Thursday, December 6, 2012

ನಿನ್ನ ಜಗದಿಂದ

ನಿನ್ನ ಜಗದಿಂದ
ನಿಸ್ಸಹಾಯಕನಾಗಿ ಹೊರಟೆ
ನಾನು ತುಂಬಾ ದೂರ
ತುಂಬಾ ದೂರ
ತುಂಬಾ ದೂರ ಹೊರಟೆ-೨

ಈ ರೀತಿ ದೂರ ಅಂದರೆ
ಹಿಂತಿರುಗಿ ಬರಲಾರೆನು
ಅಂತಹ ಗಮ್ಯ ಅಂದರೆ
ಅಲ್ಲಿ ತನ್ನನ್ನೂ ಪಡೆಯಲಾರೆನು 
ಮತ್ತೆ ನಿಸ್ಸಹಾಯಕತೆ ಏನೆಂದು....
ಮತ್ತೆ ನಿಸ್ಸಹಾಯಕತೆ ಏನೆಂದು
ಅಷ್ಟು ಸಹ ಹೇಳಲಾರೆನು
ನಿನ್ನ ಜಗದಿಂದ...

ಕಣ್ಣು ತುಂಬಿ ಬಂದರೆ
ಕಣ್ಣೀರು ಕುಡಿಯುವೆ ನಾನು
ವೇದನೆ ಉಂಟಾದರೂ
ತುಟಿಯನ್ನು ಹೊಲಿಯುವೆ ನಾನು
ನಿನಗೆ ವಿಶ್ವಾಸ ನೀಡಿದ್ದೇನೆ...
ನಿನಗೆ ವಿಶ್ವಾಸ ನೀಡಿದ್ದೇನೆ
ಅದಕ್ಕಾಗಿ ಜೀವಿಸುವೆ ನಾನು
ನಿನ್ನ ಜಗದಿಂದ...

ಇದ್ದಲ್ಲಿ ಸಂತೋಷದಿಂದಿರು
ಆಶಿರ್ವಾದ ನಿನಗೆ ನನ್ನ
ನಿನ್ನ ಹಾದಿಯಿಂದ
ಪ್ರತ್ಯೇಕ ಹಾದಿ ಈಗ ನನ್ನ
ಏನಿಲ್ಲ ನನ್ನೊಟ್ಟಿಗೆ....
ಏನಿಲ್ಲ ನನ್ನೊಟ್ಟಿಗೆ
ಕೇವಲ ಇದೆ ತಪ್ಪುಗಳೇ ನನ್ನ
ನಿನ್ನ ಜಗದಿಂದ...

ಮೂಲ ಹಾಗು ಸಂಗೀತ : ಪ್ರೇಂ ಧವನ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಚಿತ್ರ : ಪವಿತ್ರ ಪಾಪಿ
teree duniyaan se ho ke majaboor chalaa
main bahot door, bahot door, bahot door chalaa -2

is kadar door ke fir laut ke bhee aa naa sakoo
ayesee manjil ke jahaan khud ko bhee main paa naa sakoo
aaur majabooree hain kyaa itanaa bhee batalaa naa sakoo

aankh bhar aaee agar ashkon ko main pee loongaa
aah nikalee jo kabhee hothhon ko main see loongaa
tuz se waadaa hain kiyaa isaliye main jee loongaa

khush rahe too hain jahaan, le jaa duwaayen meree
teree raahon se judaa ho gayee raahen meree
kuchh naheen saath mere, bas hain khataayen ಮೇರೀ
http://www.youtube.com/watch?v=KLBWlsuB-00

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...