ಆಕಾಶದ ದ್ವಾರ ತೆರೆದು
ರವಿ ಹೊರ ಬಂದು ಹರಡುತ್ತಿದ್ದಾನೆ
ತನ್ನ ಕಿರಣಗಳನ್ನು ಹರ್ಷದಿಂದ!
ಕತ್ತಲ ನಿಲುವಂಗಿ ತೊರೆದು
ಧರೆ ಹೊಸ ಬೆಳಕು ಪಡೆದು
ಮೆರೆದಾಡುತ್ತಿದೆ ಹೆಮ್ಮೆಯಿಂದ!
ಮುಂಜಾನೆ ಆಯಿತು
ತಾವರೆ ತೆರೆಯುತ್ತಿದೆ
ತನ್ನ ದಳಗಳನ್ನು ನೆಮ್ಮದಿಯಿಂದ !
ಮುದುಡಿದ ತಾವರೆ
ಪಕಳೆ ತೆರೆದು ಅರಳಿತು
ಪರಿಸರ ಮೆರೆಯಿತು ಸೌಂದರ್ಯದಿಂದ !
ಮಂದ ಮಂದ ಶಾಂತ ಸರೋವರ
ಸಪ್ತ ಬಣ್ಣದ ಬಟ್ಟೆ ಧರಿಸಿ ಹೊರಡುತ್ತಿದೆ
ಹರಿಯಲು ಆನಂದ ಉಲ್ಲಾಸದಿಂದ !
ಅನೇಕ ಆಸೆ ಆಕಾಂಕ್ಷೆಗಳನ್ನು ಜನಿಸಿ
ತಾವರೆಯ ಎಸಳು ಹೊಳೆಯುತ್ತಿದೆ
ಬೆಳಿಗ್ಗೆಯ ಸೂರ್ಯ ಕಿರಣದಿಂದ !
by ಹರೀಶ್ ಶೆಟ್ಟಿ, ಶಿರ್ವ
ರವಿ ಹೊರ ಬಂದು ಹರಡುತ್ತಿದ್ದಾನೆ
ತನ್ನ ಕಿರಣಗಳನ್ನು ಹರ್ಷದಿಂದ!
ಕತ್ತಲ ನಿಲುವಂಗಿ ತೊರೆದು
ಧರೆ ಹೊಸ ಬೆಳಕು ಪಡೆದು
ಮೆರೆದಾಡುತ್ತಿದೆ ಹೆಮ್ಮೆಯಿಂದ!
ಮುಂಜಾನೆ ಆಯಿತು
ತಾವರೆ ತೆರೆಯುತ್ತಿದೆ
ತನ್ನ ದಳಗಳನ್ನು ನೆಮ್ಮದಿಯಿಂದ !
ಮುದುಡಿದ ತಾವರೆ
ಪಕಳೆ ತೆರೆದು ಅರಳಿತು
ಪರಿಸರ ಮೆರೆಯಿತು ಸೌಂದರ್ಯದಿಂದ !
ಮಂದ ಮಂದ ಶಾಂತ ಸರೋವರ
ಸಪ್ತ ಬಣ್ಣದ ಬಟ್ಟೆ ಧರಿಸಿ ಹೊರಡುತ್ತಿದೆ
ಹರಿಯಲು ಆನಂದ ಉಲ್ಲಾಸದಿಂದ !
ಅನೇಕ ಆಸೆ ಆಕಾಂಕ್ಷೆಗಳನ್ನು ಜನಿಸಿ
ತಾವರೆಯ ಎಸಳು ಹೊಳೆಯುತ್ತಿದೆ
ಬೆಳಿಗ್ಗೆಯ ಸೂರ್ಯ ಕಿರಣದಿಂದ !
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment