ಬಣ್ಣ ಬಣ್ಣದ ಲೋಕವ ಕಂಡು
ಕಪ್ಪು ಮಸಿಯನ್ನು ಬಿಸಾಕಿ
ತನ್ನದೇ ಮುಖ
ಕಪ್ಪು ಮಾಡಿ
ಏನು ಪ್ರಯೋಜನ !
ಪರರ ಅಲಂಕಾರವನ್ನು ಕಂಡು
ಹೊಟ್ಟೆಕಿಚ್ಚು ಪಟ್ಟು
ತನ್ನ ಹೃದಯದ ಅಗ್ನಿ ಜ್ವಾಲೆಯಲ್ಲಿ
ಸ್ವತ ಸುಟ್ಟು
ಏನು ಪ್ರಯೋಜನ !
ಪರರ ಜ್ಞಾನವನ್ನು
ಕೀಳ ದೃಷ್ಟಿಯಿಂದ ನೋಡಿ
ಹೃದಯ ಬೇಗುದಿ ಹೊರ ತಂದು
ತನ್ನ ಮಾನ ಕಳೆದು
ಏನು ಪ್ರಯೋಜನ !
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment