Sunday, April 22, 2012

ಗೋಳಿ ಬಜೆ

ಆ ದಿವಸ ನಾನು ನನ್ನ ಮಡದಿ ಸರಿತಾ ಹಾಗು ಮಗ ಸಾಯೀಶ್ ಜೊತೆ ಉಡುಪಿ ಪೇಟೆಗೆ ಹೋಗಿದ್ದೆವು. ಅಲ್ಲಿ ನನಗೆ ರೈಲ್ವೆ ನಿಲ್ದಾಣದಲ್ಲಿ ಸ್ವಲ್ಪ ಕೆಲಸ ಇತ್ತು ಹಾಗು ಸರಿತಾಳಿಗೆ ಸ್ವಲ್ಪ ವಸ್ತು ಖರೀದಿ ಸಹ ಮಾಡಲಿಕ್ಕೆ ಇತ್ತು  .

ಮಧ್ಯಾಹ್ನದ ಬಿಸಿಲಲ್ಲಿ ನಾವು ಶಾಪಿಂಗ್ ಮಾಡುತ  ಮಾಡುತ ಸೋತು ಹೋಗಿದ್ದೆವು.  ಹೋಟೆಲ್ ಹೋಗಿ ಚಾಹ  ತಿಂಡಿ ಮಾಡಿದು ಆಯಿತು. ಮನೆಯಲ್ಲಿ ಸರಿತಾಳ  ತಾಯಿ ಹಾಗು ಅವಳ ದೊಡ್ಡ (ಅಜ್ಜಿ)ಗೋಸ್ಕರ ಗೋಳಿ ಬಜೆ (ಮಂಗಳೂರು  ಪ್ರಸಿದ್ದ ಮೈದಾ ಹಿಟ್ಟಿಗೆ ಮಜ್ಜಿಗೆ, ಸೋಡಾ, ಉಪ್ಪು, ಖಾರ ಬೆರೆಸಿ ಎಣ್ಣೆಯಲ್ಲಿ ಕರಿದ ತಿಂಡಿ)  ಪ್ಯಾಕ್ ಮಾಡಿಸಿ ನಾನು ಸರಿತಾ ಹಾಗು ಸಾಯೀಶ್ ಇಬ್ಬರನ್ನು ಕಟಪಾಡಿ ಹೋಗುವ ಬಸ್ಸಲ್ಲಿ ಸೀಟ್ ಮಾಡಿ ಕೊಟ್ಟು  ನಾನು ರೈಲ್ವೆ ನಿಲ್ದಾಣ ಹೋಗಿ ಕೆಲಸ ಮುಗಿಸಿ ನಂತರ ಬರುತ್ತೇನೆಂದು ಅವರಿಗೆ ಹೇಳಿದೆ.

ಮಧ್ಯಾಹ್ನದ ಉರಿ ಬಿಸಿಲ ಕಾರಣ ಬಸ್ಸಲ್ಲಿ ಕುಳಿತಿದ್ದ ಎಲ್ಲ ಜನರ ಮುಖ ಸೋತು ಬಾಡಿ ಹೋಗಿತ್ತು. ನಾನು ಬಸ್ಸಿಂದ ಕೆಳಗೆ  ಬಂದು " ಓಕೆ ಬೈ " ಎಂದು ಹೇಳುವಾಗ, ನನ್ನ ಮಗ ಸಾಯೀಶ್ ಜೋರಿನಿಂದ  " ಪಪ್ಪಾ ಉಂದು ಗೋಳಿ ಬಜೆ ಮಸ್ತ್ ಬೆಚ್ಚ ಉಂಡು" (ಪಪ್ಪಾ ಈ ಗೋಳಿ ಬಜೆ ತುಂಬಾ ಬಿಸಿ ಇದೆ ) ಎಂದು ಹೇಳಿದ.

ಸಾಯೀಶ್ ನ ಮಾತು ಕೇಳಿ ಬಸ್ಸಲಿ ಬಾಡು ಮುಖ ಮಾಡಿ ಕುಳಿತಿದ್ದ  ಎಲ್ಲ ಜನರು ಒಮ್ಮೆಲೇ ನಕ್ಕಿದೆ ನಕ್ಕಿದು ಹಾಗು ನನಗೂ ನಗೆ ತಡೆಯಲಾಗಲಿಲ್ಲ.

by ಹರೀಶ್ ಶೆಟ್ಟಿ, ಶಿರ್ವ
  

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...