Monday, December 24, 2012

ಬದುಕ ಬಂಡಿ

ಗೆಳತಿ
ನನ್ನ ನಿನ್ನ
ಈ ಸಂಬಂಧ
ಕಚ್ಚಾ ದಾರದಂತೆ ನಾಜೂಕಲ್ಲ
ಮುರಿಯಲಾರದು ಅಷ್ಟು ಬೇಗ !

ಕ್ಷಣಿಕ ಕೋಪದಿಂದ
ನೀನು ಈ ಸಂಬಂಧ
ಬೇಡವೆಂದರೂ
ಪಶ್ಚಾತಾಪ ಪಡುವೆ ನಂತರ
ಇಳಿಯುವಾಗ ನಿನ್ನ ರೋಷದ ಆವೇಗ !

ಕೇವಲ ನಿನ್ನ
ಹೃದಯಕ್ಕೆ ವೇದನೆ ಆಗುವುದೇ
ನನ್ನ ಹೃದಯ
ಹೃದಯ ಅಲ್ಲವೇ ?
ಈ ನೋವ ಬಂಧನಕ್ಕೆ ಮಾಡಬೇಡ ಸಂದೇಹ !

ನಮ್ಮ ಈ ಪ್ರೀತಿ
ಗುಲಾಬಿ ಹೂವಂತೆ ಅರಳಲಿ
ಅದರಲ್ಲಿಯ ಮುಳ್ಳು
ನಮಗಿಬ್ಬರಿಗೆ ಚುಚ್ಚಿದರೂ
ನಮ್ಮ ಕೈ ಒಬ್ಬರನೊಬ್ಬರ ಕಣ್ಣೀರು ಒರೆಸಲಿ !

ಹೀಗೆ ನನ್ನ ಬಿಟ್ಟು
ಹೊರಡದಿರು ಪ್ರಿಯೆ
ಜೀವನದ ಈ ಪ್ರಯಾಣದಲ್ಲಿ
ಒಬ್ಬಂಟಿ ನಡೆಯಲು ನನ್ನಿಂದಾಗದು
ನೀನಿಲ್ಲದೆ ನನ್ನ ಬದುಕ ಬಂಡಿ ಸಾಗದು !
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...