Sunday, April 15, 2012

ಮುಪ್ಪು ಬದುಕು

ಮನಸ್ಸಲಿ ತಳಮಳ
ಭಾವನೆಗಳು ಸುಪ್ತ
ಆಗು ಹೋಗುಗಳ ಅರಿವಿಲ್ಲ !

ಶೂನ್ಯ ಆಲೋಚನೆ
ಏಕಾಂತದ ಬಯಕೆ
ಎಲ್ಲೊ ದೂರ ಹೋಗಬೇಕೆಂಬ ಇಚ್ಛೆ !

ಕರಗಿದ ಶರೀರ
ಸೇರದ ಆಹಾರ
ಇಲ್ಲ ಪ್ರಪಂಚದ ಗೋಚರ !

ಸೋತ ಕಲ್ಪನೆ
ಅರ್ಥವಾಗದ ಕನಸು
ಏನೂ ಬೇಡ ಎಂಬ ವಿಚಾರ!

ಅನಂತ ರೋಗ
ದಿನ ರಾತ್ರಿ ಮದ್ದಿನ ಭೋಗ
ಶಕ್ತಿ ರಹಿತ ತ್ರಾಣವಿಲ್ಲದ ಜೀವ !

ಅತೃಪ್ತ ಜೀವನ
ಮುಗಿದ ಯೌವನ
ಭಾರವಾಗಿದೆ ಮುಪ್ಪು ಬದುಕು !
by ಹರೀಶ್ ಶೆಟ್ಟಿ , ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...