Monday, April 30, 2012
ಗಾಳಿ..
ಗಾಳಿ.. ನೀ ಕೊಂಚ ತಾಳು
ಸ್ವಲ್ಪ ತಡೆದು ಬೀಸು
ನನ್ನವಳು ಈ ಹಾದಿಯಲಿ ಬರುತ್ತಿದ್ದಾಳೆ
ಲಯವಾಗಿ ಚಲಿಸು
ಸ್ವಲ್ಪ ನಿಧಾನವಾಗಿ ಬೀಸು !
ನಿನ್ನ ಮಂದ ಗತಿಯಿಂದ
ಮರಗಳ ಎಲೆಗಳು ಬೀಳಲಿ
ಅವಳು ಬರುವ ಹಾದಿಯಲಿ
ಮೆತ್ತನೆಯ ಎಲೆ ಹಾಸಿಗೆ ಹಾಸು
ಸ್ವಲ್ಪ ನಯವಾಗಿ ಬೀಸು !
ಅವಳ ಸುಂದರ ಕೋಮಲ ಶರೀರ
ಚಂಚಲ ಮೃದು ಹೆಜ್ಜೆ
ನಿನ್ನ ವೇಗ ಸಹಿಸಲಾರದು
ಅವಸರ ಮಾಡ ಬೇಡ
ಸ್ವಲ್ಪ ಸಾವಕಾಶವಾಗಿ ಬೀಸು !
ಅವಳ ಜಡೆಯಲ್ಲಿ ಮುಡಿದ
ಮಲ್ಲಿಗೆ ಸುಗಂಧದ ಕಂಪು
ನನ್ನ ಹೃದಯ ಮನಸ್ಸನ್ನು
ಪೂರ್ಣವಾಗಿ ವಶ ಪಡಿಸಲಿ
ಸ್ವಲ್ಪ ಮೆಲ್ಲ ಮೆಲ್ಲನೆ ಬೀಸು !
by ಹರೀಶ್ ಶೆಟ್ಟಿ, ಶಿರ್ವ
ಸ್ವಲ್ಪ ತಡೆದು ಬೀಸು
ನನ್ನವಳು ಈ ಹಾದಿಯಲಿ ಬರುತ್ತಿದ್ದಾಳೆ
ಲಯವಾಗಿ ಚಲಿಸು
ಸ್ವಲ್ಪ ನಿಧಾನವಾಗಿ ಬೀಸು !
ನಿನ್ನ ಮಂದ ಗತಿಯಿಂದ
ಮರಗಳ ಎಲೆಗಳು ಬೀಳಲಿ
ಅವಳು ಬರುವ ಹಾದಿಯಲಿ
ಮೆತ್ತನೆಯ ಎಲೆ ಹಾಸಿಗೆ ಹಾಸು
ಸ್ವಲ್ಪ ನಯವಾಗಿ ಬೀಸು !
ಅವಳ ಸುಂದರ ಕೋಮಲ ಶರೀರ
ಚಂಚಲ ಮೃದು ಹೆಜ್ಜೆ
ನಿನ್ನ ವೇಗ ಸಹಿಸಲಾರದು
ಅವಸರ ಮಾಡ ಬೇಡ
ಸ್ವಲ್ಪ ಸಾವಕಾಶವಾಗಿ ಬೀಸು !
ಅವಳ ಜಡೆಯಲ್ಲಿ ಮುಡಿದ
ಮಲ್ಲಿಗೆ ಸುಗಂಧದ ಕಂಪು
ನನ್ನ ಹೃದಯ ಮನಸ್ಸನ್ನು
ಪೂರ್ಣವಾಗಿ ವಶ ಪಡಿಸಲಿ
ಸ್ವಲ್ಪ ಮೆಲ್ಲ ಮೆಲ್ಲನೆ ಬೀಸು !
by ಹರೀಶ್ ಶೆಟ್ಟಿ, ಶಿರ್ವ
Sunday, April 29, 2012
Saturday, April 28, 2012
Friday, April 27, 2012
ಕ್ಷಣ ಒಂದೆರಡು ಕ್ಷಣದ ಕವಿ ನಾನು
ಕ್ಷಣ ಒಂದೆರಡು ಕ್ಷಣದ ಕವಿ ನಾನು
ಕ್ಷಣ ಒಂದೆರಡು ಕ್ಷಣ ನನ್ನ ಕಥೆ
ಕ್ಷಣ ಒಂದೆರಡು ಕ್ಷಣ ನನ್ನ ಜೀವನ
ಕ್ಷಣ ಒಂದೆರಡು ಕ್ಷಣ ನನ್ನ ಯೌವನ
ಕ್ಷಣ ಒಂದೆರಡು ಕ್ಷಣದ ಕವಿ ನಾನು......
ನನ್ನಿಂದ ಮೊದಲು
ಎಷ್ಟೋ ಕವಿಗಳು ಬಂದಿದ್ದರು
ಹಾಗು ಬಂದೋದರು
ಕೆಲವರು ನಿಟ್ಟುಸಿರು ಬಿಟ್ಟು ಹೋದರು
ಕೆಲವರು ಕವಿತೆ ಪಠಿಸಿ ಹೋದರು
ಅವರೂ ಆ ಕ್ಷಣದ ಕಥೆಯಾಗಿದ್ದರು
ನಾನೂ ಈ ಕ್ಷಣದ ಕಥೆಯಾಗಿದ್ದೇನೆ
ನಾಳೆ ನಿಮ್ಮಿಂದ ಅಗಲಿ ಹೋಗುವೆ
ಇಂದು ನಿಮ್ಮದೇ ಭಾಗವಾಗಿದ್ದೇನೆ
ಕ್ಷಣ ಒಂದೆರಡು ಕ್ಷಣದ ಕವಿ ನಾನು...
ನನ್ನಿಂದ ನಂತರ
ಇನ್ನೇಷ್ಟೋ ಕವಿಗಳು ಬಂದು
ತನ್ನ ಭಾವ ಪುಷ್ಪಗಳನ್ನು ಅರಳಿಸುವರು
ನನ್ನಿಂದ ಒಳ್ಳೆ ಬರೆಯುವವರು
ನಿಮ್ಮಿಂದ ಒಳ್ಳೆ ಕೇಳುವವರು
ನಾಳೆ ಯಾರು ನನ್ನನ್ನು ನೆನಪಿಸುವರು
ಯಾಕೆ ನನ್ನನ್ನು ನೆನಪಿಸುವರು
ಬಿಡುವಿಲ್ಲದ ಈ ಜೀವನದಲಿ ನನಗಾಗಿ
ಯಾಕೆ ತನ್ನ ಸಮಯ ವ್ಯರ್ಥ ಮಾಡುವರು
ಕ್ಷಣ ಒಂದೆರಡು ಕ್ಷಣದ ಕವಿ ನಾನು ......
ಮೂಲ ರಚನೆ : ಸಾಹಿರ್ ಲುಧ್ಯಾನ್ವಿ
ಅನುವಾದ :ಹರೀಶ್ ಶೆಟ್ಟಿ,ಶಿರ್ವ
Main pal do pal ka shayar hoon
pal do pal meri kahani hai
pal do pal meri hasti hai
pal do pal meri jawani hai
main pal do pal ka shayar hoon
Mujhse pahele kitne shayar aaye aur aakar chaley gaye
kuch anhein barkar laut gaye kuch nagme gaa kar chaley gaye
woh bhi ek pal ka kissa thhey main bhi ek pal ka kissa hoon
kal tumse jhuda ho jaunga jo aaj tumhara hissa hoon
main pal do pal ka shayar hoon
Kal aur ayenge nagmon ki khilti kaliyan chunnewale
mujhese behetar kahenewale tumse behetar sunnewale
kal koi mujhko yaad karhey kyon koi mujhko yaad karhey
masroof zamana mere liye kyon waqt apna barbadh kare
main pal do pal ka shayar hoon
ಮೂಲ ರಚನೆ : ಸಾಹಿರ್ ಲುಧ್ಯಾನ್ವಿ
ಕ್ಷಣ ಒಂದೆರಡು ಕ್ಷಣ ನನ್ನ ಕಥೆ
ಕ್ಷಣ ಒಂದೆರಡು ಕ್ಷಣ ನನ್ನ ಜೀವನ
ಕ್ಷಣ ಒಂದೆರಡು ಕ್ಷಣ ನನ್ನ ಯೌವನ
ಕ್ಷಣ ಒಂದೆರಡು ಕ್ಷಣದ ಕವಿ ನಾನು......
ನನ್ನಿಂದ ಮೊದಲು
ಎಷ್ಟೋ ಕವಿಗಳು ಬಂದಿದ್ದರು
ಹಾಗು ಬಂದೋದರು
ಕೆಲವರು ನಿಟ್ಟುಸಿರು ಬಿಟ್ಟು ಹೋದರು
ಕೆಲವರು ಕವಿತೆ ಪಠಿಸಿ ಹೋದರು
ಅವರೂ ಆ ಕ್ಷಣದ ಕಥೆಯಾಗಿದ್ದರು
ನಾನೂ ಈ ಕ್ಷಣದ ಕಥೆಯಾಗಿದ್ದೇನೆ
ನಾಳೆ ನಿಮ್ಮಿಂದ ಅಗಲಿ ಹೋಗುವೆ
ಇಂದು ನಿಮ್ಮದೇ ಭಾಗವಾಗಿದ್ದೇನೆ
ಕ್ಷಣ ಒಂದೆರಡು ಕ್ಷಣದ ಕವಿ ನಾನು...
ನನ್ನಿಂದ ನಂತರ
ಇನ್ನೇಷ್ಟೋ ಕವಿಗಳು ಬಂದು
ತನ್ನ ಭಾವ ಪುಷ್ಪಗಳನ್ನು ಅರಳಿಸುವರು
ನನ್ನಿಂದ ಒಳ್ಳೆ ಬರೆಯುವವರು
ನಿಮ್ಮಿಂದ ಒಳ್ಳೆ ಕೇಳುವವರು
ನಾಳೆ ಯಾರು ನನ್ನನ್ನು ನೆನಪಿಸುವರು
ಯಾಕೆ ನನ್ನನ್ನು ನೆನಪಿಸುವರು
ಬಿಡುವಿಲ್ಲದ ಈ ಜೀವನದಲಿ ನನಗಾಗಿ
ಯಾಕೆ ತನ್ನ ಸಮಯ ವ್ಯರ್ಥ ಮಾಡುವರು
ಕ್ಷಣ ಒಂದೆರಡು ಕ್ಷಣದ ಕವಿ ನಾನು ......
ಮೂಲ ರಚನೆ : ಸಾಹಿರ್ ಲುಧ್ಯಾನ್ವಿ
ಅನುವಾದ :ಹರೀಶ್ ಶೆಟ್ಟಿ,ಶಿರ್ವ
Main pal do pal ka shayar hoon
pal do pal meri kahani hai
pal do pal meri hasti hai
pal do pal meri jawani hai
main pal do pal ka shayar hoon
Mujhse pahele kitne shayar aaye aur aakar chaley gaye
kuch anhein barkar laut gaye kuch nagme gaa kar chaley gaye
woh bhi ek pal ka kissa thhey main bhi ek pal ka kissa hoon
kal tumse jhuda ho jaunga jo aaj tumhara hissa hoon
main pal do pal ka shayar hoon
Kal aur ayenge nagmon ki khilti kaliyan chunnewale
mujhese behetar kahenewale tumse behetar sunnewale
kal koi mujhko yaad karhey kyon koi mujhko yaad karhey
masroof zamana mere liye kyon waqt apna barbadh kare
main pal do pal ka shayar hoon
ಮೂಲ ರಚನೆ : ಸಾಹಿರ್ ಲುಧ್ಯಾನ್ವಿ
ನಾನೊಂದು ಗುಲಾಬಿ ಹೂವು
ನಾನೊಂದು ಗುಲಾಬಿ ಹೂವು
ಸುಂದರ ಆಕರ್ಷಿತ
ಮನಮೋಹಕ
ಸುವಾಸಿತ
ಅರಳಿದ ನಂತರ
ನಾನು ಬಲು ಸುಂದರ
ಎಲ್ಲರಿಗೂ ನನ್ನದೇ ಬಯಕೆ
ನಾನೆಂದರೆ ಎಲ್ಲರಿಗೂ ಇಷ್ಟ
ಆದರೆ ನನ್ನ ಮುಳ್ಳಿಂದ
ಎಲ್ಲರಿಗೂ ಭಯ
ಚುಚ್ಚುವೆ ಎಂದು
ಆದರೆ
ನೋವು ವೇದನೆ
ಕೊಡುವ ಸ್ವಭಾವ ನನ್ನದಲ್ಲ
ಜನರ ಅಜಾಗ್ರತೆಯಿಂದ
ಅವರೇ ನನ್ನ ಮುಳ್ಳಿಂದ
ನೋವು ಅನುಭವಿಸುವುದು
ಇದರಲ್ಲಿ ನನ್ನ ತಪ್ಪೇನು?
ನಾನೊಂದು ಗುಲಾಬಿ ಹೂವು.......
by ಹರೀಶ್ ಶೆಟ್ಟಿ, ಶಿರ್ವ
ಸುಂದರ ಆಕರ್ಷಿತ
ಮನಮೋಹಕ
ಸುವಾಸಿತ
ಅರಳಿದ ನಂತರ
ನಾನು ಬಲು ಸುಂದರ
ಎಲ್ಲರಿಗೂ ನನ್ನದೇ ಬಯಕೆ
ನಾನೆಂದರೆ ಎಲ್ಲರಿಗೂ ಇಷ್ಟ
ಆದರೆ ನನ್ನ ಮುಳ್ಳಿಂದ
ಎಲ್ಲರಿಗೂ ಭಯ
ಚುಚ್ಚುವೆ ಎಂದು
ಆದರೆ
ನೋವು ವೇದನೆ
ಕೊಡುವ ಸ್ವಭಾವ ನನ್ನದಲ್ಲ
ಜನರ ಅಜಾಗ್ರತೆಯಿಂದ
ಅವರೇ ನನ್ನ ಮುಳ್ಳಿಂದ
ನೋವು ಅನುಭವಿಸುವುದು
ಇದರಲ್ಲಿ ನನ್ನ ತಪ್ಪೇನು?
ನಾನೊಂದು ಗುಲಾಬಿ ಹೂವು.......
by ಹರೀಶ್ ಶೆಟ್ಟಿ, ಶಿರ್ವ
Thursday, April 26, 2012
ನಾನು ಹಾಗು ನನ್ನ ಏಕಾಂಗಿತನ
(ಅವನು) .....
ನಾನು ಹಾಗು ನನ್ನ ಏಕಾಂಗಿತನ
ಯಾವಗಲು ಮಾತನಾಡುತ್ತೇವೆ
ನೀನು ಈ ಮಾತು ಕೇಳಿ ಎಷ್ಟು ನಗುವೆ
ನೀನಿದ್ದರೆ ಹೀಗೆ ಆಗುತ್ತಿತ್ತು
ನೀನಿದ್ದರೆ ಹಾಗೆ ಆಗುತ್ತಿತ್ತು
(ಅವಳು)....
ಇದೆಲ್ಲಿಗೆ ಬಂದೆವು ನಾವು
ಹೀಗೆಯೇ ಜೊತೆ ಜೊತೆಯಲ್ಲಿ ನಡೆದು
ನಿನ್ನ ಆಲಿಂಗನದಲ್ಲಿ ನನ್ನ
ಜೀವ ಮೈ ಮರೆತು
ಇದೆಲ್ಲಿಗೆ ಬಂದೆವು ನಾವು
ಹೀಗೆಯೇ ಜೊತೆ ಜೊತೆಯಲ್ಲಿ ನಡೆದು !
(ಅವನು)....
ಇದು ರಾತ್ರಿ
ನಿನ್ನ ಕೇಶ ರಾಶಿ ತೆರೆದಿದೆ
ಹೇ ಹುಣ್ಣಿಮೆ ಚಂದಿರ ನಿನ್ನ ನಯನದಿಂದ
ನನ್ನ ನಿಶೆ ಹೊಳೆಯುತ್ತಿದೆ
ಇದು ಚಂದಿರವೇ ಅಥವಾ ನಿನ್ನ ಬಳೆಯೇ
ನಕ್ಷತ್ರಗಳೇ ಅಥವಾ ನಿನ್ನ ಸೆರಗೆ
ಗಾಳಿಯ ಕಂಪೇ ಅಥವಾ
ನಿನ್ನ ಶರೀರದ ಸುವಾಸನೆಯೇ
ಈ ಎಲೆಗಳ ಗದ್ದಲ ನಿನಗೆ
ಮೆಲ್ಲನೆ ಏನೋ ಹೇಳುತ್ತಿದೆ
ನಾನು ಯೋಚಿಸುತ್ತೇನೆ ಇದನ್ನು
ಯಾವಗದಿಂದ ಮೌನದಿ
ಆದರೆ ನನಗೂ ಇದು ಗೊತ್ತಿದೆ
ನೀನಿಲ್ಲವೆಂದು
ಎಲ್ಲಿಯೂ ಇಲ್ಲವೆಂದು
ಆದರೆ ಈ ಹೃದಯ ಹೇಳುತ್ತಿದೆ
ನೀನು ಇಲ್ಲಿಯೇ ಇರುವೆಯೆಂದು
ಇಲ್ಲೇ ಎಲ್ಲಿ ಇರುವೆಯೆಂದು
(ಅವಳು)....
ಓ .....
ನೀನು ಮೈ ನಾನು ನೆರಳು
ನೀನಿಲ್ಲದಿದ್ದರೆ ನಾನೆಲ್ಲಿ
ನನ್ನನ್ನು ಪ್ರೀತಿಸುವವನೇ
ನೀನೆಲ್ಲಿಯೋ ನಾನಲ್ಲಿ
ನಮಗೆ ಸಿಗಲ್ಲಿತ್ತು ಇನಿಯ
ಈ ಪಥದಲ್ಲೇ ನಡೆದು
ಇದೆಲ್ಲಿಗೆ ಬಂದೆವು ನಾವು
ಹೀಗೆಯೇ ಜೊತೆ ಜೊತೆಯಲ್ಲಿ ನಡೆದು !
(ಅವಳು)....
ನನ್ನ ಉಸಿರು ಉಸಿರು ಸುಗಂಧ
ಯಾವುದೇ ಘಮ ಘಮ ಚಂದನ
ನಿನ್ನ ಪ್ರೀತಿ ಒಂದು ಚಂದಿರ
ನನ್ನ ಹೃದಯ ಒಂದು ಅಂಗಳ
ಇನ್ನಿದೆ ಯಾವುದೇ ಮೆತ್ತನೆಯ
ನನ್ನ ಸಂಜೆ ಕಳೆಯುವ ತನಕ
ಇದೆಲ್ಲಿಗೆ ಬಂದೆವು ನಾವು
ಹೀಗೆಯೇ ಜೊತೆ ಜೊತೆಯಲ್ಲಿ ನಡೆದು !
(ಅವನು)......
ನಿಸ್ಸಹಾಯ ಅವಸ್ಥೆ
ಇಲ್ಲಿಯೂ ಇದೆ ಅಲ್ಲಿಯೂ ಇದೆ
ಏಕಾಂತದ ಈ ರಾತ್ರಿ
ಇಲ್ಲಿಯೂ ಇದೆ ಅಲ್ಲಿಯೂ ಇದೆ
ಹೇಳಲು ತುಂಬಾ ಇದೆ
ಆದರೆ ಯಾರ ಹತ್ತಿರ ಹೇಳಲಿ
ಯಾವಾಗ ತನಕ
ಮೌನವಿದ್ದು ಸಹನೆ ಮಾಡಲಿ
ಮನಸ್ಸು ಹೇಳುತ್ತದೆ
ಪ್ರಪಂಚದ ಎಲ್ಲ ರೂಢಿಗಳನ್ನು ಮುರಿಯಲೆಂದು
ನಮ್ಮ ಮಧ್ಯೆ ಇದ್ದ ಗೋಡೆಯನ್ನು ಬೀಳಿಸಳೆಂದು
ಯಾಕೆ ಹೃದಯವನ್ನು ಉರಿಸಲಿ
ಜನರಿಗೆ ಹೇಳಿ ಬಿಡಲಿ
ಹೌದು ನನಗೆ ಪ್ರೀತಿಯಾಗಿದೆ
ಪ್ರೀತಿಯಾಗಿದೆ
ಪ್ರೀತಿಯಾಗಿದೆ
ಈಗ ಹೃದಯದಲ್ಲಿ ಈ ಮಾತು
ಇಲ್ಲಿಯೂ ಇದೆ ಅಲ್ಲಿಯೂ ಇದೆ
ಅನುವಾದ :ಹರೀಶ್ ಶೆಟ್ಟಿ, ಶಿರ್ವ
ಮೂಲ ರಚನೆ : ಜಾವೇದ್ ಅಖ್ತರ್ /ನಿದಾ ಫಾಜ್ಲಿ
ಚಿತ್ರ : ಸಿಲ್ ಸಿಲಾ
ಅನುವಾದ :ಹರೀಶ್ ಶೆಟ್ಟಿ, ಶಿರ್ವ
ಮೂಲ ರಚನೆ : ಜಾವೇದ್ ಅಖ್ತರ್ /ನಿದಾ ಫಾಜ್ಲಿ
ಚಿತ್ರ : ಸಿಲ್ ಸಿಲಾ
ನಾನು ಹಾಗು ನನ್ನ ಏಕಾಂಗಿತನ
ಯಾವಗಲು ಮಾತನಾಡುತ್ತೇವೆ
ನೀನಿದ್ದರೆ ಹೇಗಾಗುತ್ತಿತ್ತು
ನೀನು ಇದು ಹೇಳುವೆ
ನೀನು ಅದು ಹೇಳುವೆ
ನೀನು ಈ ಮಾತು ಕೇಳಿ ಆಶ್ಚರ್ಯಗೊಳ್ಳುವೆ ನೀನು ಇದು ಹೇಳುವೆ
ನೀನು ಅದು ಹೇಳುವೆ
ನೀನು ಈ ಮಾತು ಕೇಳಿ ಎಷ್ಟು ನಗುವೆ
ನೀನಿದ್ದರೆ ಹೀಗೆ ಆಗುತ್ತಿತ್ತು
ನೀನಿದ್ದರೆ ಹಾಗೆ ಆಗುತ್ತಿತ್ತು
(ಅವಳು)....
ಇದೆಲ್ಲಿಗೆ ಬಂದೆವು ನಾವು
ಹೀಗೆಯೇ ಜೊತೆ ಜೊತೆಯಲ್ಲಿ ನಡೆದು
ನಿನ್ನ ಆಲಿಂಗನದಲ್ಲಿ ನನ್ನ
ಜೀವ ಮೈ ಮರೆತು
ಇದೆಲ್ಲಿಗೆ ಬಂದೆವು ನಾವು
ಹೀಗೆಯೇ ಜೊತೆ ಜೊತೆಯಲ್ಲಿ ನಡೆದು !
(ಅವನು)....
ಇದು ರಾತ್ರಿ
ನಿನ್ನ ಕೇಶ ರಾಶಿ ತೆರೆದಿದೆ
ಹೇ ಹುಣ್ಣಿಮೆ ಚಂದಿರ ನಿನ್ನ ನಯನದಿಂದ
ನನ್ನ ನಿಶೆ ಹೊಳೆಯುತ್ತಿದೆ
ಇದು ಚಂದಿರವೇ ಅಥವಾ ನಿನ್ನ ಬಳೆಯೇ
ನಕ್ಷತ್ರಗಳೇ ಅಥವಾ ನಿನ್ನ ಸೆರಗೆ
ಗಾಳಿಯ ಕಂಪೇ ಅಥವಾ
ನಿನ್ನ ಶರೀರದ ಸುವಾಸನೆಯೇ
ಈ ಎಲೆಗಳ ಗದ್ದಲ ನಿನಗೆ
ಮೆಲ್ಲನೆ ಏನೋ ಹೇಳುತ್ತಿದೆ
ನಾನು ಯೋಚಿಸುತ್ತೇನೆ ಇದನ್ನು
ಯಾವಗದಿಂದ ಮೌನದಿ
ಆದರೆ ನನಗೂ ಇದು ಗೊತ್ತಿದೆ
ನೀನಿಲ್ಲವೆಂದು
ಎಲ್ಲಿಯೂ ಇಲ್ಲವೆಂದು
ಆದರೆ ಈ ಹೃದಯ ಹೇಳುತ್ತಿದೆ
ನೀನು ಇಲ್ಲಿಯೇ ಇರುವೆಯೆಂದು
ಇಲ್ಲೇ ಎಲ್ಲಿ ಇರುವೆಯೆಂದು
(ಅವಳು)....
ಓ .....
ನೀನು ಮೈ ನಾನು ನೆರಳು
ನೀನಿಲ್ಲದಿದ್ದರೆ ನಾನೆಲ್ಲಿ
ನನ್ನನ್ನು ಪ್ರೀತಿಸುವವನೇ
ನೀನೆಲ್ಲಿಯೋ ನಾನಲ್ಲಿ
ನಮಗೆ ಸಿಗಲ್ಲಿತ್ತು ಇನಿಯ
ಈ ಪಥದಲ್ಲೇ ನಡೆದು
ಇದೆಲ್ಲಿಗೆ ಬಂದೆವು ನಾವು
ಹೀಗೆಯೇ ಜೊತೆ ಜೊತೆಯಲ್ಲಿ ನಡೆದು !
(ಅವಳು)....
ನನ್ನ ಉಸಿರು ಉಸಿರು ಸುಗಂಧ
ಯಾವುದೇ ಘಮ ಘಮ ಚಂದನ
ನಿನ್ನ ಪ್ರೀತಿ ಒಂದು ಚಂದಿರ
ನನ್ನ ಹೃದಯ ಒಂದು ಅಂಗಳ
ಇನ್ನಿದೆ ಯಾವುದೇ ಮೆತ್ತನೆಯ
ನನ್ನ ಸಂಜೆ ಕಳೆಯುವ ತನಕ
ಇದೆಲ್ಲಿಗೆ ಬಂದೆವು ನಾವು
ಹೀಗೆಯೇ ಜೊತೆ ಜೊತೆಯಲ್ಲಿ ನಡೆದು !
(ಅವನು)......
ನಿಸ್ಸಹಾಯ ಅವಸ್ಥೆ
ಇಲ್ಲಿಯೂ ಇದೆ ಅಲ್ಲಿಯೂ ಇದೆ
ಏಕಾಂತದ ಈ ರಾತ್ರಿ
ಇಲ್ಲಿಯೂ ಇದೆ ಅಲ್ಲಿಯೂ ಇದೆ
ಹೇಳಲು ತುಂಬಾ ಇದೆ
ಆದರೆ ಯಾರ ಹತ್ತಿರ ಹೇಳಲಿ
ಯಾವಾಗ ತನಕ
ಮೌನವಿದ್ದು ಸಹನೆ ಮಾಡಲಿ
ಮನಸ್ಸು ಹೇಳುತ್ತದೆ
ಪ್ರಪಂಚದ ಎಲ್ಲ ರೂಢಿಗಳನ್ನು ಮುರಿಯಲೆಂದು
ನಮ್ಮ ಮಧ್ಯೆ ಇದ್ದ ಗೋಡೆಯನ್ನು ಬೀಳಿಸಳೆಂದು
ಯಾಕೆ ಹೃದಯವನ್ನು ಉರಿಸಲಿ
ಜನರಿಗೆ ಹೇಳಿ ಬಿಡಲಿ
ಹೌದು ನನಗೆ ಪ್ರೀತಿಯಾಗಿದೆ
ಪ್ರೀತಿಯಾಗಿದೆ
ಪ್ರೀತಿಯಾಗಿದೆ
ಈಗ ಹೃದಯದಲ್ಲಿ ಈ ಮಾತು
ಇಲ್ಲಿಯೂ ಇದೆ ಅಲ್ಲಿಯೂ ಇದೆ
ಅನುವಾದ :ಹರೀಶ್ ಶೆಟ್ಟಿ, ಶಿರ್ವ
ಮೂಲ ರಚನೆ : ಜಾವೇದ್ ಅಖ್ತರ್ /ನಿದಾ ಫಾಜ್ಲಿ
ಚಿತ್ರ : ಸಿಲ್ ಸಿಲಾ
--MALE--
Main aur meri tanhaai aksar yeh baatein karte hain
Tum hoti to kaisa hota, tum yeh kehti, tum voh kehti
Tum is baat pe hairaan hoti, tum us baat pe kitni hansti
Tum hoti to aisa hota, tum hoti to vaisa hota
Main aur meri tanhaai aksar yeh baatein karte hain
--FEMALE--
Yeh kahan aa gaye hum
Yunhi saath saath chalte
Teri baahon mein hai jaanam
Mere jism-o-jaan pighalte
Yeh kahan aa gaye hum
Yunhi saath saath chalte
--MALE--
Yeh raat hai, yeh tumhaari zulfein khuli hui hai
Hai chaandni ya tumhaari nazrein se meri raatein dhuli hui hai
Yeh chaand hai ya tumhaara kangan
Sitaarein hai ya tumhaara aanchal
Hawa ka jhonka hai ya tumhaare badan ki khushboo
Yeh pattiyon ki hai sarsaraahat ke tumne chupke se kuch kaha hai
Yeh sochta hoon main kab se gumsum
Ke jab ki mujhko bhi yeh khabar hai
Ke tum nahin ho, kahin nahin ho
Magar yeh dil hai ke keh raha hai
Ke tum yahin ho, yahin kahin ho
--FEMALE--
O, tu badan hai main hoon chhaaya
Tu na ho to main kahan hoon
Mujhe pyaar karne waale
Tu jahan hai main vahan hoon
Hamein milna hi tha hamdam
Issi raah pe nikalte
Yeh kahan aa gaye hum
Yunhi saath saath chalte
Mm, meri saans saans maheke
Koi bheena bheena chandan
Tera pyaar chaandni hai
Mera dil hai jaise aangan
Koi aur bhi mulaayam
Meri shaam dhalte dhalte
Yeh kahan aa gaye hum
Yunhi saath saath chalte
--MALE--
Majboor yeh haalaat, idhar bhi hai udhar bhi
Tanhaai ki ek raat, idhar bhi hai udhar bhi
Kehne ko bahut kuch hai, magar kisse kahe hum
Kab tak yunhi khaamosh rahe aur sahe hum
Dil kehta hai duniya ki har ek rasm utha de
Deevaar jo hum dono mein hai, aaj gira de
Kyoon dil mein sulagte rahe, logon ko bata de
Haan humko mohabbat hai, mohabbat hai, mohabbat
Ab dil mein yehi baat, idhar bhi hai udhar bhi
--FEMALE--
Yeh kahan aa gaye hum
Yunhi saath saath chalte
Yeh kahan aa gaye hum
ಅನುವಾದ :ಹರೀಶ್ ಶೆಟ್ಟಿ, ಶಿರ್ವ
ಮೂಲ ರಚನೆ : ಜಾವೇದ್ ಅಖ್ತರ್ /ನಿದಾ ಫಾಜ್ಲಿ
ಚಿತ್ರ : ಸಿಲ್ ಸಿಲಾ
Wednesday, April 25, 2012
ನೆನಪು
ನೆನಪಿನ ಬುತ್ತಿ ತೆರೆದು
ರುಚಿ ಸವಿಯಲೆಂದು ಕುಳಿತೆ
ಅನೇಕ ಹಳೆ ವ್ಯಂಜನಗಳನ್ನು
ಸವಿದರೂ ಹಸಿವು ಬೆಳೆಯುತ್ತಲೇ ಹೋಯಿತು
--------------
ನೆನಪಿನ ಕಟ್ಟು ಬಿಡಿಸಿದೆ
ಒಳಗೆ ಅನೇಕ ತುಂಡು ತುಂಡು ನೆನಪು
--------------
ನೆನಪು ನೀ ನನ್ನ ನೆಂಟ
ನಿನ್ನನ್ನು ಕರೆಯ ಬೇಕೆಂದಿಲ್ಲ
ಹೇಳದೆ ಕೇಳದೆ ಬರುವಿ
ಬಂದು ತಲೆ ತಿಂದು ಹೋಗುವೆ ಅಲ್ಲವೇ :)
--------------
ನೆನಪ ಮರದಲ್ಲಿ ಹತ್ತಿದೆ
ತುದಿಯಲ್ಲಿ ಮುಟ್ಟಿದ ಕೂಡಲೇ ಕೆಳಗೆ ನೋಡಿದೆ
ಕೆಳಗೆ ವರ್ತಮಾನದ ಫಲ ಬಿದ್ದಿತ್ತು
--------------
ನೆನಪು ನೀನೊಂದು ಭೂತ
ಸುಂದರ ಗತ ಕಾಲ
ಭಯಾನಕ ಸತ್ಯ
----------------
ನೆನಪು ನಿನ್ನ ರೂಪವನ್ನು ಹೇಗೆಂದು ವರ್ಣಿಸಲಿ
ಸುಂದರವಾದ ರೂಪವೂ ನಿನ್ನದು
ಕುರೂಪವಾದ ರೂಪವೂ ನಿನ್ನದು
by ಹರೀಶ್ ಶೆಟ್ಟಿ, ಶಿರ್ವ
ರುಚಿ ಸವಿಯಲೆಂದು ಕುಳಿತೆ
ಅನೇಕ ಹಳೆ ವ್ಯಂಜನಗಳನ್ನು
ಸವಿದರೂ ಹಸಿವು ಬೆಳೆಯುತ್ತಲೇ ಹೋಯಿತು
--------------
ನೆನಪಿನ ಕಟ್ಟು ಬಿಡಿಸಿದೆ
ಒಳಗೆ ಅನೇಕ ತುಂಡು ತುಂಡು ನೆನಪು
--------------
ನೆನಪು ನೀ ನನ್ನ ನೆಂಟ
ನಿನ್ನನ್ನು ಕರೆಯ ಬೇಕೆಂದಿಲ್ಲ
ಹೇಳದೆ ಕೇಳದೆ ಬರುವಿ
ಬಂದು ತಲೆ ತಿಂದು ಹೋಗುವೆ ಅಲ್ಲವೇ :)
--------------
ನೆನಪ ಮರದಲ್ಲಿ ಹತ್ತಿದೆ
ತುದಿಯಲ್ಲಿ ಮುಟ್ಟಿದ ಕೂಡಲೇ ಕೆಳಗೆ ನೋಡಿದೆ
ಕೆಳಗೆ ವರ್ತಮಾನದ ಫಲ ಬಿದ್ದಿತ್ತು
--------------
ನೆನಪು ನೀನೊಂದು ಭೂತ
ಸುಂದರ ಗತ ಕಾಲ
ಭಯಾನಕ ಸತ್ಯ
----------------
ನೆನಪು ನಿನ್ನ ರೂಪವನ್ನು ಹೇಗೆಂದು ವರ್ಣಿಸಲಿ
ಸುಂದರವಾದ ರೂಪವೂ ನಿನ್ನದು
ಕುರೂಪವಾದ ರೂಪವೂ ನಿನ್ನದು
by ಹರೀಶ್ ಶೆಟ್ಟಿ, ಶಿರ್ವ
ಕೆಲವೊಮ್ಮೆ
ಕೆಲವೊಮ್ಮೆ ನನ್ನ ಮನಸ್ಸಲ್ಲಿ
ಈ ವಿಚಾರ ಬರುತ್ತದೆ
ಅಂದರೆ ನಿನ್ನನ್ನು ರಚಿಸಿದ್ದಾರೆ
ಕೇವಲ ನನಗೋಸ್ಕರ ಎಂದು
ನೀ ಮೊದಲೆಲ್ಲೋ ನಕ್ಷತ್ರದಲ್ಲಿ ವಾಸಿಸುತ್ತಿದ್ದೆ ಎಂದು
ನಿನ್ನನ್ನು ಕರೆದಿದ್ದಾರೆ ಕೇವಲ ನನಗೋಸ್ಕರ ಎಂದು !
ಕೆಲವೊಮ್ಮೆ ನನ್ನ ಮನಸ್ಸಲ್ಲಿ
ಈ ವಿಚಾರ ಬರುತ್ತದೆ
ಈ ಶರೀರ ಈ ನಯನ
ಕೇವಲ ನನ್ನ ಠೇವಣಿ ಎಂದು
ನಿನ್ನ ಕೇಶದ ಮೃದು ಛಾಯೆ
ಕೇವಲ ನನಗೋಸ್ಕರ ಎಂದು
ಈ ತುಟಿ ಈ ಆಲಿಂಗನ
ಕೇವಲ ನನ್ನ ಠೇವಣಿ ಎಂದು !
ಕೆಲವೊಮ್ಮೆ ನನ್ನ ನನ್ನ ಮನಸ್ಸಲ್ಲಿ
ಈ ವಿಚಾರ ಬರುತ್ತದೆ
ಶೆಹನಾಯಿ ವಾದನದಂತೆ
ನುಡಿಯುತ್ತಿದೆ ಪಥದಲ್ಲಿ ಎಂದು
ನುಡಿಯುತ್ತಿದೆ ಪಥದಲ್ಲಿ ಎಂದು
ಮಧುಚಂದ್ರದಲಿ ನಿನ್ನ ಮುಖದಿಂದ
ಸೀರೆಯ ಸೆರಗನ್ನು ತೆರೆಯುತ್ತಿದ್ದೇನೆ ಎಂದು
ಲಜ್ಜೆಯಿಂದ ನಿನ್ನ ಮುಖ ಕೆಂಪೇರಿಸೀರೆಯ ಸೆರಗನ್ನು ತೆರೆಯುತ್ತಿದ್ದೇನೆ ಎಂದು
ನೀನು ಮೈ ಮರೆಯುವೆ ಎಂದು !
ಕೆಲವೊಮ್ಮೆ ನನ್ನ ನನ್ನ ಮನಸ್ಸಲ್ಲಿ
ಈ ವಿಚಾರ ಬರುತ್ತದೆ
ನೀ ನನ್ನನ್ನು ಹೀಗೆಯೇ ಪ್ರೀತಿಸುತ್ತಿರುವೆ
ಜೀವನ ಪರ್ಯಂತ ಎಂದು
ನಿನ್ನ ಪ್ರೇಮ ದೃಷ್ಟಿ ಹೀಗೆಯೇ
ಬೀಳುತ್ತಿರುತ್ತದೆ ನನ್ನ ಮೇಲೆ ಎಂದು
ನನಗೆ ಗೊತ್ತು ನೀ ನನ್ನವಳಲ್ಲ ಎಂದು
ಆದರೂ ಕೆಲವೊಮ್ಮೆ......
ಮೂಲ ರಚನೆ :ಸಾಹಿರ್ ಲುದ್ಯಾನ್ವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಚಿತ್ರ : ಕಭಿ ಕಭಿ
कभी कभी मेरे दिल में ख्याल आता है
कि जैसे तुझको बनाया गया है मेरे लिए
तू अबसे पहले सितारों में बस रही थी कहीं
तुझे ज़मीन पे बुलाया गया है मेरे लिए .
कभी कभी मेरे दिल में ख़याल आता है
कि ये बदन ये निगाहें मेरी अमानत हैं
ये गेसुओं कि घनी छाओं है मेरी खातिर
ये होंठ और ये बाहें मेरी अमानत हैं .
कभी कभी मेरे दिल में ख़याल आता है
कि जैसे बजती है शहनाइयां सी राहों में
सुहाग रात है घूंघट उठा रहा हूँ मैं
सिमट रही है तू शर्मा के अपनी बाहों में .
कभी कभी मेरे दिल में ख़याल आता है .
कि जैसे तू मुझे चाहेगी उम्र भर यूँ ही
उठेगी मेरी तरफ प्यार कि नज़र यूँ ही
मैं जानता हूँ कि तू गैर है मगर यूँ ही
कभी कभी मेरे दिल में ख़याल आता है.
ಮೂಲ ರಚನೆ :ಸಾಹಿರ್ ಲುದ್ಯಾನ್ವಿ ಚಿತ್ರ : ಕಭಿ ಕಭಿ
Tuesday, April 24, 2012
Monday, April 23, 2012
ಅವನು
ಜ್ಞಾನದ ಮಾತು ನುಡಿದು
ಜೀವನದ ಪಾಠ ತಿಳಿಸಿ
ಇದ್ದಕ್ಕಿದ್ದಂತೆ ಹೇಳದೆ ಕೇಳದೆ
ಮಾಯವಾದ ಅವನು!
ಬೆರಳ ಹಿಡಿದು ನನ್ನ
ನಡೆಯಲು ಕಲಿಸಿದ
ಕೊಂಚ ದೂರ ನಡೆಯುತ್ತಲೇ
ಮರೆಯಾದ ಅವನು !
ನನ್ನ ಕಣ್ಣೀರ ಒರೆಸಿ
ನನ್ನನ್ನು ನಗಿಸಿದ
ಸಂತೋಷದಿಂದ ಅಟ್ಟ ಹಾಸ ಮಾಡುತ್ತಲೇ
ಕಣ್ಮರೆಯಾದ ಅವನು !
ಈಗ ಅಪೂರ್ಣ ನನ್ನ ಕಾವ್ಯ
ನಾನು ಗುರು ಇದ್ದು ಇಲ್ಲದ ಏಕಲವ್ಯ
ನಡು ಮಾರ್ಗದಲ್ಲಿ ನನ್ನನ್ನು ಅನಾಥ ಮಾಡಿ
ಬಿಟ್ಟು ಹೋದ ಅವನು!
by ಹರೀಶ್ ಶೆಟ್ಟಿ, ಶಿರ್ವ
ಜೀವನದ ಪಾಠ ತಿಳಿಸಿ
ಇದ್ದಕ್ಕಿದ್ದಂತೆ ಹೇಳದೆ ಕೇಳದೆ
ಮಾಯವಾದ ಅವನು!
ಬೆರಳ ಹಿಡಿದು ನನ್ನ
ನಡೆಯಲು ಕಲಿಸಿದ
ಕೊಂಚ ದೂರ ನಡೆಯುತ್ತಲೇ
ಮರೆಯಾದ ಅವನು !
ನನ್ನ ಕಣ್ಣೀರ ಒರೆಸಿ
ನನ್ನನ್ನು ನಗಿಸಿದ
ಸಂತೋಷದಿಂದ ಅಟ್ಟ ಹಾಸ ಮಾಡುತ್ತಲೇ
ಕಣ್ಮರೆಯಾದ ಅವನು !
ಈಗ ಅಪೂರ್ಣ ನನ್ನ ಕಾವ್ಯ
ನಾನು ಗುರು ಇದ್ದು ಇಲ್ಲದ ಏಕಲವ್ಯ
ನಡು ಮಾರ್ಗದಲ್ಲಿ ನನ್ನನ್ನು ಅನಾಥ ಮಾಡಿ
ಬಿಟ್ಟು ಹೋದ ಅವನು!
by ಹರೀಶ್ ಶೆಟ್ಟಿ, ಶಿರ್ವ
Sunday, April 22, 2012
ನನಗೇನು ಬೇಸರವಿಲ್ಲ
ಬೀಜ ಬಿತ್ತು
ನೀರು ಹಾಕಿ ಸಾಕಿದೆ
ಗಿಡವಾಗಿ ಬೆಳೆದು
ಮರವಾದ ನಂತರ
ಹಣ್ಣು ಕೊಡದಿದ್ದರೂ ವ್ಯಥೆ ಇಲ್ಲ
ಕರ್ತವ್ಯ ನಿಭಾಯಿಸುವವನಿಗೆ ಫಲದ ಆಸೆ ಇಲ್ಲ
ನನಗೇನು ಬೇಸರವಿಲ್ಲ !
ಸೂರ್ಯ ನನ್ನದಲ್ಲ
ಆದರೆ ಅದರಿಂದ ಸಿಗುವ ಕಿರಣ ನನ್ನದು
ಬಿಸಿಲ ಕೊಟ್ಟು
ಬೆವರು ಹೀರಿದರೂ ತೊಂದರೆ ಇಲ್ಲ
ಶ್ರಮ ಜೀವಿಗೆ ಕಷ್ಟದ ಪರವೆ ಇಲ್ಲ
ನನಗೇನು ಬೇಸರವಿಲ್ಲ!
ಸ್ನೇಹ ಅಮರ
ಜನುಮದ ಬಂಧನ
ಬಳಿ ಬಂದು
ದೂರ ಮಾಡಿದರೂ ಚಿಂತೆ ಇಲ್ಲ
ಪ್ರೀತಿ ಹೃದಯದಲಿ ಕಹಿ ಇಲ್ಲ
ನನಗೇನು ಬೇಸರವಿಲ್ಲ !
by ಹರೀಶ್ ಶೆಟ್ಟಿ, ಶಿರ್ವ
ನೀರು ಹಾಕಿ ಸಾಕಿದೆ
ಗಿಡವಾಗಿ ಬೆಳೆದು
ಮರವಾದ ನಂತರ
ಹಣ್ಣು ಕೊಡದಿದ್ದರೂ ವ್ಯಥೆ ಇಲ್ಲ
ಕರ್ತವ್ಯ ನಿಭಾಯಿಸುವವನಿಗೆ ಫಲದ ಆಸೆ ಇಲ್ಲ
ನನಗೇನು ಬೇಸರವಿಲ್ಲ !
ಸೂರ್ಯ ನನ್ನದಲ್ಲ
ಆದರೆ ಅದರಿಂದ ಸಿಗುವ ಕಿರಣ ನನ್ನದು
ಬಿಸಿಲ ಕೊಟ್ಟು
ಬೆವರು ಹೀರಿದರೂ ತೊಂದರೆ ಇಲ್ಲ
ಶ್ರಮ ಜೀವಿಗೆ ಕಷ್ಟದ ಪರವೆ ಇಲ್ಲ
ನನಗೇನು ಬೇಸರವಿಲ್ಲ!
ಸ್ನೇಹ ಅಮರ
ಜನುಮದ ಬಂಧನ
ಬಳಿ ಬಂದು
ದೂರ ಮಾಡಿದರೂ ಚಿಂತೆ ಇಲ್ಲ
ಪ್ರೀತಿ ಹೃದಯದಲಿ ಕಹಿ ಇಲ್ಲ
ನನಗೇನು ಬೇಸರವಿಲ್ಲ !
by ಹರೀಶ್ ಶೆಟ್ಟಿ, ಶಿರ್ವ
ಗೋಳಿ ಬಜೆ
ಆ ದಿವಸ ನಾನು ನನ್ನ ಮಡದಿ ಸರಿತಾ ಹಾಗು ಮಗ ಸಾಯೀಶ್ ಜೊತೆ ಉಡುಪಿ ಪೇಟೆಗೆ ಹೋಗಿದ್ದೆವು. ಅಲ್ಲಿ ನನಗೆ ರೈಲ್ವೆ ನಿಲ್ದಾಣದಲ್ಲಿ ಸ್ವಲ್ಪ ಕೆಲಸ ಇತ್ತು ಹಾಗು ಸರಿತಾಳಿಗೆ ಸ್ವಲ್ಪ ವಸ್ತು ಖರೀದಿ ಸಹ ಮಾಡಲಿಕ್ಕೆ ಇತ್ತು .
ಮಧ್ಯಾಹ್ನದ ಬಿಸಿಲಲ್ಲಿ ನಾವು ಶಾಪಿಂಗ್ ಮಾಡುತ ಮಾಡುತ ಸೋತು ಹೋಗಿದ್ದೆವು. ಹೋಟೆಲ್ ಹೋಗಿ ಚಾಹ ತಿಂಡಿ ಮಾಡಿದು ಆಯಿತು. ಮನೆಯಲ್ಲಿ ಸರಿತಾಳ ತಾಯಿ ಹಾಗು ಅವಳ ದೊಡ್ಡ (ಅಜ್ಜಿ)ಗೋಸ್ಕರ ಗೋಳಿ ಬಜೆ (ಮಂಗಳೂರು ಪ್ರಸಿದ್ದ ಮೈದಾ ಹಿಟ್ಟಿಗೆ ಮಜ್ಜಿಗೆ, ಸೋಡಾ, ಉಪ್ಪು, ಖಾರ ಬೆರೆಸಿ ಎಣ್ಣೆಯಲ್ಲಿ ಕರಿದ ತಿಂಡಿ) ಪ್ಯಾಕ್ ಮಾಡಿಸಿ ನಾನು ಸರಿತಾ ಹಾಗು ಸಾಯೀಶ್ ಇಬ್ಬರನ್ನು ಕಟಪಾಡಿ ಹೋಗುವ ಬಸ್ಸಲ್ಲಿ ಸೀಟ್ ಮಾಡಿ ಕೊಟ್ಟು ನಾನು ರೈಲ್ವೆ ನಿಲ್ದಾಣ ಹೋಗಿ ಕೆಲಸ ಮುಗಿಸಿ ನಂತರ ಬರುತ್ತೇನೆಂದು ಅವರಿಗೆ ಹೇಳಿದೆ.
ಮಧ್ಯಾಹ್ನದ ಉರಿ ಬಿಸಿಲ ಕಾರಣ ಬಸ್ಸಲ್ಲಿ ಕುಳಿತಿದ್ದ ಎಲ್ಲ ಜನರ ಮುಖ ಸೋತು ಬಾಡಿ ಹೋಗಿತ್ತು. ನಾನು ಬಸ್ಸಿಂದ ಕೆಳಗೆ ಬಂದು " ಓಕೆ ಬೈ " ಎಂದು ಹೇಳುವಾಗ, ನನ್ನ ಮಗ ಸಾಯೀಶ್ ಜೋರಿನಿಂದ " ಪಪ್ಪಾ ಉಂದು ಗೋಳಿ ಬಜೆ ಮಸ್ತ್ ಬೆಚ್ಚ ಉಂಡು" (ಪಪ್ಪಾ ಈ ಗೋಳಿ ಬಜೆ ತುಂಬಾ ಬಿಸಿ ಇದೆ ) ಎಂದು ಹೇಳಿದ.
