Tuesday, December 3, 2013

ಅದೊಂದು ಕಂಗಳಿಗೆ

ಭುಪಿಂದರ್ ಸಿಂಗ್: 
!!ಅದೊಂದು ಕಂಗಳಿಗೆ 
ನಿನ್ನ ನಿರೀಕ್ಷೆ ಇಂದೂ ಇದೆ-೨
ಎಲ್ಲಿರುವೆ ನೀನು 
ಅಂದರೆ ಈ ಹೃದಯ 
ಹಂಬಲಿಕೆಯಲಿ ಇಂದೂ ಇದೆ!! 
ಅದೊಂದು ಕಂಗಳಿಗೆ....

!!ಆ ಕಣಿವೆ ಆ ಪರಿಸರ 
ನಮ್ಮ ಭೇಟಿಯಾದ ಆ ಸ್ಥಾನ-೨ 
ನನ್ನ ನಿಷ್ಠೆಯ ಗೋರಿ 
ಅಲ್ಲಿಯೇ ಇಂದೂ ಇದೆ!!
ಅದೊಂದು ಕಂಗಳಿಗೆ....

!!ಅದೇಕೋ ಅವಳನ್ನು ನೋಡಿ 

ಈ ಭಾವನೆ ಮೂಡಿತು-೨
ನನ್ನ ಹೃದಯದ ಮೇಲೆ 

ಅವಳಿಗೆ ನಂಬಿಕೆ ಇಂದೂ ಇದೆ!!
ಅದೊಂದು ಕಂಗಳಿಗೆ....

ಆಶಾ ಭೋಂಸ್ಲೆ :
!!ಆ ಪ್ರೀತಿಗೋಸ್ಕರ 

ನಾನು ತ್ಯಜಿಸಿದೆ ಈ ಜಗತ್ತನ್ನು-೨
ನಿಷ್ಠೆಯ ಹಾದಿಯಲಿ ಆ ಪ್ರೀತಿ 

ವೇದನೆಯಲಿ ಇಂದೂ ಇದೆ!!
ಆ ಪ್ರೀತಿಗೋಸ್ಕರ 

ನಾನು ತ್ಯಜಿಸಿದೆ ಈ ಜಗತ್ತನ್ನು

ಭುಪಿಂದರ್ ಸಿಂಗ್:
ನಂಬಿಕೆಯಿಲ್ಲ ಆದರೂ 

ಇಂದೂ ಹೀಗೆ ಅನಿಸುತ್ತದೆ-೨
ನನ್ನ ಹುಡುಕಾಟದಲಿ 

ಬಹುಶ: ವಸಂತ ಇಂದೂ ಇದೆ
ಅದೊಂದು ಕಂಗಳಿಗೆ....

ಆಶಾ ಭೋಂಸ್ಲೆ :
ಕೇಳಬೇಡ ಪ್ರೀತಿಯಲಿ 

ಎಷ್ಟು ನೋವು ಸಹಿಸಿದೆಯೆಂದು-೨
ಅಂದರೆ ಅದನ್ನು ನೆನೆದು 

ಈ ಹೃದಯ ಶೋಕದಲ್ಲಿ ಇಂದೂ ಇದೆ
ಆ ಪ್ರೀತಿಗೋಸ್ಕರ 

ನಾನು ತ್ಯಜಿಸಿದೆ ಈ ಜಗತ್ತನ್ನು
ನಿಷ್ಠೆಯ ಹಾದಿಯಲಿ ಆ ಪ್ರೀತಿ 

ವೇದನೆಯಲಿ ಇಂದೂ ಇದೆ

ಮೂಲ : ಹಸನ್ ಕಮಾಲ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಭುಪಿಂದರ್ ಸಿಂಗ್, ಆಶಾ ಭೋಂಸ್ಲೆ

ಸಂಗೀತ : ಬಪ್ಪಿ ಲಹರಿ 
ಚಿತ್ರ : ಐತ್ಬಾರ್ 
kisi nazar ko tera
intezar aaj bhi hai
kisi nazar ko tera
intezar aaj bhi hai
kaha ho tum ke ye dil
beyqaraar aaj bhi hai 

kisi nazar ko tera
intezar aaj bhi hai 

wo vaadhiya wo fazaa ye
ke hum mile te jaha
wo vaadhiya wo fazaa ye
ke hum mile te jaha
meri wafa ka wohi par
majaar aaj bhi hai
kisi nazar ko tera
intezar aaj bhi hai 

najaane dek ke kyun unko
ye huva ehsaas
najaane dek ke kyun unko
ye huva ehsaaske mere dil pe une
ikhtiyaar aaj bhi hai 

woh pyaar jis ke liye
humne chod dhi dhuniya
woh pyaar jis ke liye
humne chod dhi dhuniya
wafa ke raahame gaayal
wo pyaar aaj bhi hai
woh pyaar jis ke liye
humne chod dhi dhuniya 

yaqeen nehi hai magar
aaj bhi ye lagta hai
yaqeen nehi hai magar
aaj bhi ye lagta hai
meri talaash mein shaayad
bahaar aaj bhi hai
kisi nazar ko tera
intezaar aaj bhi hai 

na poonch kitne mohabbat ki
zakhm kaaye hei
ke jinko soch ke din so
gavaar aaj bhi hai
woh pyaar jis ke liye
humne chod dhi dhuniya
wafa ke raahame gaayal
wo pyaar aaj bhi hai 

kisi nazar ko tera
intezaar aaj bhi hai
kaha ho tum ke ye dil
beyqaraar aaj bhi hai
kisi nazar ko tera
intezaar aaj bhi hai 

zindagi kya koi nissar kare
kisse dhuniya mein koi pyaar kare
apna saaya bhi apna dhushman hai
kaun ab kiska aitbaar kare
aitbaar kare

www.youtube.com/watch?v=J_4tkX8VL7k

2 comments:

  1. ಸಾರ್,
    ಭುಪಿಂದರ್ ಸಿಂಗ್, ಆಶಾ ಭೋಂಸ್ಲೆ ಜೋಡಿಯ ಒಳ್ಳೆಯ ಗೀತೆ ನಮಗಾಗಿ ಕನ್ನಡೀಕರಿಸಿದ ನಿಮಗೆ ಶರಣು.

    ReplyDelete
  2. ಧನ್ಯನಾದೆ, ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...