Friday, December 7, 2012

ಇಂಥ ಒಂದು ಜೀವನ

ನಾಲ್ಕು ಅಡಿ ಅಗಲದ ಗುಡಿಸಲು
ಅದರಲ್ಲಿಯೇ ಮನೆ ಮಠ
ಹರಿದ ಹರಿ ಹರಿ ಎನ್ನುವ ಚಾಪೆ
ಕುಳಿತು ಕೊಳ್ಳಲು ಅದೇ ಆಸನ ಮಲಗಲು ಅದೇ ಶಯನ !

ಅಡುಗೆ ಮನೆಯ ಹೆಸರಲ್ಲಿ
ಸದಾ ಸೀಮೆ ಎಣ್ಣೆಯ ಕೊರತೆಯಲ್ಲಿರುವ ಒಂದು ಸ್ಟೌವ್
ಉರಿಯುವ ಭಾಗ್ಯ ತಿಂಗಳಿಗೆ ಕೆಲವೇ ಬಾರಿ
ಉರಿದ ದಿನ ಗಮ್ಮತ್ತು ಊಟ !

ಕೆಲಸ ಸಿಕ್ಕಿದ ದಿನ ಮದ್ಯ ಗುತ್ತಿಗೆಯ ದಾರಿ
ಕೆಲಸ ಸಿಗದ ದಿನ ಅಲೆಮಾರಿ
ಕೆಲವೊಮ್ಮೆ ಭಾರಿ ಹಣ
ಅಂದು ಭಾರಿ ಔತಣ ಕುಡಿದು ಹೆಣ !

ಸಂಬಂಧದವರು ಎಂದರೆ ತಾಳಿ ಕಟ್ಟಿದ ಒಂದು ಹೆಣ್ಣು ಜೀವ
ಕೇವಲ ಹೆಸರಿಗೆ ಹೆಂಡತಿ
ಅವಳಿಗೆ ಇನ್ಯಾರದೋ ಮತಿ
ಇವನಿಗೆ ಎಲ್ಲ ಗೊತ್ತಿದ್ದೂ ಅದರಲ್ಲಿ ಇವನ ಮೌನ ಸಮ್ಮತಿ !

ಜಗಳ ಜಂಜಾಟ ದಿನ ನಿತ್ಯದ ಆಟ
ಹೊಡೆತ ಬಡಿತ ಅದೇ ಕಸರತ್ತು
ಯಾವುದೋ ಕಾಲದ ಒಂದು ರೇಡಿಯೋ
ಅದೇ ಒಂದು ಮನೋರಂಜಕ ಸಾಧನ!

ರೇಡಿಯೋದಲ್ಲಿ ಪ್ರಳಯ ಎಂದು ಕೇಳಿ ನಕ್ಕು ಬಡಬಡಿಸಿದ
ಪ್ರಳಯ ಬಂದರೇನು ಬರದಿದ್ದರೇನು
ನಾಳೆ ಬರುವುದದ್ದು ಇಂದೇ ಬರಲಿ
ಆದರೆ ಹೋದಲ್ಲಿ ಮದ್ಯದ ವ್ಯವಸ್ಥೆ ಇರಲಿ !
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...