Wednesday, December 11, 2013

ಹನಿ ಹನಿ

ಒಲವೆಂಬ 
ಸಾಗರದಲಿ 
ಅಹಂ ನಾಮಕ 
ಹಡಗು
ಕೆಲವು ಸಮಯ ತೇಲಬಹುದು
ಆದರೆ 
ಮುಳುಗುವುದು ನಿಶ್ಚಿತ

----------

ಗೂಡೊಂದು ಖಾಲಿ ಖಾಲಿ 
ಹಕ್ಕಿ ಹಾರಿ ಹೋಗಿದೆ 
ಮರದೆಲೆಗಳಿಗೆ ದುಃಖ
ಮರಕ್ಕೂ ಬೇಸರ

-----------

ಅವಳು
ತಲೆಯಲ್ಲಿ ಮುಡಿದ 
ಹೂವಿನ 
ಅದೇ ಕೇಶ ರಾಶಿಯಲಿ 
ಅಕಾಲ ಮೃತ್ಯು

by ಹರೀಶ್ ಶೆಟ್ಟಿ,ಶಿರ್ವ  

1 comment:

ಸಿದ್ಧಿದಾತ್ರಿ