Thursday, April 5, 2012

ಪ್ರೀತಿಯ ಆ ದಿನ

ಆ ದಿನಗಳು ಎಷ್ಟು ಚಂದ
ಮಧ್ಯಾಹ್ನದ ಉರಿ ಬಿಸಿಲಲ್ಲಿ
ನೀನು ಬಂದು ಮಾವಿನ ಮರದ
ಹಠಮಾರಿ ಛಾಯೆಯಲಿ
ನನ್ನನ್ನು ಕಾಯುತ ಕುಳಿತು ಕೊಳ್ಳುತ್ತಿದ್ದೆ!

ನಾನು ನನ್ನ ನಿತ್ಯ ಸ್ವಭಾವದಂತೆ
ವಿಳಂಬವಾಗಿ ಹಿಂದೆಯಿಂದ ಬಂದು
ನನ್ನ ಕೈಯಿಂದ
ನಿನ್ನ ಕಣ್ಣು ಮುಚ್ಚಿ
ಯಾರೆಂದು ಕೇಳುತ್ತಿದ್ದೆ !

ನೀನು ನಿನ್ನ ಸುಳ್ಳು ಕೋಪ
ತೋರಿಸಿ ಮುನಿದಾಗ
ನಾನು ನಿನ್ನನ್ನು ಸತಾಯಿಸುತ
ನಿನ್ನನ್ನು ಇನ್ನೂ ರೇಗಿಸುತ
ನಂತರ ನಿನ್ನನ್ನು ಒಲಿಸುತ್ತಿದ್ದೆ !

ಪ್ರೀತಿಯ ಬರದಲಿ
ನೀನು ನನ್ನನ್ನು ಅಪ್ಪಿಕೊಂಡಾಗ
ನಾನೂ ನಿನ್ನನ್ನು ಅಪ್ಪಿಕೊಂಡು
ಗಾಳಿಯು ಸುಸ್ತಾಗಿ ನಮ್ಮ ಮಧ್ಯೆದಿಂದ
ಹೋಗಲಾರದೆ ತನ್ನ ಮಾರ್ಗ ಬದಲಾಯಿಸುವಂತೆ ಮಾಡುತ್ತಿದ್ದೆ !

ಜೀವನದ ಪರಿಪಕ್ವತೆ
ನಾವಿಬ್ಬರು ತಿಳಿದಾಗ
ನಾವು ನಮ್ಮ ಪವಿತ್ರ ಪ್ರೇಮವನ್ನು ಮರೆತು
ಪ್ರತ್ಯೇಕವಾದ ನಂತರವೂ
ನಾನು ಆ ಮಾವಿನ ಮರದ ಅಡಿಯಲ್ಲಿ ಕುಳಿತು ನಿನ್ನನ್ನೆ ಕಾಯುತ್ತಿದ್ದೆ !
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...