Wednesday, December 11, 2013

ಒಂದು ಬೆಕ್ಕಿನ ದುರಂತ ಮರಣ

ಬೆಳಿಗ್ಗೆಯ ಸಮಯ, ಕೆಲಸಕ್ಕೆ ಹೋಗುವ ಗಡಿಬಿಡಿ, ನಾನು ರಸ್ತೆಯಲ್ಲಿ ಬೇಗ ಬೇಗ ನಡೆದುಕೊಂಡು ಹೋಗುತ್ತಿದ್ದೆ,  ಬಸ್ ಸ್ಟಾಪ್ ಸ್ವಲ್ಪ ದೂರದಲ್ಲೇ ಇತ್ತು, ಹೇಗೂ ಇವತ್ತು ಸುಮಾ ಟಿಫನ್ ತಡವಾಗಿ ಕೊಟ್ಟ ಕಾರಣ ಮೊದಲೇ ನಾನು ಲೇಟ್ ಆಗಿದ್ದೆ. 

ಆಗಲೇ ನನ್ನ ಮುಂದೆ ನಡೆಯುವ ಹುಡುಗಿ ಜೋರಾಗಿ "ಒಹ್ ಮೈ ಗಾಡ್ " ಎಂದು ಕಿರುಚಿದಳು . ನಾನು ಒಮ್ಮೆಲೇ ನಿಂತು ಅವಳ ಕಡೆ ನೋಡಿ ,ಅವಳು ನೋಡುವ ಕಡೆ  ನೋಡಿದೆ, ಅಲ್ಲಿ ರಸ್ತೆಯಲಿ ಕಾರ್ ಅಡಿಗೆ ಸಿಕ್ಕಿ ಒಂದು ಬೆಕ್ಕು ಸತ್ತು ಬಿದ್ದಿತು. ನನಗೂ "ಅಯ್ಯೋ" ಅನಿಸಿತು, ಹುಡುಗಿ ಒಂದು ಕೈಯಿಂದ ಆ ಕಡೆಯಿಂದ ಕಣ್ಣು ಮುಚ್ಚಿ ಬೇಗ ಬೇಗ ಅದನ್ನು ನಿರ್ಲಕ್ಷಿಸಿ ಬೇರೆ ಕಡೆ  ನಡೆಯಲಾರಂಭಿಸಿದಳು, ನಾನೂ ಅವಳ ಹಿಂದೆ ಹೆಜ್ಜೆ ಮುಂದೆ ಸಾಗಿಸಿದೆ, ಆದರೆ ನಾನು ಹೋಗುವ ಹಾದಿ ಅದೇ, ರಸ್ತೆಯಲ್ಲಿ ಓಡಾಡುವ ಕಾರ್ ಗಳಲ್ಲಿ ಕೆಲವರು ಬೆಕ್ಕು ಸತ್ತು ಬಿದ್ದಿದನ್ನು ನೋಡಿ ನಿಧಾನವಾಗಿ ಚಲಿಸುತ್ತಿದ್ದರು, ಕೆಲವರು ಅದರ ಬದಿಯಿಂದ ಚಲಿಸಿ ಹೋಗುತ್ತಿದರು. ಬೆಕ್ಕು ಈಗಲೂ ಅಲ್ಲೇ ಬಿದ್ದಿತು. 

ಆಗ ತಂದೆ ಮಗನ ಜೋಡಿ ಆ ಬೆಕ್ಕನ್ನು ನೋಡಿ ಇದ್ದಕ್ಕಿದಂತೆ ನಿಂತರು, ಮಗ ಶಾಲೆಯ ಗಣವೇಶದಲ್ಲಿದ್ದ, ಇಬ್ಬರು ಏನೋ ಮಾತನಾಡಿ, ಆ ಬೆಕ್ಕಿನ ಹತ್ತಿರ ಹೋದರು, ತಂದೆ ತಾನು ಧರಿಸಿದ ಶಾಲನ್ನು ತೆಗೆದ ಹಾಗು ಬೆಕ್ಕಿನ ಶವವನ್ನು ಅದರ ಮೇಲೆ ಇಟ್ಟು, ಅದನ್ನು ಮುಚ್ಚಿ ಅವರಿಬ್ಬರೂ ರಸ್ತೆಯಿಂದ ಫುಟ್ ಪಾತ್ 'ಗೆ ಬಂದರು, ಅವರು ಅಲ್ಲಿ ಬಂದ ಸಮಯ ಹಾಗು ನಾನು ಅಲ್ಲಿ ಮುಟ್ಟುವ ಸಮಯ ಸರಿ ಆಯಿತು, ನಾನು ಕುತೂಹಲದಿಂದ ಇವರು ಇದನ್ನು ಏನು ಮಾಡುತ್ತಾರೆ ಎಂದು ನೋಡುವ ಎಂದು ಅವರ ಬದಿಯಲ್ಲೇ ನಿಂತು ಅವರ ಸಂಭಾಷಣೆ ಕೇಳಲಾರಂಭಿಸಿದೆ.

