ಇದು ಏನಾಯಿತು
ಹೇಗಾಯಿತು
ಯಾವಾಗಾಯಿತು
ಏಕಾಯಿತು
ಆದಾಗ ಆಗಿಹೋಯಿತು
ಓ ಬಿಡು ಇದನ್ನೆಲ್ಲ ಯೋಚಿಸಬೇಡ
ಇದು ಏನಾಯಿತು....
ನಾನ್ಯಾಕೆ ಸುಳ್ಳು ದೂರು ನೀಡಲಿ
ಹೇಗಾಯಿತು
ಯಾವಾಗಾಯಿತು
ಏಕಾಯಿತು
ಆದಾಗ ಆಗಿಹೋಯಿತು
ಓ ಬಿಡು ಇದನ್ನೆಲ್ಲ ಯೋಚಿಸಬೇಡ
ಇದು ಏನಾಯಿತು....
ನಾನ್ಯಾಕೆ ಸುಳ್ಳು ದೂರು ನೀಡಲಿ
ಏನಾಯಿತು ಹೃದಯ ಮುರಿದಲ್ಲಿ
ಗಾಜಿನ ಆಟಿಕೆಯಾಗಿತ್ತು
ಏನಾದರೊಂದು ಆಗಲಿಕ್ಕಿತ್ತು
ಆಯಿತು
ಇದು ಏನಾಯಿತು...
ನಾನೇನು ನೋಡಿದೆ ಕೇಳಿದೆ
ಏನು ಹೇಳಲಿ ಅದರ ಬಗ್ಗೆ
ಸ್ವಪ್ನ ಸುಂದರವಾಗಿತ್ತು
ಬೇಗನೆ ಮುಗಿಯಲಿತ್ತು
ಮುಗಿಯಿತು
ಇದು ಏನಾಯಿತು...
ಹೇ ಹೃದಯ ಬಾ ಕುಡಿದು ನಲಿಯುವ
ಈ ಬೀದಿಯಲ್ಲಿಯೆ ತಿರುಗುವ
ಇಲ್ಲಿ ನಿನಗೆ ಕಳೆದುಹೋಗಲ್ಲಿಕ್ಕಿತ್ತು
ಅಪಕೀರ್ತಿಗೆ ಒಳಗಾಗಲ್ಲಿತ್ತು
ಆಯಿತು
ಇದು ಏನಾಯಿತು...
ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಆರ್ ಡಿ ಬರ್ಮನ್
ಚಿತ್ರ : ಅಮರ್ ಪ್ರೇಮ್
yeh kya huwa, kaise huwa, kab huwa
kyo huwa, jab huwa, tab huwa,
o chhodo, yeh naa socho
ham kyo shikawa kare jhutha,
kya huwa jo dil tuta
shishe kaa khilauna tha,
kuchh naa kuchh toh hona tha, huwa
hamane jo dekha tha, suna tha,
kya bataye woh kya tha
sapna salona tha,
khatam toh hona tha, huwa
aaye dil chal pikar jhume,
inhi galiyo me ghume
yaha tujhe khona tha,
badanam hona tha, huwa
No comments:
Post a Comment