ಸಂಜೆ ೬ ಗಂಟೆ ಆದ ಕೂಡಲೇ ಕಚೇರಿಯಿಂದ ಹೊರ ಬಂದೆ.
ಸಂಜೆಗೆ ಹಿಂತಿರುಗುವಾಗ ನಾನು ದಿನ ನಡೆದುಕೊಂಡೇ ಹೋಗುವುದು, ಹೆಂಡತಿ ಸುಮಾ ದಿನ ಬೆಳ್ಳಿಗೆ ಜಾಗಿಂಗ್ ಮಾಡಲು ಹೋಗಿ ಎಂದು ಹೇಳುವುದನ್ನು ತಪ್ಪಿಸಲಿಕ್ಕೆ ಇದೊಂದು ನನ್ನ ಉಪಾಯವಾಗಿತ್ತು.
ಇಂದು ಏನೋ ಸ್ವಲ್ಪ ಹಸಿವು, ಮಧ್ಯಾಹ್ನ ಸುಮಾ ಕೊಟ್ಟ ಟಿಫನ್ ಲ್ಲಿ ಉಪ್ಪು ಮಸಾಲೆ ಇಲ್ಲದ ಅಡುಗೆ ಹೇಗೋ ತಿಂದಿದೆ, ಆ ಡಾಕ್ಟರ ನನಗೆ ಬ್ಲಡ್ ಪ್ರೆಶರ್ ಇದೆ ಎಂದು ಹೇಳಿದ ದಿನದಿಂದಲೇ ಸುಮಾ ನನ್ನ ಆಹಾರದಲ್ಲಿ ವ್ಯಾಪಕ ಬದಲಾವಣೆ ಮಾಡಿದ್ದಳು, ದಿನ ನಿತ್ಯ ಉಪ್ಪು ಮಸಾಲೆ ಕಡಿಮೆ ಎಣ್ಣೆ ಬಳಸಿದ ಆಹಾರ, ಈಗ ಎಣ್ಣೆಯ ಹಾಗು ರುಚಿಕಾರ ವಸ್ತು ಅಂದರೆ ನನಗೆ ಕನಸು. ಈ ವಿಷಯದಲ್ಲಿ ದಿನ ಜಗಳ ಸಹ ಆಗುತಿತ್ತು, ಎಷ್ಟೋ ಸಲ ಊಟ ಮಾಡದೆ ಕುಳಿತರೂ ಪ್ರಯೋಜನ ಆಗಲಿಲ್ಲ.
ಈಗ ನಿನ್ನೆಯ ವಿಷಯ ನೋಡಿ, ನನ್ನ ಮಗನಿಗೆ ಪರಾಟ ಅಂದರೆ ತುಂಬಾ ಇಷ್ಟ, ಬೆಣ್ಣೆ ಸುರಿದ ಪರಾಟ ಅಂದರೆ ನನಗೂ ತುಂಬಾ ಇಷ್ಟ, ನಾನು ಮನೆಗೆ ಬಂದಾಗ ಮಗ ಪರಾಟ ತಿನ್ನುತ್ತಿದ್ದ, ನನಗೂ ಖುಷಿ ಆಯಿತು ಚಲೋ ಇಂದು ಆದರೂ ಒಳ್ಳೆ ಊಟ ತಿನ್ನುವೆ ಎಂದು.
ಆದರೆ ಊಟದ ಸಮಯ ಅದೇ ಉಪ್ಪು ಮೆಣಸು ಇಲ್ಲದ ಪಲ್ಯ ಹಾಗು ಚಪಾತಿ, ಅದರ ಮೇಲೆ ಮಗ ಪರಾಟ ತೋರಿಸಿ ನನಗೆ ಚುಡಾಯಿಸುತ್ತಿದ್ದ, ನನ್ನ ತಲೆ ಬಿಸಿ ಆಯಿತು, ಸುಮಾಳಿಗೆ ಬಾಯಿಗೆ ಬಂದದ್ದು ಹೇಳಿ ಆಯಿತು, ಆದರೆ ಅವಳು ಕೇಳಿಯೂ ಕೇಳದ ಹಾಗೆ ತನ್ನದೇ ಕೆಲಸದಲ್ಲಿ ಮಗ್ನಳಾಗಿದ್ದಳು, ಅವಳ ಈ ವರ್ತನೆ ನನ್ನನ್ನು ಇನ್ನು ಕೋಪಿಸಿತು ಹಾಗು ನಾನು ನಾಳೆ ಯಾರಿಗೂ ಹೇಳದೆ ಹೋಟೆಲ್ ಹೋಗಿ ಸರಿ ಸಮೋಸ ,ಪರಾಟ ತಿನ್ನಬೇಕೆಂದು ನಿರ್ಧಾರಿಸಿದೆ.
ಅದಕ್ಕೇನೋ ಇಂದು ಕಚೇರಿಯಿಂದ ಹೊರ ಬಂದ ಕೂಡಲೇ ಹಸಿವಾಯಿತು, ಹೋಗುವ ದಾರಿಯಲ್ಲಿಯೇ ಇದ್ದ ಹೋಟೆಲ್ "ಬಾಂಬೆ ಚೌಪಾಟಿ" ಒಳಗೆ ಹೋದೆ, ಬಿಸಿ ಬಿಸಿ ಸಮೋಸ ಕಂಡು ಬೇಗ ಬೇಗನೆ ಆರ್ಡರ್ ಮಾಡಿದೆ, ಎಲ್ಲಿಲ್ಲದ ತೃಪ್ತಿ , ವಾಹ್, ಇನ್ನೆರಡು ಪ್ಲೇಟ್ ತಿಂದೆ,ಮತ್ತೆ ಪರಾಟ ತರಿಸಿ ಹೊಟ್ಟೆ ತುಂಬಾ ತಿಂದೆ, ಊಟ ಮಾಡದಿದ್ದಾಗ ಅವಳಿಗೂ ತಿಳಿಯಲಿ ಎಂದು ತೃಪ್ತ ಮನಸ್ಸಿಂದ ಮನೆಗೆ ಬಂದು ಮುಟ್ಟಿದೆ.
ಅಂಗಿ ಪ್ಯಾಂಟ್ ತೆಗೆದು ಕೈ ಕಾಲು ತೊಳೆಯಲು ಹೋಗುವವನೇ ಇದ್ದೆ, ಆಗ ಮಗ ಬಂದು "ಪಪ್ಪಾ ನಿಮಗೆ ಇಂದು ಪಾರ್ಟಿ, ಮಮ್ಮಿ ನಿಮಗಾಗಿ ಇಂದು ನಿಮ್ಮ ಮೆಚ್ಚಿನ "ವಡ ಪಾವ್ " ಮಾಡಿದ್ದಾಳೆ", ನಾನು ಅಲ್ಲಿಯೇ ಜಡವಾದೆ, ನಿನ್ನೆ ತುಂಬಾ ಕೋಪಿಸಿದ ಕಾರಣ ಏನೋ ಇಂದು ನನ್ನ ಮೆಚ್ಚಿನ "ವಡ ಪಾವ್" ಮಾಡಿಟ್ಟಿದಳು,ಎಷ್ಟು ಕಾಳಜಿ ಅವಳಿಗೆ ನನ್ನ, ಅವಳು ನನಗಾಗಿ ಅಲ್ಲವೇ ಉಪ್ಪು ಮಸಾಲೆ ಕಡಿಮೆ ಕೊಡುವುದು, ನನ್ನ ಆರೋಗ್ಯಕ್ಕಾಗಿ ಆಲ್ಲವೆ ....ಆದರೆ ನಾನು.... ಛೆ... ....ಇಂದೇ ನನಗೆ ಹೊರಗೆ ತಿನ್ನಬೇಕಿತ್ತೆ .
by ಹರೀಶ್ ಶೆಟ್ಟಿ, ಶಿರ್ವ

No comments:
Post a Comment