ಮಗ : ಪಪ್ಪಾ , ಒಳ್ಳೇದಾಯಿತು ಇಲ್ಲಾದರೆ ಪಾಪ ಇದರ ಚಟ್ನಿ ಆಗುತಿತ್ತು. 
ತಂದೆ :   ಹೌದು , ಪಾಪ .
ಮಗ : ಪಪ್ಪಾ , ಅಲ್ಲಿ ಕಸದ ಡಬ್ಬಿ ಇದೆ , ಅದರಲ್ಲಿ ಹಾಕುವ ಬನ್ನಿ. ಶಾಲೆಗೆ ಸಹ ಲೇಟ್ ಆಗುತ್ತದೆ. 
ತಂದೆ : ಯಾಕೋ ಬೇಡ, ಕಸದ ಡಬ್ಬಿಯಲ್ಲಿ ಹಾಕಿ ಇದರ ದೇಹ ಯಾಕೆ ಹಾಳು ಮಾಡುವುದು, ಹೇಗೋ ರಸ್ತೆಯಿಂದ ಎತ್ತಿ ತಂದಿದ್ದೇವೆ, ಅಲ್ಲಿ ನೋಡು ಆ ಮೈದಾನದಲ್ಲಿ ಸ್ವಲ್ಪ ಮಣ್ಣು ಅಗೆದು ಇದನ್ನು ಹೂತು ಬಿಡುವ, ಇದರ ಆತ್ಮಕ್ಕೂ  ಶಾಂತಿ ನಮಗೂ ನೆಮ್ಮದಿ, ಬಾ.
ಮಗ :  ಒಹ್, ಇದು ಸರಿ , ಬನ್ನಿ ಹೋಗುವ.

ಅವರ ಈ ಸಂಭಾಷಣೆ ಕೇಳಿ ನನಗೆ ಅವರಿಗೆ ಒಂದು ಸಲ್ಯೂಟ್ ಹೊಡೆಯಬೇಕು ಎಂದಾಯಿತು. ಇಂಥ ತಿಳುವಳಿಕೆಯುಳ್ಳ ಕೆಲವು ಜನರೇ ಇರುವುದು ಈ ಜಗತ್ತಿನಲ್ಲಿ, ನಾವೆಲ್ಲಾ ಎಷ್ಟು ಸ್ವಾರ್ಥಿ, ಕೇವಲ ನಾವಾಯಿತು, ನಮ್ಮ ಸಂಸಾರ ಆಯಿತು, ಇದರ ಹೊರತು ಏನೂ ಯೋಚಿಸುವುದಿಲ್ಲ,ನನಗೆ ನನ್ನ ಮೇಲೆಯೇ ನಾಚಿಗೆ ಉಂಟಾಯಿತು, ರಸ್ತೆಯಲ್ಲಿ ಎಷ್ಟೋ ಪಕ್ಷಿ ಪ್ರಾಣಿಗಳು ಈ ದುರಂತ ಅವಸ್ಥೆಯಲ್ಲಿ ಸಿಕ್ಕಿ ಸತ್ತು ಬಿದ್ದಿರುತ್ತವೆ, ನಾವು ನಮ್ಮ ಸ್ವಲ್ಪ ಸಮಯ ತೊರೆದು ಈ ಪಕ್ಷಿ ಪ್ರಾಣಿಗಳಿಗೆ ಮಣ್ಣಲ್ಲಿ ಹೂತು ಅವುಗಳಿಗೆ ಮುಕ್ತಿ ನೀಡಬಹುದಲ್ಲವೇ.

ನನ್ನ ದೃಷ್ಟಿ ಆ ಮೈದಾನದ ಕಡೆ ಹೋಯಿತು, ತಂದೆ ಮಗ ಇಬ್ಬರು ಮಣ್ಣು ಅಗೆದು ಆ ಬೆಕ್ಕನ್ನು ಮಣ್ಣಲ್ಲಿ ಹೂತು ಬಿಟ್ಟಿದರು ಹಾಗು ನೆಮ್ಮದಿಯಿಂದ ಶಾಲೆಯತ್ತ ನಡೆಯುತ್ತಿದ್ದರು, ಯಾಕೋ ಕಣ್ಣಿಂದ ಕಣ್ಣೀರು ