Monday, December 9, 2013

ಹೂ ನಿನಗೆ ಕಳುಹಿಸಿದ್ದೇನೆ

ಲತಾ :
!!ಹೂ ನಿನಗೆ ಕಳುಹಿಸಿದ್ದೇನೆ ಪತ್ರದಲಿ
ಹೂ ಅಲ್ಲ ಇದು ನನ್ನ ಹೃದಯ-೨
ಪ್ರಿಯತಮ ನನ್ನ ನನಗೆ ಬರೆ ನೀನು
ಇದು ನಿನ್ನ ಯೋಗ್ಯವಿದೆಯೇ!!

ಮುಕೇಶ್ :
!!ಪ್ರೀತಿ ತುಂಬಿದೆ ಪತ್ರದಲ್ಲಿಷ್ಟು
ಸಾಗರದಲ್ಲಿದ್ದ ಮುತ್ತುಗಳಷ್ಟು-೨
ಚುಂಬಿಸುತ್ತಿದ್ದೆ ಕೈಗಳನ್ನು ನಿನ್ನ
ನೀನಿರುತ್ತಿದ್ದರೆ ನನ್ನ ಸನಿಹದಲಿ!!
ಹೂ ನಿನಗೆ....

ಲತಾ :
!!ನಿದ್ರೆ ನಿನಗೆ ಬರುತ್ತಿರಬಹುದು
ನೀನೇನು ಕಂಡೆ ಕನಸು-೨
ಮುಕೇಶ್ :
ಕಣ್ಣು ತೆರೆದಾಗ ಏಕಾಂತವಿತ್ತು
ನನ್ನದಾಗಲಿಲ್ಲ ಕನಸು
ಲತಾ :
ಏಕಾಂತ ದೂರಗೊಳಿಸುವೆ ನಾನು
ತಂದುಕೊಡು ನೀನು ಶಹನಾಯಿ  -೨
ಮುಕೇಶ್ :
ಪ್ರೀತಿ ಮಾಡಿ ಮರೆಯದಿರು ನೀನು
ಕಲಿತೆ ಪ್ರೀತಿ  ನಾನು ನಿನ್ನಿಂದಲೇ!!
ಹೂ ನಿನಗೆ....

ಮುಕೇಶ್ :
!!ಪತ್ರದಿಂದ ತೃಪ್ತಿ ಸಿಗುವುದಿಲ್ಲ
ಈಗ ಕಂಗಳು ಒಂದಾದರೆ ನೆಮ್ಮದಿ-೨
ಲತಾ :
ಚಂದಿರ ನನ್ನ ಅಂಗಳದಲ್ಲಿ
ಇಳಿಯುವಂತಹ
ಯಾವುದಾದರೂ ರಾತ್ರಿ ಸಿಗಲಿ
ಮುಕೇಶ್ :
ಸಿಗುವುದಾದರೆ ಹೇಗೆ ಸಿಗುವುದು
ಸಿಗುವ ಉಪಾಯ ಬರೆ ನೀನು -೨
ಲತಾ :
ಹಂಬಲಿಸುವ ನಯನಗಳು
ಕಾಯುತ್ತಿದೆ ನಿನ್ನನ್ನು
ಯಾವಾಗ ಬರುವೆಯೆಂದು
ಪತ್ರ ಬರೆ ನೀನು!!
ಹೂ ನಿನಗೆ....

ಮೂಲ : ಇಂದೀವರ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್, ಮುಕೇಶ್
ಸಂಗೀತ : ಕಲ್ಯಾಣ್ ಜೀ ಆನಂದ್ ಜೀ
ಚಿತ್ರ : ಸರಸ್ವತಿ ಚಂದ್ರ

phool tumhe bheja hai khat me
phool nahi mera dil hai
priytam mere mujhko likhna
kya yeh tumhare kabil ಹಾಯ್

pyar chupa hai khat me itna
jitne saagar me moti
chum hi leta haath tumhara
paas jo tum mere hoti

phool tumhe bheja hai khat me

neend tumhe to aati hogi
kya dekha tumne sapna
aankh khuli to tanhai thi
sapna ho na saka apna
tanhai hum dur karege
le aao tum sahnai
preet bada kar bhul na jana
preet tumhi ne sikhlayi

phool tumhe bheja hai khat me
phool nahi mera dil hai
phool tumhe bheja hai khat me

khat se ji bharta hi nahi
ab nain mile to chen mile
chand hamare agna utre
koi to aisi rain mile
milna ho to kaise mile hum
milne ki surat likh do
nain bichaye baithe hai hum
kab aaoge khat likh do

phool tumhe bheja hai khat me
phool nahi mera dil hai
phool tumhe bheja hai khat me
http://www.youtube.com/watch?v=vlLL2YlcGUI

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...