Wednesday, April 25, 2012

ನೆನಪು

ನೆನಪಿನ ಬುತ್ತಿ ತೆರೆದು
ರುಚಿ ಸವಿಯಲೆಂದು ಕುಳಿತೆ
ಅನೇಕ ಹಳೆ ವ್ಯಂಜನಗಳನ್ನು
ಸವಿದರೂ ಹಸಿವು ಬೆಳೆಯುತ್ತಲೇ ಹೋಯಿತು
--------------
ನೆನಪಿನ ಕಟ್ಟು ಬಿಡಿಸಿದೆ
ಒಳಗೆ ಅನೇಕ ತುಂಡು ತುಂಡು ನೆನಪು
--------------
ನೆನಪು ನೀ ನನ್ನ ನೆಂಟ
ನಿನ್ನನ್ನು ಕರೆಯ ಬೇಕೆಂದಿಲ್ಲ
ಹೇಳದೆ ಕೇಳದೆ ಬರುವಿ
ಬಂದು ತಲೆ ತಿಂದು ಹೋಗುವೆ ಅಲ್ಲವೇ   :)
--------------
ನೆನಪ ಮರದಲ್ಲಿ ಹತ್ತಿದೆ
ತುದಿಯಲ್ಲಿ ಮುಟ್ಟಿದ ಕೂಡಲೇ ಕೆಳಗೆ ನೋಡಿದೆ
ಕೆಳಗೆ  ವರ್ತಮಾನದ ಫಲ ಬಿದ್ದಿತ್ತು
--------------
ನೆನಪು ನೀನೊಂದು ಭೂತ
ಸುಂದರ ಗತ ಕಾಲ
ಭಯಾನಕ ಸತ್ಯ
----------------
ನೆನಪು ನಿನ್ನ ರೂಪವನ್ನು ಹೇಗೆಂದು ವರ್ಣಿಸಲಿ
ಸುಂದರವಾದ ರೂಪವೂ ನಿನ್ನದು
ಕುರೂಪವಾದ ರೂಪವೂ  ನಿನ್ನದು
by  ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...