ್ನ ಗೊತ್ತಿಲ್ಲ , ಆದರೆ ನನ್ನ ಮನೆಯಲ್ಲಿ ದೊಡ್ಡ (ರಮಾಳ  ಅಜ್ಜಿ ) ಅದೇ ಗಂಜಿ ಮಾಡಿ ಇಟ್ಟಿರಬೇಕು, ಏನೇ ಇರಲಿ ಹಸಿವೆ ಆಗುವಾಗ  ಎಲ್ಲವೂ ನಡೆಯುತ್ತದೆ".

" ಏ ಜಯಲಕ್ಷ್ಮಿ  ...ಅಲ್ಲಿ ನೋಡು ಅಳಿಲು."......ರಮಾ   ಕಿರಿಚಿದಳು.

"ಒಹ್ .....ಎಷ್ಟು ಸುಂದರವಾಗಿದೆ......ಏ ರಮಾ ......ನೀ ಲಕ್ಕಿ ಕಣೋ ......ಇವತ್ತು ನಿನ್ನ ಮನೆಯಲ್ಲಿ ನಿನ್ನ ದೊಡ್ಡ ನಿನಗೆ ತಿನ್ನಲಿಕ್ಕೆ ಏನು ಸ್ಪೆಷಲ್ ಮಾಡಿರಬೇಕು....ನೋಡು..."

"ಅದು ಹೇಗೆ .....ನೀನು ಹೇಳುತಿರುವುದು" ಎಂದು ರಮಾ  ಕೇಳಿದಳು.

" ಅರೇ....ನಿನಗೆ ಗೊತ್ತಿಲ್ಲವೇ  ರಮಾ .......ಅಳಿಲನ್ನು ನೋಡಿದರೆ ತುಂಬಾ ಶುಭ ....ಇದನ್ನು  ಕಂಡರೆ  ತುಂಬಾ  ಅದೃಷ್ಟ......ಏನಾದರೂ ಒಳ್ಳೆ ಆಗುತ್ತದೆ, ಮನೆಗೆ ಹೋದ ನಂತರ, ನೀನು ಇದನ್ನು ನಂಬುವೆ "  ಎಂದು ಜಯಲಕ್ಷ್ಮಿ  ಹೇಳಿದಳು.

" ಹೌದೇ ......ಹಾಗಾದರೆ ದೊಡ್ಡ ಇವತ್ತು ಏನು ಮಾಡಿರ ಬೇಕು "  ಎಂದು ಹೇಳಿ  ರಸ್ತೆಯಲ್ಲಿ ಇದೇ ವಿಚಾರ ಮಾಡುತ ರಮಾ ಮನೆಗೆ ಮುಟ್ಟಿದಳು.

ಮನೆಗೆ ಬಂದ ನಂತರ ರಮಾ  " ದೊಡ್ಡ ...ಎನ್ಕ್ ಪಾಡ್ಲೆ" (ಅಜ್ಜಿ ....ನನಗೆ ಊಟ ಹಾಕು)

ಅದಕ್ಕೆ ದೊಡ್ಡ " ಪೋ ದುಂಬು ಕೈ ಕಾರ್ ದೆಕ್ಕದ್ದ್ ಬಲಾ" (ಹೋಗು ಮೊದಲು ಕೈ ಕಾಲು ತೊಳೆದು ಬಾ) ಎಂದು ಬೊಬ್ಬೆ ಹಾಕಿದರು.

ರಮಾ ಬೇಗನೆ ಕೈ ಕಾಲು ತೊಳೆದು ಬಂದು " ದೊಡ್ಡ ಇನಿ ಯಿನ ಮಲ್ದರ್" (ದೊಡ್ಡ ಇವತ್ತು ಏನು ಮಾಡಿದಿರಿ)"

"ಹಾಂ...... ಕುಲ್ಲು ದುಂಬು" (ಕೂತು ಕೊಳ್ಳು ಮೊದಲು) ಎಂದು ದೊಡ್ಡ  ಪಿರಿಪಿರಿ ನುಡಿಯುತ್ತ ಒಳಗೆ ಹೋಗಿ ಒಂದು ದೊಡ್ಡ ಪ್ಲೇಟ್ ಲ್ಲಿ  ಏನಾ  ತಂದರು.

