Monday, December 17, 2012

ಮನಸ್ತಾಪ

ಗೆಳತಿ
ಈ ನಮ್ಮ
ಕಣ್ಣು ಮುಚ್ಚಾಲೆಯ
ಆಟದಲ್ಲಿ
ನನ್ನ
ಸೋಲು ನಿಶ್ಚಿತ
ಎಂದು ಗೊತ್ತಿದರೂ
ನಾನ್ಯಾಕೆ ಸತತ
ನಿನ್ನನ್ನು ಒಲಿಸಲು
ಪ್ರಯತ್ನಿಸುತ್ತಲೇ ಇರುತ್ತೇನೆ !

ನಿನ್ನ ಕೋಪದ
ಅಲೆಗಳ
ಪ್ರಹಾರದಿಂದ
ನನ್ನ ದೇಹ
ವೇದನೆಯಿಂದ
ಬಳಲುತ್ತಿದ್ದರು
ನಿನಗೆ ತೃಪ್ತಿ ಸಿಗಲಿ
ಎಂದು ನಾನು ಸ್ಥಿರವಾಗಿ
ನಿನ್ನ ಪ್ರೀತಿ ಸಾಗರದ ತೀರದಲ್ಲಿಯೇ 
ನಿಲ್ಲಿ ಕೊಂಡಿರುತ್ತೇನೆ !

ನನಗೆ ಗೊತ್ತು
ನಿನ್ನಲ್ಲಿ ಎದ್ದ
ಮನಸ್ತಾಪದ ಬಿರುಗಾಳಿಯಲ್ಲಿ
ನಮ್ಮ ಪ್ರೇಮ
ಮರೆಯಾಗಿದೆ ಎಂದು
ನೀ ಇಂದು ನನ್ನನ್ನು
ದ್ವೇಷಿಸುವೆ ಎಂದು 
ಆದರೂ
ನೀ ಬೇಗನೆ ಶಾಂತವಾಗುವೆ
ಎಂದು ನಿರೀಕ್ಷಿಸುತ್ತೇನೆ !

ಅರಿಯದೆ
ಮಾಡಿದ
ನನ್ನ ತಪ್ಪಿಗೆ
ಕ್ಷಮೆ ಇಲ್ಲವೇ ?
ನಿನ್ನ ವಿಶಾಲ
ಕಡಲ ಮನಸ್ಸಲ್ಲಿ
ಮೀನಾಗಿ
ತೇಲುತ್ತಿದ್ದ ನನಗೆ
ನೀನು
ಅಗಲಿಕೆಯ ಜಾಲದಲ್ಲಿ ಸಿಕ್ಕಿಸಿ
ನಮ್ಮ ಪ್ರೀತಿಯನ್ನು ಮುಗಿಸ ಬೇಡವೆಂದು 
ಪದೇ ಪದೇ ನಿನ್ನಿಂದ ಬೇಡುತ್ತೇನೆ !
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...