Sunday, December 15, 2013

ಅದೇನೋ ನೀ ಹೇಳಿದೆ

!!ಅದೇನೋ ನೀ ಹೇಳಿದೆ
ಅದೇನೋ ನಾ ಕೇಳಿದೆ
ಪ್ರೀತಿ ಹೇಗೋ ಆಗೋಯಿತು!!
ಅದೇನೋ ......

!!ಸಂವೇದನೆ ಮೂಡಿತು
ಉದ್ವೇಗ ಉಂಟಾಯಿತು
ಸ್ವಪ್ನಗಳು ಹುಟ್ಟಿತು
ಪ್ರೀತಿ ಹೇಗೋ ಆಗೋಯಿತು!!
ಅದೇನೋ ......

!!ನಯನ ಲಜ್ಜೆಯಿಂದ ತಗ್ಗಿತು
ಕಾಲು ಮೆಲ್ಲ ಮೆಲ್ಲನೆ ಸಾಗಿತು
ಹೊಸ ನಡಿಗೆ ಹುಟ್ಟಿತು
ಪ್ರೀತಿ ಹೇಗೋ ಆಗೋಯಿತು!!
ಅದೇನೋ ......

!!ಕೇಶ ಭುಜದಿಂದ ತಿರುಗಿತು
ಪರಿಮಳ ಹಬ್ಬಿತು
ಹಲವು ರಹಸ್ಯ ಬಯಲಾಯಿತು
ಪ್ರೀತಿ ಹೇಗೋ ಆಗೋಯಿತು!!
ಅದೇನೋ ......

ಮೂಲ : ಸಾಹಿರ್ ಲುದ್ಯಾನ್ವಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು: ಗೀತ ದತ್
ಸಂಗೀತ : ಎಸ್ . ಡಿ. ಬರ್ಮನ್
ಚಿತ್ರ : ಪ್ಯಾಸಾ

(Jaane Kya Tune Kahi
Jaane Kya Maine Suni
Baat Kuchh Ban Hi Gayi)-2
Jaane Kya Tune Kahi 

(San-Sanaahat Si Hui
Thar-Tharaahat Si Hui)-2
Jaag Uthe Khvaab Kai
Baat Kuchh Ban Hi Gayi
Jaane Kya Tune Kahi ....

(Nain Jhuk-Jhuk Ke Uthe
Paanv Ruk-Ruk Ke Uthe)-2
Aa Gai Jaan Nai
Baat Kuchh Ban Hi Gayi
Jaane Kya Tune Kahi.....

(Zulf Shaane Pe Mude
Ek Khushboo Si Ude)-2
Khul Gaye Raaz Kai
Baat Kuchh Ban Hi Gayi
Jaane Kya Tune Kahi..... 

http://www.youtube.com/watch?v=aXWK1XafaVo

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...