Tuesday, December 31, 2013

ನವೀನ ವರ್ಷ ೨೦೧೪

ಬರುತ್ತಿದೆ 
ಹೌದು ಬರುತ್ತಿದೆ 
ನಿನ್ನೆಜ್ಜೆಯ ಸದ್ದು 
ಮೆಲ್ಲ ಮೆಲ್ಲನೆ 

ಗೊತ್ತಿಲ್ಲ ನನಗಾಗಿ 
ಏನು ತಂದಿರುವೆಯೆಂದು 
ಈಗಂತೂ ನಿನ್ನೆಜ್ಜೆಯ ಸದ್ದು 
ಮಧುರವೆನಿಸುತ್ತಿದೆ 

ಸಮಯದ ಚಕ್ರವೆ ಹೀಗೆಯೇ
ಹೋಗುವವರನ್ನು ನಿಲ್ಲಿಸಲಾಗುವುದಿಲ್ಲ
ಬರುವವರನ್ನು ತಡೆಯಲಾಗುವುದಿಲ್ಲ
ಗೊತ್ತಿದೆ ನೀನಂತೂ ಬರುವೆ

ಒಳ್ಳೆಯದು
ನವ ನವೀನ ಕನಸು ತುಂಬಿದೆ
ಕಣ್ಣಲ್ಲಿ ನಿನಗಾಗಿ
ಬಾ ನಿನ್ನನ್ನು ಕಾಯುತ್ತಿರುವೆ

ನವೀನ ವರ್ಷ ೨೦೧೪
ಬಾ ನಿನ್ನನ್ನು ಕಾಯುತ್ತಿರುವೆ
ಹರ್ಷದಿಂದ, ಸಂದೇಹದಿಂದ
ಏನೋ ಸ್ವಲ್ಪ ಭಯದಿಂದಲೂ

ನಿನ್ನನ್ನು ಕಾಯುತ್ತಿರುವೆ
ಬಾ ಕಾಯುತ್ತಿರುವೆ

by ಹರೀಶ್ ಶೆಟ್ಟಿ,ಶಿರ್ವ

2 comments:

  1. ಹೊಸ ವರುಷದ ಹೊಸಿಲಲಿ ಬ್ಲಾಗ್ ಪುಷ್ಕಳವಾಗಲಿ

    ಏನೋ ಸ್ವಲ್ಪ ಭಯದಿಂದಲೂ ನಾವೂ ಸ್ವಾಗತಿಸುತ್ತಿದ್ದೇವೆ ನವ ವಸಂತವ.

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...