Wednesday, December 19, 2012

ಪ್ರಶ್ನೆ ?

ಗೆಳತಿ
ನಿನ್ನ ಪ್ರಶ್ನಿಸುವ
ಈ ಪರಿ
ನನಗೆ ತುಂಬಾ ಇಷ್ಟ
ಆದರೆ ಅದರ
ಉತ್ತರ
ನೀನು ಎನಿಸಿದ
ಪ್ರಕಾರ ಸಿಗಬೇಕೆಂದು
ನೀನು ಅಪೇಕ್ಷಿಸುವುದು
ತಪ್ಪಲ್ಲವೆ !

ಸತ್ಯವನ್ನು ಸುಳ್ಳೆಂದು
ಸುಳ್ಳನ್ನು ತಪ್ಪೆಂದು
ಹೇಳಿ
ನಿನ್ನನ್ನು ತಪ್ಪು
ಮಾರ್ಗಕ್ಕೆ ನಾ ದೂಡಲಾರೆ
ನಿನ್ನನ್ನು ಪ್ರಶ್ನಿಸುವಂತೆ
ಕೇವಲ ಪ್ರೇರಿಸಿ
ಹಿಂದಿನಿಂದ ನಗುವವನು
ನಾನಲ್ಲ !

ಅಸ್ತಿಕಳಾಗಿ 
ನಾಸ್ತಿಕಳಂತೆ  ನುಡಿದು
ಅದರ ಬಗ್ಗೆ
ಜ್ಞಾನ ಸಂಪಾದಿಸುವ
ನಿನ್ನ ಈ ರುಚಿಗೆ ನನ್ನ ಮಾನ್ಯ
ಆದರೆ ನಿನಗೆ ರುಚಿಯಾಗಲೆಂದು
ನಿನ್ನ ಬಾಯಿಗೆ ಸಿಹಿ ಉತ್ತರದ
ಸಕ್ಕರೆ ನಾ ಕೊಡಲಾರೆ !

ಈ ಜಗದ
ಎಲ್ಲ ಪ್ರಶ್ನೆಗಳ ಉತ್ತರ
ನಮ್ಮಲಿಲ್ಲ
ಅದಕ್ಕೆ ಗೊತ್ತಿಲ್ಲದ
ಸೂಕ್ಷ್ಮ ಸಂವೇದನಾಶೀಲ
ವಿಷಯಗಳ ಬಗ್ಗೆ
ಪ್ರಶ್ನಿಸುವಾಗ
ನಿನ್ನ ಈ ಮೋಜಿನ ಸ್ವಭಾವ
ಆ ಪ್ರಶ್ನೆಯಲ್ಲಿ ಇರದಿರಲಿ
ಅಲ್ಲಿ ಕೇವಲ ನಿನ್ನ ಇನ್ನೂ
ತಿಳಿಯುವ ಹಂಬಲ ಇರಲಿ !

ಅನೇಕ ಕಾಲದಿಂದ
ಉಳಿದು ಬಂದಿದ
ಪ್ರಥೆಗೆ
ನಿನ್ನ ನಂಬಿಕೆ ಅಪನಂಬಿಕೆಯ
ಅವಶ್ಯಕತೆ ಇದೆಯೇ ?
ಮೂಢನಂಬಿಕೆಯೆಂದು
ಕೇವಲ ಪ್ರಸ್ತುತ
ಸ್ಥಿತಿಯನ್ನು ತಿಳಿದು
ಅದನ್ನು ಹೀಯಾಳಿಸುವುದು ಸರಿಯೇ ?
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...