ಸಾಯೀಶ್ ನ ಮಾತು ಕೇಳಿ ಬಸ್ಸಲಿ ಬಾಡು ಮುಖ ಮಾಡಿ ಕುಳಿತಿದ್ದ ಎಲ್ಲ ಜನರು ಒಮ್ಮೆಲೇ ನಕ್ಕಿದೆ ನಕ್ಕಿದು ಹಾಗು ನನಗೂ ನಗೆ ತಡೆಯಲಾಗಲಿಲ್ಲ.
by ಹರೀಶ್ ಶೆಟ್ಟಿ, ಶಿರ್ವ
ಮಧ್ಯಾಹ್ನದ ಬಿಸಿಲಲ್ಲಿ ನಾವು ಶಾಪಿಂಗ್ ಮಾಡುತ ಮಾಡುತ ಸೋತು ಹೋಗಿದ್ದೆವು. ಹೋಟೆಲ್ ಹೋಗಿ ಚಾಹ ತಿಂಡಿ ಮಾಡಿದು ಆಯಿತು. ಮನೆಯಲ್ಲಿ ಸರಿತಾಳ ತಾಯಿ ಹಾಗು ಅವಳ ದೊಡ್ಡ (ಅಜ್ಜಿ)ಗೋಸ್ಕರ ಗೋಳಿ ಬಜೆ (ಮಂಗಳೂರು ಪ್ರಸಿದ್ದ ಮೈದಾ ಹಿಟ್ಟಿಗೆ ಮಜ್ಜಿಗೆ, ಸೋಡಾ, ಉಪ್ಪು, ಖಾರ ಬೆರೆಸಿ ಎಣ್ಣೆಯಲ್ಲಿ ಕರಿದ ತಿಂಡಿ) ಪ್ಯಾಕ್ ಮಾಡಿಸಿ ನಾನು ಸರಿತಾ ಹಾಗು ಸಾಯೀಶ್ ಇಬ್ಬರನ್ನು ಕಟಪಾಡಿ ಹೋಗುವ ಬಸ್ಸಲ್ಲಿ ಸೀಟ್ ಮಾಡಿ ಕೊಟ್ಟು ನಾನು ರೈಲ್ವೆ ನಿಲ್ದಾಣ ಹೋಗಿ ಕೆಲಸ ಮುಗಿಸಿ ನಂತರ ಬರುತ್ತೇನೆಂದು ಅವರಿಗೆ ಹೇಳಿದೆ.
ಮಧ್ಯಾಹ್ನದ ಉರಿ ಬಿಸಿಲ ಕಾರಣ ಬಸ್ಸಲ್ಲಿ ಕುಳಿತಿದ್ದ ಎಲ್ಲ ಜನರ ಮುಖ ಸೋತು ಬಾಡಿ ಹೋಗಿತ್ತು. ನಾನು ಬಸ್ಸಿಂದ ಕೆಳಗೆ ಬಂದು " ಓಕೆ ಬೈ " ಎಂದು ಹೇಳುವಾಗ, ನನ್ನ ಮಗ ಸಾಯೀಶ್ ಜೋರಿನಿಂದ " ಪಪ್ಪಾ ಉಂದು ಗೋಳಿ ಬಜೆ ಮಸ್ತ್ ಬೆಚ್ಚ ಉಂಡು" (ಪಪ್ಪಾ ಈ ಗೋಳಿ ಬಜೆ ತುಂಬಾ ಬಿಸಿ ಇದೆ ) ಎಂದು ಹೇಳಿದ.
ಸಾಯೀಶ್ ನ ಮಾತು ಕೇಳಿ ಬಸ್ಸಲಿ ಬಾಡು ಮುಖ ಮಾಡಿ ಕುಳಿತಿದ್ದ ಎಲ್ಲ ಜನರು ಒಮ್ಮೆಲೇ ನಕ್ಕಿದೆ ನಕ್ಕಿದು ಹಾಗು ನನಗೂ ನಗೆ ತಡೆಯಲಾಗಲಿಲ್ಲ.
by ಹರೀಶ್ ಶೆಟ್ಟಿ, ಶಿರ್ವ
Saturday, April 21, 2012
ಕಾಬಾ ಮತ್ತು ಸೋಮನಾಥ್
ಹುಲ್ಲ ಮೇಲೆ ಆಡು ಓಡುತ ಒಂದು ಮಗು
ಬಳಿ ತಾಯಿ ನಿಂತಿದ್ದಾಳೆ ಬೀರುತ ನಗು
ನನಗೆ ಆಶ್ಚರ್ಯ ಯಾಕೆ ಪ್ರಪಂಚ
ಕಾಬಾ ಮತ್ತು ಸೋಮನಾಥ್ ಗೆ
ಹೋಗುತ್ತಾರೆಂದು ಬಿಟ್ಟು ಈ ಸೊಬಗು .......
(ಉರ್ದು ಶಾಯರ್ ನಿದಾ ಫಾಜಲಿ ಅವರ ಪ್ರಸಿದ್ದ ಶಾಯರಿ )
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
Ghaas Pe khelta ek bachha,
Paas Maa Muskurati Hai,
Mujhko Hairat hai Kyo Duniya,
Kaaba aur Somnath Jaati hai.
- Nida Fazli
Paas Maa Muskurati Hai,
Mujhko Hairat hai Kyo Duniya,
Kaaba aur Somnath Jaati hai.
- Nida Fazli
Friday, April 20, 2012
Thursday, April 19, 2012
Tuesday, April 17, 2012
Monday, April 16, 2012
Sunday, April 15, 2012
ಗಾಳಿ
ಅಲ್ಲಿ ಇಲ್ಲಿ
ಅಲ್ಲಲ್ಲಿ ಎಲ್ಲೆಲ್ಲಿ
ನಾನು ಗಾಳಿ !
ನನಗಿಲ್ಲ ತಡೆ
ತಿರುಗುವೆ ಎಲ್ಲ ಕಡೆ
ನಾನು ಎಲ್ಲೆಡೆ !
ನನಗಿಲ್ಲ ಭಯ
ನನಗಿಲ್ಲ ಸಮಯ
ನಾನು ಅಭಯ !
ನನಗಿಲ್ಲ ಊರು ಕೇರು
ನನಗಿಲ್ಲ ಪುರ ಪಟ್ಟಣ
ನಾನು ಹೋದಲ್ಲಿ ಪ್ರಯಾಣ !
ನನಗಿಲ್ಲ ಮನೆ ಮಠ
ನನಗಿಲ್ಲ ಸ್ಥಿರ ನಿವಾಸ
ನಾನು ಅಲೆಮಾರಿ !
ನನಗಿಲ್ಲ ವ್ಯಥೆ ಚಿಂತೆ
ನನಗಿಲ್ಲ ಆಸೆ ಆಕಾಂಕ್ಷೆ
ನಾನು ನಿಶ್ಚಿಂತ !
ನನಗಿಲ್ಲ ದಿನ ರಾತ್ರಿ
ನನಗಿಲ್ಲ ನಿದ್ರೆ ಆಲಸ್ಯ
ನಾನು ಶಾಶ್ವತ ಯಾತ್ರಿ !
by ಹರೀಶ್ ಶೆಟ್ಟಿ, ಶಿರ್ವ
ಅಲ್ಲಲ್ಲಿ ಎಲ್ಲೆಲ್ಲಿ
ನಾನು ಗಾಳಿ !
ನನಗಿಲ್ಲ ತಡೆ
ತಿರುಗುವೆ ಎಲ್ಲ ಕಡೆ
ನಾನು ಎಲ್ಲೆಡೆ !
ನನಗಿಲ್ಲ ಭಯ
ನನಗಿಲ್ಲ ಸಮಯ
ನಾನು ಅಭಯ !
ನನಗಿಲ್ಲ ಊರು ಕೇರು
ನನಗಿಲ್ಲ ಪುರ ಪಟ್ಟಣ
ನಾನು ಹೋದಲ್ಲಿ ಪ್ರಯಾಣ !
ನನಗಿಲ್ಲ ಮನೆ ಮಠ
ನನಗಿಲ್ಲ ಸ್ಥಿರ ನಿವಾಸ
ನಾನು ಅಲೆಮಾರಿ !
ನನಗಿಲ್ಲ ವ್ಯಥೆ ಚಿಂತೆ
ನನಗಿಲ್ಲ ಆಸೆ ಆಕಾಂಕ್ಷೆ
ನಾನು ನಿಶ್ಚಿಂತ !
ನನಗಿಲ್ಲ ದಿನ ರಾತ್ರಿ
ನನಗಿಲ್ಲ ನಿದ್ರೆ ಆಲಸ್ಯ
ನಾನು ಶಾಶ್ವತ ಯಾತ್ರಿ !
by ಹರೀಶ್ ಶೆಟ್ಟಿ, ಶಿರ್ವ
ಮುಪ್ಪು ಬದುಕು
ಮನಸ್ಸಲಿ ತಳಮಳ
ಭಾವನೆಗಳು ಸುಪ್ತ
ಆಗು ಹೋಗುಗಳ ಅರಿವಿಲ್ಲ !
ಶೂನ್ಯ ಆಲೋಚನೆ
ಏಕಾಂತದ ಬಯಕೆ
ಎಲ್ಲೊ ದೂರ ಹೋಗಬೇಕೆಂಬ ಇಚ್ಛೆ !
ಕರಗಿದ ಶರೀರ
ಸೇರದ ಆಹಾರ
ಇಲ್ಲ ಪ್ರಪಂಚದ ಗೋಚರ !
ಸೋತ ಕಲ್ಪನೆ
ಅರ್ಥವಾಗದ ಕನಸು
ಏನೂ ಬೇಡ ಎಂಬ ವಿಚಾರ!
ಅನಂತ ರೋಗ
ದಿನ ರಾತ್ರಿ ಮದ್ದಿನ ಭೋಗ
ಶಕ್ತಿ ರಹಿತ ತ್ರಾಣವಿಲ್ಲದ ಜೀವ !
ಅತೃಪ್ತ ಜೀವನ
ಮುಗಿದ ಯೌವನ
ಭಾರವಾಗಿದೆ ಮುಪ್ಪು ಬದುಕು !
by ಹರೀಶ್ ಶೆಟ್ಟಿ , ಶಿರ್ವ
ಭಾವನೆಗಳು ಸುಪ್ತ
ಆಗು ಹೋಗುಗಳ ಅರಿವಿಲ್ಲ !
