Sunday, 7 August, 2011

ಸತ್ತ ನಂತರ

ಅವನು ಸತ್ತಿದ್ದ
ಬೀದಿಯಲ್ಲಿ ಬಿದ್ದಿದ್ದ

ಜನರು ನೋಡಿ ನೋಡಿ ಹೋಗುತ್ತಿದ್ದರು
ತರಹ ತರಹದ ನೋಟಗಳು
ಆಶ್ಚರ್ಯದ, ಭಯದ,ದಯೆಯ,
ವ್ಯಂಗದ, ಕೋಪದ,

ಇವನ ಯಾರೂ ಇಲ್ಲವೇ ?
ಇವನ ತಂದೆ ತಾಯಿ ?
ಇವನ ಮದುವೆ ಆಗಿದೆಯೇ ?
ಇವನ ಮಡದಿ, ಮಕ್ಕಳು?
ಇವನಿಗಾಗಿ ಅಳುವವರು ಇದ್ದರೆಯೇ ?

ಸೂರ್ಯ ಮುಳುಗಿತು
ಕತ್ತಲೆ ಕವಿಯಿತು
ಅವ ಅಲ್ಲೇ ಬಿದ್ದಿದ್ದ
ಎಲ್ಲರೂ ನೋಡಿ ನೋಡಿ ಹೋದರು
ಯಾರಲ್ಲಿಯೂ ಸಮಯವಿಲ್ಲ
ಅವನ ಯಾರೂ ಇಲ್ಲ

ಮಳೆ ಸುರಿಯಲಾರಂಬಿಸಿತು
ಅವ ಅಲ್ಲೇ ಬಿದಿದ್ದ
ಚಂಡಿ ಪುಂಡಿ
ನಾಯಿ ಒಂದು ಬೊಗಳುತಿತ್ತು
ಅವನ ಸುತ್ತ ಸುತ್ತ ತಿರುಗುತಿತ್ತು

ಅವನು ಸತ್ತಿದ್ದ
ಬೀದಿಯಲ್ಲಿ ಬಿದ್ದಿದ್ದ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment