ಇನ್ನೊಂದು ಜೀವನ
ನನ್ನ ಭಾವನೆಯ ಒಸರಿಂದಾಗಿದೆ
ನನ್ನ ಕಾವ್ಯ
ಭೂಮಿಯಲಿ ವಸಂತದ ಹಸಿರು!
ನನ್ನ ಕಲ್ಪನೆಯ ಓಟದಿಂದಾಗಿದೆ
ನನ್ನ ರಚನೆಯ
ಕಣಕಣದಲ್ಲಿ ಹೊಸತನದ ಉಸಿರು!
ನನ್ನ ಪದಗಳ ಚೆಂದದಿಂದಾಗಿದೆ
ನನ್ನ ಕವಿತೆಯಲಿ
ನನ್ನದೇ ಶೈಲಿಯ ನೆರಳು!
ನನ್ನ ಬರವಣಿಗೆಯ ಆಸಕ್ತಿಯಿಂದಾಗಿದೆ
ನನ್ನ ಈ ಇನ್ನೊಂದು ಜೀವನ
ಸಾಹಿತ್ಯ ಲೋಕದಲಿ ಸಣ್ಣ ಹರಳು!
by ಹರೀಶ್ ಶೆಟ್ಟಿ , ಶಿರ್ವ
No comments:
Post a Comment