ಶೂನ್ಯ ಆಲೋಚನೆ
ಏಕಾಂತದ ಬಯಕೆ
ಎಲ್ಲೊ ದೂರ ಹೋಗಬೇಕೆಂಬ ಇಚ್ಛೆ !
ಕರಗಿದ ಶರೀರ
ಸೇರದ ಆಹಾರ
ಇಲ್ಲ ಪ್ರಪಂಚದ ಗೋಚರ !
ಸೋತ ಕಲ್ಪನೆ
ಅರ್ಥವಾಗದ ಕನಸು
ಏನೂ ಬೇಡ ಎಂಬ ವಿಚಾರ!
ಅನಂತ ರೋಗ
ದಿನ ರಾತ್ರಿ ಮದ್ದಿನ ಭೋಗ
ಶಕ್ತಿ ರಹಿತ ತ್ರಾಣವಿಲ್ಲದ ಜೀವ !
ಅತೃಪ್ತ ಜೀವನ
ಮುಗಿದ ಯೌವನ
ಭಾರವಾಗಿದೆ ಮುಪ್ಪು ಬದುಕು !
by ಹರೀಶ್ ಶೆಟ್ಟಿ , ಶಿರ್ವ
Thursday, April 12, 2012
ಹೊಸ ಬೆಳಕು ಮತ್ತು ತಾವರೆ
ಆಕಾಶದ ದ್ವಾರ ತೆರೆದು
ರವಿ ಹೊರ ಬಂದು ಹರಡುತ್ತಿದ್ದಾನೆ
ತನ್ನ ಕಿರಣಗಳನ್ನು ಹರ್ಷದಿಂದ!
ಕತ್ತಲ ನಿಲುವಂಗಿ ತೊರೆದು
ಧರೆ ಹೊಸ ಬೆಳಕು ಪಡೆದು
ಮೆರೆದಾಡುತ್ತಿದೆ ಹೆಮ್ಮೆಯಿಂದ!
ಮುಂಜಾನೆ ಆಯಿತು
ತಾವರೆ ತೆರೆಯುತ್ತಿದೆ
ತನ್ನ ದಳಗಳನ್ನು ನೆಮ್ಮದಿಯಿಂದ !
ಮುದುಡಿದ ತಾವರೆ
ಪಕಳೆ ತೆರೆದು ಅರಳಿತು
ಪರಿಸರ ಮೆರೆಯಿತು ಸೌಂದರ್ಯದಿಂದ !
ಮಂದ ಮಂದ ಶಾಂತ ಸರೋವರ
ಸಪ್ತ ಬಣ್ಣದ ಬಟ್ಟೆ ಧರಿಸಿ ಹೊರಡುತ್ತಿದೆ
ಹರಿಯಲು ಆನಂದ ಉಲ್ಲಾಸದಿಂದ !
ಅನೇಕ ಆಸೆ ಆಕಾಂಕ್ಷೆಗಳನ್ನು ಜನಿಸಿ
ತಾವರೆಯ ಎಸಳು ಹೊಳೆಯುತ್ತಿದೆ
ಬೆಳಿಗ್ಗೆಯ ಸೂರ್ಯ ಕಿರಣದಿಂದ !
by ಹರೀಶ್ ಶೆಟ್ಟಿ, ಶಿರ್ವ
ರವಿ ಹೊರ ಬಂದು ಹರಡುತ್ತಿದ್ದಾನೆ
ತನ್ನ ಕಿರಣಗಳನ್ನು ಹರ್ಷದಿಂದ!
ಕತ್ತಲ ನಿಲುವಂಗಿ ತೊರೆದು
ಧರೆ ಹೊಸ ಬೆಳಕು ಪಡೆದು
ಮೆರೆದಾಡುತ್ತಿದೆ ಹೆಮ್ಮೆಯಿಂದ!
ಮುಂಜಾನೆ ಆಯಿತು
ತಾವರೆ ತೆರೆಯುತ್ತಿದೆ
ತನ್ನ ದಳಗಳನ್ನು ನೆಮ್ಮದಿಯಿಂದ !
ಮುದುಡಿದ ತಾವರೆ
ಪಕಳೆ ತೆರೆದು ಅರಳಿತು
ಪರಿಸರ ಮೆರೆಯಿತು ಸೌಂದರ್ಯದಿಂದ !
ಮಂದ ಮಂದ ಶಾಂತ ಸರೋವರ
ಸಪ್ತ ಬಣ್ಣದ ಬಟ್ಟೆ ಧರಿಸಿ ಹೊರಡುತ್ತಿದೆ
ಹರಿಯಲು ಆನಂದ ಉಲ್ಲಾಸದಿಂದ !
ಅನೇಕ ಆಸೆ ಆಕಾಂಕ್ಷೆಗಳನ್ನು ಜನಿಸಿ
ತಾವರೆಯ ಎಸಳು ಹೊಳೆಯುತ್ತಿದೆ
ಬೆಳಿಗ್ಗೆಯ ಸೂರ್ಯ ಕಿರಣದಿಂದ !
by ಹರೀಶ್ ಶೆಟ್ಟಿ, ಶಿರ್ವ
Thursday, April 5, 2012
ಪ್ರೀತಿಯ ಆ ದಿನ
ಆ ದಿನಗಳು ಎಷ್ಟು ಚಂದ
ಮಧ್ಯಾಹ್ನದ ಉರಿ ಬಿಸಿಲಲ್ಲಿ
ನೀನು ಬಂದು ಮಾವಿನ ಮರದ
ಹಠಮಾರಿ ಛಾಯೆಯಲಿ
ನನ್ನನ್ನು ಕಾಯುತ ಕುಳಿತು ಕೊಳ್ಳುತ್ತಿದ್ದೆ!
ನಾನು ನನ್ನ ನಿತ್ಯ ಸ್ವಭಾವದಂತೆ
ವಿಳಂಬವಾಗಿ ಹಿಂದೆಯಿಂದ ಬಂದು
ನನ್ನ ಕೈಯಿಂದ
ನಿನ್ನ ಕಣ್ಣು ಮುಚ್ಚಿ
ಯಾರೆಂದು ಕೇಳುತ್ತಿದ್ದೆ !
ನೀನು ನಿನ್ನ ಸುಳ್ಳು ಕೋಪ
ತೋರಿಸಿ ಮುನಿದಾಗ
ನಾನು ನಿನ್ನನ್ನು ಸತಾಯಿಸುತ
ನಿನ್ನನ್ನು ಇನ್ನೂ ರೇಗಿಸುತ
ನಂತರ ನಿನ್ನನ್ನು ಒಲಿಸುತ್ತಿದ್ದೆ !
ಪ್ರೀತಿಯ ಬರದಲಿ
ನೀನು ನನ್ನನ್ನು ಅಪ್ಪಿಕೊಂಡಾಗ
ನಾನೂ ನಿನ್ನನ್ನು ಅಪ್ಪಿಕೊಂಡು
ಗಾಳಿಯು ಸುಸ್ತಾಗಿ ನಮ್ಮ ಮಧ್ಯೆದಿಂದ
ಹೋಗಲಾರದೆ ತನ್ನ ಮಾರ್ಗ ಬದಲಾಯಿಸುವಂತೆ ಮಾಡುತ್ತಿದ್ದೆ !
ಜೀವನದ ಪರಿಪಕ್ವತೆ
ನಾವಿಬ್ಬರು ತಿಳಿದಾಗ
ನಾವು ನಮ್ಮ ಪವಿತ್ರ ಪ್ರೇಮವನ್ನು ಮರೆತು
ಪ್ರತ್ಯೇಕವಾದ ನಂತರವೂ
ನಾನು ಆ ಮಾವಿನ ಮರದ ಅಡಿಯಲ್ಲಿ ಕುಳಿತು ನಿನ್ನನ್ನೆ ಕಾಯುತ್ತಿದ್ದೆ !
by ಹರೀಶ್ ಶೆಟ್ಟಿ, ಶಿರ್ವ
ಮಧ್ಯಾಹ್ನದ ಉರಿ ಬಿಸಿಲಲ್ಲಿ
ನೀನು ಬಂದು ಮಾವಿನ ಮರದ
ಹಠಮಾರಿ ಛಾಯೆಯಲಿ
ನನ್ನನ್ನು ಕಾಯುತ ಕುಳಿತು ಕೊಳ್ಳುತ್ತಿದ್ದೆ!
ನಾನು ನನ್ನ ನಿತ್ಯ ಸ್ವಭಾವದಂತೆ
ವಿಳಂಬವಾಗಿ ಹಿಂದೆಯಿಂದ ಬಂದು
ನನ್ನ ಕೈಯಿಂದ
ನಿನ್ನ ಕಣ್ಣು ಮುಚ್ಚಿ
ಯಾರೆಂದು ಕೇಳುತ್ತಿದ್ದೆ !
ನೀನು ನಿನ್ನ ಸುಳ್ಳು ಕೋಪ
ತೋರಿಸಿ ಮುನಿದಾಗ
ನಾನು ನಿನ್ನನ್ನು ಸತಾಯಿಸುತ
ನಿನ್ನನ್ನು ಇನ್ನೂ ರೇಗಿಸುತ
ನಂತರ ನಿನ್ನನ್ನು ಒಲಿಸುತ್ತಿದ್ದೆ !
ಪ್ರೀತಿಯ ಬರದಲಿ
ನೀನು ನನ್ನನ್ನು ಅಪ್ಪಿಕೊಂಡಾಗ
ನಾನೂ ನಿನ್ನನ್ನು ಅಪ್ಪಿಕೊಂಡು
ಗಾಳಿಯು ಸುಸ್ತಾಗಿ ನಮ್ಮ ಮಧ್ಯೆದಿಂದ
ಹೋಗಲಾರದೆ ತನ್ನ ಮಾರ್ಗ ಬದಲಾಯಿಸುವಂತೆ ಮಾಡುತ್ತಿದ್ದೆ !
