Monday, December 3, 2012

ಹೆಣ್ಣು ಹಣ್ಣು

ಹೂವಾಗಿ ಹುಟ್ಟಿ
ಹಣ್ಣಾಗಿ ಬೆಳೆದೆ
ಯೌವನ ತುಂಬಿ
ಸುಂದರ ಫಲವಾದೆ !

ಸುಖವಾಗಿದ್ದೆ
ತಾಯಿಯ ಸುಂದರ
ದಷ್ಟ ಪುಷ್ಟ ಗೆಲ್ಲಲ್ಲಿ 
ಸುಂದರ ರೂಪ ಪಡೆದು!

ಒಡಹುಟ್ಟಿದವರು ಸುತ್ತ ಮುತ್ತ
ಎಲೆ ಅಣ್ಣಂದಿರ ರಕ್ಷಣೆ
ದಿನ ರಾತ್ರಿ
ಹಾಯಾಗಿತ್ತು ಜೀವನ !

ಅಮ್ಮ ನೆರಳಲ್ಲಿ
ಬಂದು ತಂಗುವರು ಅನೇಕರು
ಕೆಲವರ ದೃಷ್ಟಿ ಕಪಟ
ಬಾಯಲ್ಲಿ ನೀರೂರಿಸಿ ನೋಡುವರು ನನಗೆ !

ಎಸೆದು ಕಲ್ಲ ದೃಷ್ಟಿ ನನ್ನಲ್ಲಿ
ಕಿತ್ತಾಕಲು ನೋಡುವರು
ಅಣ್ಣಂದಿರು ರಕ್ತ ರಂಜಿತ
ನನ್ನನ್ನು ರಕ್ಷಿಸಿ ಕೊನೆ ಉಸಿರೆಳೆದರು !

ಅಮ್ಮ ನಿಸ್ಸಹಾಯ
ಕಣ್ಣೀರಿಟ್ಟು ನೋಡುತ್ತಿದ್ದಳು
ಮೃದು ಗೊಂಬೆ ನಾನು
ಎಷ್ಟು ಸಮಯ ಪ್ರತಿಭಟಿಸಲಿ !

ತಾಯಿಯ ಮಡಿಲ ಶಾಖೆಯಿಂದ
ಅಗಲಿ ಕೆಲ ಬಿದ್ದೆ
ನೇರ ಆ ಕಾಮ ಪಿಶಾಚಿಯರ 
ದುಷ್ಟ ಬಾಹು ಬಂಧನಕ್ಕೆ!
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...