Saturday, December 1, 2012

ಇಂದು ವಾತಾವರಣ ಬಹಳ

ಇಂದು ವಾತಾವರಣ ಬಹಳ 
ವಂಚಿಸುತ್ತಿದೆ ಬಹಳ
ವಂಚಿಸುತ್ತಿದೆ ಇಂದು ವಾತಾವರಣ
ಬರಲಿದೆ ಏನೋ ಬಿರುಗಾಳಿ ಯಾವುದೇ
ಬಿರುಗಾಳಿ ಯಾವುದೇ
ಇಂದು ವಾತಾವರಣ
ಇಂದು ವಾತಾವರಣ ಬಹಳ...

ಏನಾಗಿದೆ
ಏನೂ ಆಗಿಲ್ಲ
ಮಾತು ಏನೆಂದು 
ಏನೂ ಗೊತ್ತಿಲ್ಲ
ನನ್ನಿಂದ ಏನೋ ತಪ್ಪಾಗಿದ್ದರೆ
ಇದರಲ್ಲಿ ತಪ್ಪು ನನ್ನದೇನಿಲ್ಲ
ಸುಂದರ ನೀನಾಗಿರುವೆ 
ನಿಸರ್ಗ ಯೌವನವಾಗಿದೆ
ಇಂದು ವಾತಾವರಣ ಬಹಳ...

ಕರಿ ಕರಿ ಮೋಡ
ಹೆದರುತ್ತಿದೆ
ಗಾಳಿಯೂ
ಶೀತಲ ನಿಟ್ಟುಸಿರು ಬಿಡುತ್ತಿದೆ
ಎಲ್ಲರಿಗೆ ಏನೇನೊ
ಅಂದಾಜು ಆಗುತ್ತಿದೆ
ಪ್ರತಿ ಮೊಗ್ಗು
ನನ್ನ ಮೇಲೆ ಸಂಶಯಿಸುತ್ತಿದೆ
ಹೂವಿನ ಹೃದಯ ಸಹ
ಏನೋ ಯೋಚಿಸುತ್ತಿದೆ
ಇಂದು ವಾತಾವರಣ ಬಹಳ .......

ಓ ನನ್ನ ಗೆಳತಿ
ಓ ಒಲವೆ
ಹೃದಯ ನೀಡಿದ್ದೇನೆ 
ನಿನ್ನ ವಶದಲಿ
ನಿನ್ನ ಇಚ್ಛೆಯಂತೆ 
ಮಾತು ನಡೆಯಲಿದೆ
ಜೀವಿಸಲು ಬಿಡು ಅಥವಾ 
ನೀ ಕೊಲ್ಲು ನನಗೆ
ನಿನ್ನ ಕೈಯಲ್ಲಿ ನನ್ನ ಜೀವನ ಇದೆ
ಇಂದು ವಾತಾವರಣ ಬಹಳ...

ಮೂಲ :ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಲಕ್ಷ್ಮಿಕಾಂತ್ ಪ್ಯಾರೇಲಾಲ್
ಚಿತ್ರ : ಲೋಫರ್

aaj mausam bada, beiman hai bada
beimann hai aaj mausam
aane vala koi tufan hai
koi tufan hai aaj mausam

kya huwa hai, huwa kuchh nahee hai
bat kya hai pata kuchh nahee hai
mujhase koi kata ho gai toh
isame meree kata kuchh nahee hai
kubasurat hai tu rut javan hai
aaj mausam bada.....

kalee kalee ghata dar rahee hai
thadi aahe hava bhar rahee hai
sabako kya kya guman ho rahe hai
har kalee ham pe shak kar rahee hai
phulo kaa dil bhee kuchh badaguman hai
aaj mausam bada.....

ai mere yar ai husn vale
dil kiya maine tere havale
teree marjee pe abb bat thaharee
jine de chahe tu mar dale
tere hatho me abb meree jan hai
aaj mausam bada.....
www.youtube.com/watch?v=aSJ_jcEPOu0

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...