Thursday, December 12, 2013

ಒಹ್ ಕವಿಯೇ

ಬರೆಯಲು ಇನ್ನೇನು ವಿಷಯಗಳಿಲ್ಲವೇ ಕವಿಯೇ 
ಅಡುಗೆ ಮನೆಯ ಸಾಸಿವೆಗಳನ್ನೆಲ್ಲ ತಂದು ಇಲ್ಲಿ ಬಿತ್ತಿದಿ 
ಕವಿತೆ ಕವನವಾಗಿ ಮೊಳಕೆ ಹೊಡೆದದ್ದು ದ್ವೇಷ ಮಾತ್ರ 
ಹೌದು ಜ್ಞಾನಿ ನೀನು 
ಇತರರೆಲ್ಲ ಧರ್ಮಾಂಧರು
ಏನನ್ನು ಸಾಧಿಸುವುದರಲ್ಲಿದ್ದಿ
ಏನು ಇದರಿಂದ ಜ್ಞಾನಪೀಠ ಪುರಸ್ಕಾರ ಸಿಗುವುದು ಎಂದೆನ್ನುವೆಯಾ
ತನ್ನನ್ನು ಸಾಹಿತಿ ಎನ್ನುವೆ
ಯಾವ ರೀತಿಯ ಸಾಹಿತ್ಯ ಇದು 
ಪದಗಳ ಲಾಲಿತ್ಯ ಎಲ್ಲಿ ಮಾಯವಾಗಿದೆ 
ನಿಸರ್ಗದ ಸೌಂದರ್ಯ
ಪರಿಸರದ ನೋಟ
ಆಕಾಶದ ಅಂದ
ಇದೆಲ್ಲಾ ಇಂದು ನಿನಗೆ ಕಾಣುವುದಿಲ್ಲವೇ
ಕಟು ವಚನ
ಅರ್ಧ ಸತ್ಯ
ದ್ವೇಷ, ಅಹಂಕಾರದ ಬಾಣಗಳು
ಗಾಯಗೊಳ್ಳುವುದು ಓದುಗರು
ಕೊಲ್ಲಬೇಡ ಕವಿಯೇ ಕೊಲ್ಲಬೇಡ
ನಿನ್ನ ಓದುಗರನ್ನು ಕೊಲ್ಲಬೇಡ

by ಹರೀಶ್ ಶೆಟ್ಟಿ,ಶಿರ್ವ

2 comments:

  1. ರಮ್ಯ ಕಾವ್ಯವು ಬರಲಿ ಪುಷ್ಕಳ.

    ReplyDelete
  2. ರಮ್ಯ ಕಾವ್ಯ ವಸಂತದ ಹೂವು ಅರಳಲಿ ಸರ್ .

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...