ನನ್ನ ಹೃದಯ
ಮಣ್ಣಿನ ಹಣತೆ
ಅದರಲ್ಲಿ ಪ್ರೀತಿಯ ದೀಪ
ಹಚ್ಚಿ ಹೋಗದಿರು
ದುಃಖದ ಗಾಳಿಯಿಂದ ನಂದಿ ಹೋಗುವೆ!
ನನ್ನ ಹೃದಯ
ಕಮಲದ ಹೂವು
ಪ್ರೇಮದ ಸೂರ್ಯ ಕಿರಣ
ಹರಡಿ ಹೋಗದಿರು
ಅಗಲಿಕೆಯ ಅಂಧಕಾರದಲ್ಲಿ ಮುಚ್ಚಿ ಹೋಗುವೆ!
ನನ್ನ ಹೃದಯ
ರಾತ್ರಿಯ ತಮಸ್ಸು
ಹುಣ್ಣಿಮೆ ಚಂದ್ರನ ಅನುರಾಗ ಬೆಳಕು
ಬೀರಿ ಹೋಗದಿರು
ಅಮಾವಾಸ್ಯೆಯ ಕತ್ತಲಲ್ಲಿ ಮರೆಯಾಗಿ ಹೋಗುವೆ !
ನನ್ನ ಹೃದಯ
ಹಳೆ ಗುಡಿ
ದೇವಿಯಾಗಿ ಸ್ತಾಪಿತವಾಗಿ ಪ್ರೇಮ ಪ್ರಸಾದ
ನೀಡಿ ಹೋಗದಿರು
ನಿನ್ನ ಅನುಗ್ರಹವಿಲ್ಲದೆ ಕೊರಗಿ ಹೋಗುವೆ !
by ಹರೀಶ್ ಶೆಟ್ಟಿ, ಶಿರ್ವ
ಮಣ್ಣಿನ ಹಣತೆ
ಅದರಲ್ಲಿ ಪ್ರೀತಿಯ ದೀಪ
ಹಚ್ಚಿ ಹೋಗದಿರು
ದುಃಖದ ಗಾಳಿಯಿಂದ ನಂದಿ ಹೋಗುವೆ!
ನನ್ನ ಹೃದಯ
ಕಮಲದ ಹೂವು
ಪ್ರೇಮದ ಸೂರ್ಯ ಕಿರಣ
ಹರಡಿ ಹೋಗದಿರು
ಅಗಲಿಕೆಯ ಅಂಧಕಾರದಲ್ಲಿ ಮುಚ್ಚಿ ಹೋಗುವೆ!
ನನ್ನ ಹೃದಯ
ರಾತ್ರಿಯ ತಮಸ್ಸು
ಹುಣ್ಣಿಮೆ ಚಂದ್ರನ ಅನುರಾಗ ಬೆಳಕು
ಬೀರಿ ಹೋಗದಿರು
ಅಮಾವಾಸ್ಯೆಯ ಕತ್ತಲಲ್ಲಿ ಮರೆಯಾಗಿ ಹೋಗುವೆ !
ನನ್ನ ಹೃದಯ
ಹಳೆ ಗುಡಿ
ದೇವಿಯಾಗಿ ಸ್ತಾಪಿತವಾಗಿ ಪ್ರೇಮ ಪ್ರಸಾದ
ನೀಡಿ ಹೋಗದಿರು
ನಿನ್ನ ಅನುಗ್ರಹವಿಲ್ಲದೆ ಕೊರಗಿ ಹೋಗುವೆ !
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment