Monday, April 23, 2012

ಅವನು

ಜ್ಞಾನದ ಮಾತು ನುಡಿದು
ಜೀವನದ ಪಾಠ ತಿಳಿಸಿ
ಇದ್ದಕ್ಕಿದ್ದಂತೆ ಹೇಳದೆ ಕೇಳದೆ
ಮಾಯವಾದ ಅವನು!

ಬೆರಳ ಹಿಡಿದು ನನ್ನ
ನಡೆಯಲು ಕಲಿಸಿದ
ಕೊಂಚ ದೂರ ನಡೆಯುತ್ತಲೇ
ಮರೆಯಾದ ಅವನು !

ನನ್ನ ಕಣ್ಣೀರ ಒರೆಸಿ
ನನ್ನನ್ನು ನಗಿಸಿದ
ಸಂತೋಷದಿಂದ ಅಟ್ಟ ಹಾಸ ಮಾಡುತ್ತಲೇ
ಕಣ್ಮರೆಯಾದ ಅವನು !

ಈಗ ಅಪೂರ್ಣ ನನ್ನ ಕಾವ್ಯ
ನಾನು ಗುರು ಇದ್ದು ಇಲ್ಲದ ಏಕಲವ್ಯ
ನಡು ಮಾರ್ಗದಲ್ಲಿ ನನ್ನನ್ನು ಅನಾಥ ಮಾಡಿ 
ಬಿಟ್ಟು ಹೋದ ಅವನು!
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...