ಸಣ್ಣ ದೊಡ್ಡ ಚೌಕವ ಬಿಡಿಸಿ
ವಿವಿಧ ಬಣ್ಣವ ತುಂಬಿ
ರಚಿಸಿದಳವಳು
ಜೀವನದ ಸುಂದರ ರಂಗೋಲಿ !
ಅವಳ ಜೀವನ ಹೀಗೆಯೇ
ಅನಾಥಾಲಯದಲಿ ಪಾಲನೆ
ಅಲ್ಲಿಯೇ ಶಿಕ್ಷಣೆ
ರಂಗೋಲಿಯಂತೆ ಸ್ವತಃ ಬರೆದಿದ್ದಳು ತನ್ನ ಹಣೆ !
ಸ್ವಾವಲಂಬಿ ಜೀವನ
ಕಷ್ಟ ನೋವುಗಳು ಘನ
ಸತ್ಯದ ಮಾರ್ಗ ಕಠಿನ
ಬದುಕಿನ ರಂಗೋಲಿ ಆಗಿತ್ತು ಸುಂದರ ಪಾವನ !
ಆದರೆ ಕ್ರೂರ ಜಗತ್ತು
ರಂಗೋಲಿಯ ಸೌಂದರ್ಯ ನೋಡಿ
ಆಯಿತು ಹೊಟ್ಟೆಕಿಚ್ಚು
ಅವಳ ಜೀವನದ ರಂಗೋಲಿಗೆ ಮಸಿದರು ಕಪ್ಪು!
ಆದರೆ ಅವಳು ಧೀರೆ
ಮಿಶ್ರಿತ ಬಣ್ಣಗಳನ್ನು ಒಟ್ಟು ಮಾಡಿ
ಪುನಃ ರಚಿಸಿದಳು ರಂಗೋಲಿ
ಜೀವನ ಆಯಿತು ಆಕರ್ಷಕ ಸುಂದರ ಅದ್ಬುತ ಮನೋಹರೆ !
by ಹರೀಶ್ ಶೆಟ್ಟಿ, ಶಿರ್ವ
ವಿವಿಧ ಬಣ್ಣವ ತುಂಬಿ
ರಚಿಸಿದಳವಳು
ಜೀವನದ ಸುಂದರ ರಂಗೋಲಿ !
ಅವಳ ಜೀವನ ಹೀಗೆಯೇ
ಅನಾಥಾಲಯದಲಿ ಪಾಲನೆ
ಅಲ್ಲಿಯೇ ಶಿಕ್ಷಣೆ
ರಂಗೋಲಿಯಂತೆ ಸ್ವತಃ ಬರೆದಿದ್ದಳು ತನ್ನ ಹಣೆ !
ಸ್ವಾವಲಂಬಿ ಜೀವನ
ಕಷ್ಟ ನೋವುಗಳು ಘನ
ಸತ್ಯದ ಮಾರ್ಗ ಕಠಿನ
ಬದುಕಿನ ರಂಗೋಲಿ ಆಗಿತ್ತು ಸುಂದರ ಪಾವನ !
ಆದರೆ ಕ್ರೂರ ಜಗತ್ತು
ರಂಗೋಲಿಯ ಸೌಂದರ್ಯ ನೋಡಿ
ಆಯಿತು ಹೊಟ್ಟೆಕಿಚ್ಚು
ಅವಳ ಜೀವನದ ರಂಗೋಲಿಗೆ ಮಸಿದರು ಕಪ್ಪು!
ಆದರೆ ಅವಳು ಧೀರೆ
ಮಿಶ್ರಿತ ಬಣ್ಣಗಳನ್ನು ಒಟ್ಟು ಮಾಡಿ
ಪುನಃ ರಚಿಸಿದಳು ರಂಗೋಲಿ
ಜೀವನ ಆಯಿತು ಆಕರ್ಷಕ ಸುಂದರ ಅದ್ಬುತ ಮನೋಹರೆ !
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment