ಕೆಲಸದಿಂದ ಮನೆಗೆ ಬಂದವನಿಗೆ ಏನೋ ಮನಸ್ಸಲ್ಲಿ ತಳಮಳ ಈಗೇನು ಆಗಬಹುದೆಂದು ?
ಹೆಂಡತಿ ಸುಮಾ ಬಂದು ಚಹಾ ಕೊಟ್ಟು ಹೋದಳು, ಮೌನವಾಗಿರುವುದನ್ನು ಕಂಡು "ಏನ್ರೀ ಹುಷಾರಿಲ್ಲವೇ" ?
ಅವಳ ಮಾತು ಕೇಳಿ ಅವಳನ್ನು ಅಪ್ಪಿ ಅಳಬೇಕೆಂದಾಯಿತು, ಆದರೆ ತನ್ನನ್ನು ತಾನು ಸಾವರಿಸಿದ, ಇಲ್ಲ ಏನಿಲ್ಲ ನೀನು ಹೋಗು ಎಂದೆ.
ಅವಳೊಂದು ಶಂಕಿತ ದೃಷ್ಟಿ ನೀಡಿ ಒಳಗೆ ಹೋದಳು, ನಾನು ಯೋಚಿಸಿದೆ "ನಾನಿಲ್ಲದೆ ಈ ಮುದ್ದು ಹುಡುಗಿಗೆ ಯಾರಿನ್ನು"?
ನಮ್ಮ ವಾರ್ತಾಲಾಪ ಕೇಳಿ ಒಳಗಿಂದ ತಾಯಿ "ಏನೋ ಹುಷಾರಿಲ್ಲವೇ" ?
"ಹುಷಾರಿದೆ ಅಮ್ಮ" ? ಕೊಂಚ ಕಿರಿಕಿರಿಯಿಂದಲೇ ಹೇಳಿದೆ.
ಮುದಿ ವಯಸ್ಸು ಅಮ್ಮನಿಗೆ ಇನ್ನು ಯಾರು ಗತಿ ?, ಕಣ್ಣಿಂದ ಕಣ್ಣೀರು ಸುರಿಯಲಾರಂಬಿಸಿತು.
ಆಟ ಆಡಿ ಮಗ ಬಂದವನೇ ನನ್ನ ಕಣ್ಣೀರ ಮುಖ ನೋಡಿ "ಅಮ್ಮ ಪಪ್ಪಾನವರಿಗೆ ಏನಾಯಿತು ? ನಾನು ಬೇಗ ಬೇಗ ಕಣ್ಣೀರು ಒರೆಸಿದೆ, ಅವಳು ಪುನಃ ಹೊರ ಬಂದು ಗಾಬರಿಯಿಂದ "ಏನ್ರೀ ಏನಾಯಿತು? ಒಳಗೆ ಅಮ್ಮ ಸಹ "ಏನೋ ಏನಾಯಿತೇ ?
"ಏನಿಲ್ಲ ಹೇಳಿದ್ದೇನೆ ಅಲ್ಲವೇ , ಆಫೀಸ್ ನಿಂದ ಬಂದು ಸ್ವಲ್ಪ ಶಾಂತಿಯಿಂದ ಕೂತು ಕೊಂಡಿದ್ದೇನೆ, ಅದರ ಮೇಲೆ ನಿಮ್ಮ ಕಿರಿಕಿರಿ" ಎಂದು ಸ್ವಲ್ಪ ಜೋರಾಗಿ ಹೇಳಿದೆ.
ಇಬ್ಬರೂ ಮರು ಮಾತನಾಡದೆ ಒಳಗೆ ಹೋದರು.
ಪುನಃ ಯೋಚನೆಯ ಲಹರಿ "ಇನ್ನು ನನ್ನ ಮಗನ ಬಾಳು ಹೇಗೆ, ಅವನ ಶಿಕ್ಷಣದ ಏನು" ? ತಲೆ ತಿರುಗಲಾರಂಬಿಸಿತು.
ಆಗ ಮೊಬೈಲ್ ರಿಂಗಾಯಿತು, ಈ ಹಾಳು ಮೊಬೈಲ್ ನೆಮ್ಮದಿಯೇ ಇಲ್ಲ ,ಕೋಪದಿಂದ ಮೊಬೈಲ್ ಎತ್ತಿ "ಹಲೋ" ಎಂದೇ.
ಅಲ್ಲಿಂದ "ಹಲೋ ಸರ್, ನಾನು ಸಿಟಿ ಆಸ್ಪತ್ರೆಯಿಂದ ಮಂಜುಳಾ ಮಾತನಾಡುವುದು, ಕ್ಷಮಿಸಿ ಸರ್, ನಾನು ನಿಮಗೆ ನೀಡಿದ ರಿಪೋರ್ಟ್ ನಿಮ್ಮದಲ್ಲ ಸರ್, ಪೇಷಂಟ್ ನಂಬರ್ ತಪ್ಪು ಮುದ್ರಣೆ ಆಗಿ ನಿಮಗೆ ನೀಡಿದೆ, ಅದು ಒಂದು ಬೇರೆ ಪೇಷಂಟ್ ನವರ ರಿಪೋರ್ಟ್, ನಿಮ್ಮ ರಿಪೋರ್ಟ್ ಇಲ್ಲಿ ಇದೆ ಸರ್, ಎಲ್ಲ ನಾರ್ಮಲ್ ಇದೆ, ಹೆದರುವ ಏನೂ ಅಗತ್ಯ ಇಲ್ಲ ಸರ್,ತಮಗೆ ತೊಂದರೆ ನೀಡಿದಕ್ಕೆ ಕ್ಶಮಿಸ ಬೇಕು ಸರ್ .
ಮೊಬೈಲ್ ಕೈಯಿಂದ ಜಾರಿ ಕೆಳಗೆ ಬಿಟ್ಟು, ಗೊಳೋ ಎಂದು ಜೋರಾಗಿ ಅತ್ತೆ, ಒಳಗಿಂದ ಪುನಃ ಅಮ್ಮ, ಅವಳು ಮತ್ತೆ ಮಗ ಓಡಿ ಬಂದರು.
ಅಳುತ್ತಲೇ ಅವರಿಗೆಲ್ಲ ವಿಷಯ ವಿವರಿಸಿದೆ.
No comments:
Post a Comment