Monday, April 30, 2012

ಗಾಳಿ..

ಗಾಳಿ.. ನೀ ಕೊಂಚ ತಾಳು 
ಸ್ವಲ್ಪ ತಡೆದು ಬೀಸು
ನನ್ನವಳು ಈ ಹಾದಿಯಲಿ ಬರುತ್ತಿದ್ದಾಳೆ
ಲಯವಾಗಿ ಚಲಿಸು
ಸ್ವಲ್ಪ ನಿಧಾನವಾಗಿ ಬೀಸು !

ನಿನ್ನ ಮಂದ ಗತಿಯಿಂದ 
ಮರಗಳ ಎಲೆಗಳು ಬೀಳಲಿ
ಅವಳು ಬರುವ ಹಾದಿಯಲಿ
ಮೆತ್ತನೆಯ ಎಲೆ ಹಾಸಿಗೆ ಹಾಸು
ಸ್ವಲ್ಪ ನಯವಾಗಿ ಬೀಸು !

ಅವಳ ಸುಂದರ ಕೋಮಲ ಶರೀರ
ಚಂಚಲ ಮೃದು ಹೆಜ್ಜೆ
ನಿನ್ನ ವೇಗ ಸಹಿಸಲಾರದು
ಅವಸರ ಮಾಡ ಬೇಡ
ಸ್ವಲ್ಪ ಸಾವಕಾಶವಾಗಿ ಬೀಸು !

ಅವಳ ಜಡೆಯಲ್ಲಿ ಮುಡಿದ
ಮಲ್ಲಿಗೆ ಸುಗಂಧದ ಕಂಪು 
ನನ್ನ ಹೃದಯ ಮನಸ್ಸನ್ನು
ಪೂರ್ಣವಾಗಿ ವಶ ಪಡಿಸಲಿ
ಸ್ವಲ್ಪ ಮೆಲ್ಲ ಮೆಲ್ಲನೆ ಬೀಸು !
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...