Sunday, April 15, 2012

ಗಾಳಿ

ಅಲ್ಲಿ ಇಲ್ಲಿ
ಅಲ್ಲಲ್ಲಿ ಎಲ್ಲೆಲ್ಲಿ
ನಾನು ಗಾಳಿ !

ನನಗಿಲ್ಲ ತಡೆ
ತಿರುಗುವೆ ಎಲ್ಲ ಕಡೆ
ನಾನು ಎಲ್ಲೆಡೆ !

ನನಗಿಲ್ಲ ಭಯ
ನನಗಿಲ್ಲ ಸಮಯ
ನಾನು ಅಭಯ !

ನನಗಿಲ್ಲ ಊರು ಕೇರು
ನನಗಿಲ್ಲ ಪುರ ಪಟ್ಟಣ
ನಾನು ಹೋದಲ್ಲಿ ಪ್ರಯಾಣ !

ನನಗಿಲ್ಲ ಮನೆ ಮಠ
ನನಗಿಲ್ಲ ಸ್ಥಿರ ನಿವಾಸ
ನಾನು ಅಲೆಮಾರಿ !

ನನಗಿಲ್ಲ ವ್ಯಥೆ ಚಿಂತೆ
ನನಗಿಲ್ಲ ಆಸೆ ಆಕಾಂಕ್ಷೆ
ನಾನು ನಿಶ್ಚಿಂತ !

ನನಗಿಲ್ಲ ದಿನ ರಾತ್ರಿ
ನನಗಿಲ್ಲ ನಿದ್ರೆ ಆಲಸ್ಯ
ನಾನು ಶಾಶ್ವತ ಯಾತ್ರಿ !
by ಹರೀಶ್ ಶೆಟ್ಟಿ, ಶಿರ್ವ



No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...