ಪ್ಲೇಟ್ ಲ್ಲಿ ಇದ್ದ ಉಪ್ಪಿಟ್ಟು ನೋಡಿ ರಮಾಗೆ  ಖುಷಿಯೇ ಖುಷಿ.

"ಒಹ್.....ಜಯಲಕ್ಷ್ಮಿ ಹೇಳಿದ್ದು ಸರಿ " ಎಂದು ರಮಾ ಬಕ ಬಕ ಅಂತ ಪ್ಲೇಟ್ ನ್ನು ಖಾಲಿ ಮಾಡಿದಳು.
ಇದು ಆದ ನಂತರ ರಮಾ ಯಾವಾಗಲು ಶಾಲೆಯಿಂದ ಬರುವಾಗ ಎಲ್ಲೊ ಅಳಿಲು ಕಾಣುತ್ತದೆಯೋ ಎಂದು ನೋಡಿ ನೋಡಿ ಬರುತ್ತಿದ್ದಳು. :):):)

by ಹರೀಶ್ ಶೆಟ್ಟಿ, ಶಿರ್ವ

Kabir Doha (ಕಬೀರ ದೋಹ )

Kabir Doha (ಕಬೀರ ದೋಹ )
Kabir Man Nirmal Bhaya, Jaise Ganga Neer
Pache Pache Har Phire, Kahat Kabir Kabir
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಕಬೀರನ  ಮನಸ್ಸು ಪವಿತ್ರವಾಯಿತು, ಗಂಗೆ  ನೀರು ಸಮಾನ....
ಈಗ ಎಲ್ಲರೂ
ಹಿಂಬಾಲಿಸುವರು, ಹೇಳಿ ಕಬೀರ್ ಕಬೀರ್......

Monday, July 18, 2011

ಇದೇ ಪ್ರೀತಿಯೇ?


ಇದ್ದಕ್ಕಿದ್ದಂತೆ ಪುನಃ
ಭೇಟಿ ಆಯಿತು
ಅವಳೊಂದಿಗೆ
ಕಣ್ಣಲ್ಲಿ ನೀರಿನ ಮಳೆ
ತೆರೆದಂತಾಯಿತು
ಮುಚ್ಚಿಟ್ಟಿದ ಪುಸ್ತಕ ಹಳೆ
ಪ್ರೀತಿ ಪ್ರೇಮದ
ಆ ಮದುರ ಕ್ಷಣಗಳು
ಅವಳ ದ್ರೋಹ
ನನ್ನ ಮೋಹ
ಅವಳ ನಿರ್ಧಾರ
ನನ್ನ ವೇದನೆ 
ಜೀವನದ ಈ ತಿರುವು
ಅವಳ ಬೇಜಾರ 
ಅವಳ ಕ್ಷಮೆ
ನನ್ನ ವಿಶಾಲ ಮನಸ್ಸು
ನನ್ನ ಅವಳಿಗೆ ಸಾಂತ್ವನ
ಆದರೆ  ಪ್ರಶ್ನೆ ಒಂದು
ಮನದಲ್ಲಿ ಕಾಡುತ್ತಿತ್ತು
ಇದೇ ಪ್ರೀತಿಯೇ?
by ಹರೀಶ್ ಶೆಟ್ಟಿ, ಶಿರ್ವ

Kabir Doha (ಕಬೀರ ದೋಹ )

Kabir Doha (ಕಬೀರ ದೋಹ )
Kabira Khara Bazaar Mein, Mange Sabki Khair
Na Kahu Se Dosti, Na Kahu Se Bair
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಮಾರುಕಟ್ಟೆಯಲ್ಲಿ ನಿಂತು ಕಬೀರ,  ಎಲ್ಲರ ಕಲ್ಯಾಣ ಕೋರುವನು...
ಯಾರಿಂದಲೂ ಸ್ನೇಹವಿಲ್ಲ  , ಯಾರಿಂದಲೂ ಶತ್ರುತ್ವವಿಲ್ಲ...

Sunday, July 17, 2011

ಕಳೆದುಕೊಂಡ ಪ್ರೀತಿ

 



ನನ್ನ ಪಾಲಿನ
ಭೂಮಿಯೇ ಬಂಜರವಾಗಿತ್ತು
ನನಗೆ ಅರಿವಿರಲಿಲ್ಲ .....
ಬೇಕಂತಲೇ ನಾ
ಮಳೆಯನ್ನು
ನಿಂದಿಸುತ್ತಾ ಇದ್ದೆ...
(ಹಿಂದಿ ಶಾಯರ್ ಶಹರಿಯಾರ್ ಅವರ ಮೂಲ ಶಾಯರಿಯನ್ನು  ಕನ್ನಡದಲ್ಲಿ ಬರೆದದ್ದು )

Saturday, July 16, 2011

Kabir Doha (ಕಬೀರ ದೋಹ )

Kabir Doha    
Maya Mari Na Man Mara, Mar Mar Gaye Shareer
Asha Trishna Na Mari, Keh Gaye Das Kabir
ಅನುವಾದ :ಹರೀಶ್ ಶೆಟ್ಟಿ, ಶಿರ್ವ
ಭ್ರಮೆ ಸಾಯಲಿಲ್ಲ  ಮನಸ್ಸು ಸಾಯಲಿಲ್ಲ , ಸತ್ತು ಸತ್ತು ಹೋಯಿತು ಶರೀರ
ಆಶೆ, ಭಯಕೆ ಸಾಯಲಿಲ್ಲ ......ಹೇಳಿ ಹೋದರು ಸಂತ ಕಬೀರ

ನಾನು ಕವಿಯಲ್ಲ

ನಾನು ಕವಿಯಲ್ಲ
ಆದರೂ ಒಂದು ಕವಿತೆ ಬರೆದೆ
ಬರೆಯಲೆಂದು ಬರೆದೆ
ಎರಡು ಮೂರು ಪದಗಳ ಗೀಚಿದೆ
ಅದ್ದನ್ನೇ ಕೆಲವು ಸಲ ಓದಿದೆ
ಹಲವು ಸಮಯ ವ್ಯರ್ಥವಾಯಿತು
ಶಬ್ದಗಳನ್ನು ನೆನೆಯುತ ಸಂಜೆಯಾಯಿತು
ಕಡೆಗೆ ಹೇಗಾದರೂ ಪೂರ್ಣವಾಯಿತು
ನಾನು ಬರೆದ  ಪದಗಳು
ವಾಹ್....ಗುಲಾಬಿ ಹೂವಿನ  ಎಸಳುಗಳು
ಸುಂದರ ಮನಮೋಹಕ
ನನ್ನನು ನಾನೇ ಹೊಗಳಿದೆ
ಬರೆದ ನಂತರ ಆತುರ
ಯಾರಿಗೋ ತೋರಿಸಬೇಕೆಂಬ ಕುತೂಹಲ
ಅವರ ಪ್ರತಿಕ್ರಿಯೆ ಏನಿರಬಹುದೆಂಬ ತಳಮಳ
ನಾನು ಕವಿಯಲ್ಲ
ಆದರೂ ಒಂದು ಕವಿತೆ ಬರೆದೆ
 by ಹರೀಶ್ ಶೆಟ್ಟಿ , ಶಿರ್ವ

Thursday, July 14, 2011

Kabir Doha (ಕಬೀರ ದೋಹ )

Kabir Doha (ಕಬೀರ ದೋಹ )
Mangan Maran Saman Hai, Mat Koi Mange Beekh
Mangan Se Marna Bhala, Yeh Satguru Ki Seekh

ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಬೇಡುವುದು ಮರಣ ಸಮಾನ .........ಯಾರು ಮಾಡಬೇಡಿ ಬಿಕ್ಷಾಟನೆ
ಬೇಡುವುದರಿಂದ ಸಾಯುವುದು ಮೇಲು...... ಇದೇ ಸತ್ಗುರುಗಳ ಬೋಧನೆ.....

ಪ್ರೀತಿ ವಿಶ್ವಾಸ

ಪ್ರೀತಿ ವಿಶ್ವಾಸ ಇಲ್ಲದ ಸಂಬಂಧ.........ತೂತು ಇದ್ದ ನೀರಿನ  ಮಡಕೆಯಂತೆ ....
by  ಹರೀಶ್ ಶೆಟ್ಟಿ, ಶಿರ್ವ 

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...