Wednesday, April 25, 2012

ಕೆಲವೊಮ್ಮೆ


ಕೆಲವೊಮ್ಮೆ ನನ್ನ ಮನಸ್ಸಲ್ಲಿ
ಈ ವಿಚಾರ ಬರುತ್ತದೆ
ಅಂದರೆ ನಿನ್ನನ್ನು ರಚಿಸಿದ್ದಾರೆ
ಕೇವಲ ನನಗೋಸ್ಕರ ಎಂದು
ನೀ ಮೊದಲೆಲ್ಲೋ ನಕ್ಷತ್ರದಲ್ಲಿ ವಾಸಿಸುತ್ತಿದ್ದೆ  ಎಂದು
ನಿನ್ನನ್ನು ಕರೆದಿದ್ದಾರೆ ಕೇವಲ ನನಗೋಸ್ಕರ ಎಂದು !

ಕೆಲವೊಮ್ಮೆ ನನ್ನ ಮನಸ್ಸಲ್ಲಿ
ಈ ವಿಚಾರ ಬರುತ್ತದೆ
ಈ ಶರೀರ ಈ ನಯನ
ಕೇವಲ ನನ್ನ ಠೇವಣಿ ಎಂದು
ನಿನ್ನ ಕೇಶದ ಮೃದು ಛಾಯೆ
ಕೇವಲ ನನಗೋಸ್ಕರ ಎಂದು
ಈ ತುಟಿ ಈ ಆಲಿಂಗನ
ಕೇವಲ ನನ್ನ ಠೇವಣಿ ಎಂದು !

ಕೆಲವೊಮ್ಮೆ ನನ್ನ ನನ್ನ ಮನಸ್ಸಲ್ಲಿ
ಈ ವಿಚಾರ ಬರುತ್ತದೆ
ಶೆಹನಾಯಿ ವಾದನದಂತೆ
ನುಡಿಯುತ್ತಿದೆ ಪಥದಲ್ಲಿ ಎಂದು
ಮಧುಚಂದ್ರದಲಿ ನಿನ್ನ ಮುಖದಿಂದ 
ಸೀರೆಯ ಸೆರಗನ್ನು ತೆರೆಯುತ್ತಿದ್ದೇನೆ ಎಂದು
ಲಜ್ಜೆಯಿಂದ ನಿನ್ನ ಮುಖ ಕೆಂಪೇರಿ
ನೀನು ಮೈ ಮರೆಯುವೆ ಎಂದು !

ಕೆಲವೊಮ್ಮೆ ನನ್ನ ನನ್ನ ಮನಸ್ಸಲ್ಲಿ
ಈ ವಿಚಾರ ಬರುತ್ತದೆ
ನೀ ನನ್ನನ್ನು ಹೀಗೆಯೇ ಪ್ರೀತಿಸುತ್ತಿರುವೆ
ಜೀವನ ಪರ್ಯಂತ ಎಂದು
ನಿನ್ನ ಪ್ರೇಮ ದೃಷ್ಟಿ ಹೀಗೆಯೇ
ಬೀಳುತ್ತಿರುತ್ತದೆ ನನ್ನ ಮೇಲೆ ಎಂದು
ನನಗೆ ಗೊತ್ತು ನೀ ನನ್ನವಳಲ್ಲ ಎಂದು

ಆದರೂ ಕೆಲವೊಮ್ಮೆ......

ಮೂಲ ರಚನೆ :ಸಾಹಿರ್  ಲುದ್ಯಾನ್ವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಚಿತ್ರ : ಕಭಿ ಕಭಿ

कभी कभी मेरे दिल में ख्याल आता है
कि जैसे तुझको बनाया गया है मेरे लिए
तू अबसे पहले सितारों में बस रही थी कहीं
तुझे ज़मीन पे बुलाया गया है मेरे लिए .

कभी कभी मेरे दिल में ख़याल आता है
कि ये बदन ये निगाहें मेरी अमानत हैं
ये  गेसुओं कि घनी छाओं है मेरी खातिर
ये होंठ और ये बाहें मेरी अमानत हैं .

कभी कभी मेरे दिल में ख़याल आता है
कि जैसे बजती है शहनाइयां सी राहों में
सुहाग रात है घूंघट उठा रहा हूँ मैं
सिमट रही है तू शर्मा के अपनी बाहों में .

कभी कभी मेरे दिल में ख़याल आता है .
कि जैसे तू मुझे चाहेगी उम्र भर यूँ ही
उठेगी मेरी तरफ  प्यार कि नज़र यूँ ही
मैं जानता हूँ कि तू गैर है मगर यूँ ही

 
कभी कभी मेरे दिल में ख़याल आता है.
ಮೂಲ ರಚನೆ :ಸಾಹಿರ್  ಲುದ್ಯಾನ್ವಿ ಚಿತ್ರ : ಕಭಿ ಕಭಿ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...