Wednesday, December 25, 2013

ಈ ಸಂಬಂಧಗಳು

ಸೂಕ್ಷ್ಮ ದಾರ 
ಬಲು ನಾಜೂಕು
ಆದರೂ ತುಂಬಾ ಪ್ರಭಲ 
ಈ ಸಂಬಂಧಗಳು 

ಅದೆಷ್ಟೋ ಕಿತ್ತಾಟ
ಅದೆಷ್ಟೋ ಎಳೆತ 
ಆದರೂ ಮುರಿಯದಂತೆ ಕಾಪಾಡಬೇಕು 
ಈ ಸಂಬಂಧಗಳು 

ಸುಲಭ ಕಠಿಣ
ಹರ್ಷ ವಿಷಾದ
ಅನೇಕ ಸ್ಥಿತಿ ಪರಿಸ್ಥಿತಿಗಳ ಆಗಮನ
ಈ ಸಂಬಂಧಗಳು

ಮೃದು ಕೋಮಲ
ಕೋಪ ತಾಪ,ದುಃಖ ಸಂತಾಪ
ವಿವಿಧ ಭಾವಗಳ ಸಂಗಮ
ಈ ಸಂಬಂಧಗಳು

ಮಾನ ಮರ್ಯಾದೆ
ದೊಡ್ಡವರು ಸಣ್ಣವರು
ಇದರ ಮೂಲ್ಯ ಗೌರವವೇ
ಈ ಸಂಬಂಧಗಳು

by ಹರೀಶ್ ಶೆಟ್ಟಿ,ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...