ಜೀವನದ ಪರಿಪಕ್ವತೆ
ನಾವಿಬ್ಬರು ತಿಳಿದಾಗ
ನಾವು ನಮ್ಮ ಪವಿತ್ರ ಪ್ರೇಮವನ್ನು ಮರೆತು
ಪ್ರತ್ಯೇಕವಾದ ನಂತರವೂ
ನಾನು ಆ ಮಾವಿನ ಮರದ ಅಡಿಯಲ್ಲಿ ಕುಳಿತು ನಿನ್ನನ್ನೆ ಕಾಯುತ್ತಿದ್ದೆ !
by ಹರೀಶ್ ಶೆಟ್ಟಿ, ಶಿರ್ವ
Wednesday, April 4, 2012
ರಂಗೋಲಿ ಮತ್ತು ಅವಳು
ಸಣ್ಣ ದೊಡ್ಡ ಚೌಕವ ಬಿಡಿಸಿ
ವಿವಿಧ ಬಣ್ಣವ ತುಂಬಿ
ರಚಿಸಿದಳವಳು
ಜೀವನದ ಸುಂದರ ರಂಗೋಲಿ !
ಅವಳ ಜೀವನ ಹೀಗೆಯೇ
ಅನಾಥಾಲಯದಲಿ ಪಾಲನೆ
ಅಲ್ಲಿಯೇ ಶಿಕ್ಷಣೆ
ರಂಗೋಲಿಯಂತೆ ಸ್ವತಃ ಬರೆದಿದ್ದಳು ತನ್ನ ಹಣೆ !
ಸ್ವಾವಲಂಬಿ ಜೀವನ
ಕಷ್ಟ ನೋವುಗಳು ಘನ
ಸತ್ಯದ ಮಾರ್ಗ ಕಠಿನ
ಬದುಕಿನ ರಂಗೋಲಿ ಆಗಿತ್ತು ಸುಂದರ ಪಾವನ !
ಆದರೆ ಕ್ರೂರ ಜಗತ್ತು
ರಂಗೋಲಿಯ ಸೌಂದರ್ಯ ನೋಡಿ
ಆಯಿತು ಹೊಟ್ಟೆಕಿಚ್ಚು
ಅವಳ ಜೀವನದ ರಂಗೋಲಿಗೆ ಮಸಿದರು ಕಪ್ಪು!
ಆದರೆ ಅವಳು ಧೀರೆ
ಮಿಶ್ರಿತ ಬಣ್ಣಗಳನ್ನು ಒಟ್ಟು ಮಾಡಿ
ಪುನಃ ರಚಿಸಿದಳು ರಂಗೋಲಿ
ಜೀವನ ಆಯಿತು ಆಕರ್ಷಕ ಸುಂದರ ಅದ್ಬುತ ಮನೋಹರೆ !
by ಹರೀಶ್ ಶೆಟ್ಟಿ, ಶಿರ್ವ
ವಿವಿಧ ಬಣ್ಣವ ತುಂಬಿ
ರಚಿಸಿದಳವಳು
ಜೀವನದ ಸುಂದರ ರಂಗೋಲಿ !
ಅವಳ ಜೀವನ ಹೀಗೆಯೇ
ಅನಾಥಾಲಯದಲಿ ಪಾಲನೆ
ಅಲ್ಲಿಯೇ ಶಿಕ್ಷಣೆ
ರಂಗೋಲಿಯಂತೆ ಸ್ವತಃ ಬರೆದಿದ್ದಳು ತನ್ನ ಹಣೆ !
ಸ್ವಾವಲಂಬಿ ಜೀವನ
ಕಷ್ಟ ನೋವುಗಳು ಘನ
ಸತ್ಯದ ಮಾರ್ಗ ಕಠಿನ
ಬದುಕಿನ ರಂಗೋಲಿ ಆಗಿತ್ತು ಸುಂದರ ಪಾವನ !
ಆದರೆ ಕ್ರೂರ ಜಗತ್ತು
ರಂಗೋಲಿಯ ಸೌಂದರ್ಯ ನೋಡಿ
ಆಯಿತು ಹೊಟ್ಟೆಕಿಚ್ಚು
ಅವಳ ಜೀವನದ ರಂಗೋಲಿಗೆ ಮಸಿದರು ಕಪ್ಪು!
ಆದರೆ ಅವಳು ಧೀರೆ
ಮಿಶ್ರಿತ ಬಣ್ಣಗಳನ್ನು ಒಟ್ಟು ಮಾಡಿ
ಪುನಃ ರಚಿಸಿದಳು ರಂಗೋಲಿ
ಜೀವನ ಆಯಿತು ಆಕರ್ಷಕ ಸುಂದರ ಅದ್ಬುತ ಮನೋಹರೆ !
by ಹರೀಶ್ ಶೆಟ್ಟಿ, ಶಿರ್ವ
Tuesday, April 3, 2012
Sunday, April 1, 2012
ನನ್ನ ಹೃದಯ
ನನ್ನ ಹೃದಯ
ಮಣ್ಣಿನ ಹಣತೆ
ಅದರಲ್ಲಿ ಪ್ರೀತಿಯ ದೀಪ
ಹಚ್ಚಿ ಹೋಗದಿರು
ದುಃಖದ ಗಾಳಿಯಿಂದ ನಂದಿ ಹೋಗುವೆ!
ನನ್ನ ಹೃದಯ
ಕಮಲದ ಹೂವು
ಪ್ರೇಮದ ಸೂರ್ಯ ಕಿರಣ
ಹರಡಿ ಹೋಗದಿರು
ಅಗಲಿಕೆಯ ಅಂಧಕಾರದಲ್ಲಿ ಮುಚ್ಚಿ ಹೋಗುವೆ!
ನನ್ನ ಹೃದಯ
ರಾತ್ರಿಯ ತಮಸ್ಸು
ಹುಣ್ಣಿಮೆ ಚಂದ್ರನ ಅನುರಾಗ ಬೆಳಕು
ಬೀರಿ ಹೋಗದಿರು
ಅಮಾವಾಸ್ಯೆಯ ಕತ್ತಲಲ್ಲಿ ಮರೆಯಾಗಿ ಹೋಗುವೆ !
ನನ್ನ ಹೃದಯ
ಹಳೆ ಗುಡಿ
ದೇವಿಯಾಗಿ ಸ್ತಾಪಿತವಾಗಿ ಪ್ರೇಮ ಪ್ರಸಾದ
ನೀಡಿ ಹೋಗದಿರು
ನಿನ್ನ ಅನುಗ್ರಹವಿಲ್ಲದೆ ಕೊರಗಿ ಹೋಗುವೆ !
by ಹರೀಶ್ ಶೆಟ್ಟಿ, ಶಿರ್ವ
ಮಣ್ಣಿನ ಹಣತೆ
ಅದರಲ್ಲಿ ಪ್ರೀತಿಯ ದೀಪ
ಹಚ್ಚಿ ಹೋಗದಿರು
ದುಃಖದ ಗಾಳಿಯಿಂದ ನಂದಿ ಹೋಗುವೆ!
ನನ್ನ ಹೃದಯ
ಕಮಲದ ಹೂವು
ಪ್ರೇಮದ ಸೂರ್ಯ ಕಿರಣ
ಹರಡಿ ಹೋಗದಿರು
ಅಗಲಿಕೆಯ ಅಂಧಕಾರದಲ್ಲಿ ಮುಚ್ಚಿ ಹೋಗುವೆ!
ನನ್ನ ಹೃದಯ
ರಾತ್ರಿಯ ತಮಸ್ಸು
ಹುಣ್ಣಿಮೆ ಚಂದ್ರನ ಅನುರಾಗ ಬೆಳಕು
ಬೀರಿ ಹೋಗದಿರು
ಅಮಾವಾಸ್ಯೆಯ ಕತ್ತಲಲ್ಲಿ ಮರೆಯಾಗಿ ಹೋಗುವೆ !
ನನ್ನ ಹೃದಯ
ಹಳೆ ಗುಡಿ
ದೇವಿಯಾಗಿ ಸ್ತಾಪಿತವಾಗಿ ಪ್ರೇಮ ಪ್ರಸಾದ
ನೀಡಿ ಹೋಗದಿರು
ನಿನ್ನ ಅನುಗ್ರಹವಿಲ್ಲದೆ ಕೊರಗಿ ಹೋಗುವೆ !
by ಹರೀಶ್ ಶೆಟ್ಟಿ, ಶಿರ್ವ
Subscribe to:
Posts (Atom)
ಚಂದ್ರಯಾನ
ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ, ಚಂದ್ರನ ಮೇ...
-
ನೀಲ ಗಗನದ ನೆರಳಲಿ ದಿನ ರಾತ್ರಿಯ ಮಿಲನವಾಗುತ್ತದೆ ಹೃದಯ ಹಕ್ಕಿಯಾಗಿ ಹಾರುತ್ತದೆ ನಾನೆಲ್ಲಿಯೋ ಕಳೆದೋಗುತ್ತೇನೆ ನೀಲ ಗಗನದ.... ಯಾವುದೇ ಹೂವು ನಗುವಾಗ ಇನಿಯನ ...
-
ನಾನೊಂದು ಒಣಗಿದ ಮರ ಒಬ್ಬಂಟಿ ಈ ಬಂಜರ ಭೂಮಿಯಲಿ ಒಂದು ಕಾಲ ಇತ್ತು ನನ್ನದು ಸಹ ಆಗ ಈ ಭೂಮಿ ಫಲಿತವಾಗಿತ್ತು! ನನ್ನ ಎಲೆ ಹೂ ತುಂಬಿದ ರೆಂಬೆಯಿಂದ ತಂಗಾಳಿ ಬೀಸ...
-
ಜೇನು ನೊಣ ಜೇನು ನೊಣ ಜೇನು ನೊಣ ನಿನ್ನಲಿದೆ ಸಿಹಿಯ ಕಣ ಸಿಹಿ ಸಿಹಿ ಹುಡುಕುತ ಅಲ್ಲಿ ಇಲ್ಲಿ ತಿರುಗುತ ಹೂವಿನಿಂದ ಹೂವಿಗೆ ಮುಂಜಾನೆಯ ಶುಭಾಶಯ ನೀಡಿ ಅವರಿಂದ...