Sunday, April 22, 2012

ನನಗೇನು ಬೇಸರವಿಲ್ಲ

ಬೀಜ ಬಿತ್ತು
ನೀರು ಹಾಕಿ ಸಾಕಿದೆ
ಗಿಡವಾಗಿ ಬೆಳೆದು
ಮರವಾದ ನಂತರ
ಹಣ್ಣು ಕೊಡದಿದ್ದರೂ ವ್ಯಥೆ ಇಲ್ಲ
ಕರ್ತವ್ಯ ನಿಭಾಯಿಸುವವನಿಗೆ ಫಲದ ಆಸೆ ಇಲ್ಲ
ನನಗೇನು ಬೇಸರವಿಲ್ಲ !

ಸೂರ್ಯ ನನ್ನದಲ್ಲ
ಆದರೆ ಅದರಿಂದ ಸಿಗುವ ಕಿರಣ ನನ್ನದು
ಬಿಸಿಲ ಕೊಟ್ಟು
ಬೆವರು ಹೀರಿದರೂ ತೊಂದರೆ ಇಲ್ಲ
ಶ್ರಮ ಜೀವಿಗೆ ಕಷ್ಟದ ಪರವೆ ಇಲ್ಲ
ನನಗೇನು ಬೇಸರವಿಲ್ಲ!

ಸ್ನೇಹ ಅಮರ
ಜನುಮದ ಬಂಧನ
ಬಳಿ ಬಂದು
ದೂರ ಮಾಡಿದರೂ ಚಿಂತೆ ಇಲ್ಲ
ಪ್ರೀತಿ ಹೃದಯದಲಿ ಕಹಿ ಇಲ್ಲ
ನನಗೇನು ಬೇಸರವಿಲ್ಲ !
by ಹರೀಶ್ ಶೆಟ್ಟಿ, ಶಿರ್ವ

2 comments:

  1. ಆ ಕೊನೆಯ ಸಾಲುಗಳು ಯಾಕೊ ಮನಸ್ಸಿನಾಳಕ್ಕೆ ಹೊಕ್ಕವು ... ಎಲ್ಲೋ ವಿರಹದ ಛಾಯೆ ನಿಮ್ಮ ಕವಿತೆಗಳಲ್ಲಿ ಕಾಣುತ್ತೇನೆ...

    ReplyDelete
    Replies
    1. ತುಂಬಾ ಧನ್ಯವಾದಗಳು.....ನನ್ನಲ್ಲಿ ಅಡಗಿದ ಕವಿಯ ವಿರಹ ರೋದನ ....:)

      Delete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...