Thursday, February 7, 2013

ಬೆಳಗುತ್ತಿದೆ ಯಾರಿಗಾಗಿ

ಬೆಳಗುತ್ತಿದೆ ಯಾರಿಗಾಗಿ
ನಿನ್ನ ಕಂಗಳ ಜ್ಯೋತಿ 
ಹುಡುಕಿ ತಂದಿರುವೆ ನಾನದೇ ಗೀತೆ ನಿನಗಾಗಿ

ನೋವಾಗಿ ನನ್ನ ಹೃದಯದಲಿ ಉಳಿದದ್ದು
ಮಾಯವಾಗಲಿಲ್ಲ 
ಮಾಯೆಯಂತೆ ನಿನ್ನ ಕಣ್ಣಲ್ಲಿ ನಿಂತೋಯಿತು
ತೆರಳಲಿಲ್ಲ
ಇಂದು ತಂದಿರುವೆ ನಾನದೇ ಗೀತೆ ನಿನಗಾಗಿ

ಹೃದಯದಲ್ಲಿಡು ಇದನ್ನು ಕೈಯಿಂದ ಇದು
ಇಳಿಯದಿರಲಿ 
ಗಾಜಿಗಿಂತ ನಾಜೂಕು ನನ್ನ ಗೀತೆ
ತುಂಡಾಗದಿರಲಿ 
ಗುನುಗುನಿಸುವೆ ನಾನಿದೇ ಗೀತೆ ನಿನಗಾಗಿ 

ಯಾವ ತನಕ ನಿನ್ನ ರಸ ತುಂಬಿದ ಅಧರದಿಂದ
ಇದು ಸ್ಪರ್ಶಿಸದೆ ಇದ್ದಲ್ಲಿ 
ಹೀಗೆಯೇ ಸೋಮಾರಿ ಅಲೆಯುವುದು
ಇದು ನಿನ್ನ ಕೇಶ ರಾಶಿಯ ಅಡಿಯಲ್ಲಿ 
ಹಾಡುತ್ತಿರುವೆ ಇದೇ ಗೀತೆ ನಾನು ನಿನಗಾಗಿ 

ಮೂಲ : ಮಜ್ರೂಹ್  ಸುಲ್ತಂಪುರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ 
ಹಾಡಿದವರು : ತಲತ್  ಮೆಹಮೂದ್ 
ಸಂಗೀತ : ಎಸ್. ಡೀ.  ಬರ್ಮನ್ 
ಚಿತ್ರ :ಸುಜಾತ 

Jalte hain jiske liye, teri aakhon ke diye,
Dhoond laya hoon wohi geet main tere liye

Dard ban ke jo mere dil mein raha dhal na saka
Jadu ban ke teri aankhon mein ruka chal na saka
Aaj laya hun wohi geet main tere liye

Dil main rakh lena ise haathon se ye chhoote na kahin,
Geet naazuk hai mera sheeshe se bhi toote na kahin
Gungunaaoonga yehi geet main tere liye

Jab talak na yeh tere ras ke bhare honton se mile,
Yunhi aawara phirega yeh teri zulfon ke tale
Gaaye jaaoonga yehi geet main tere liye

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...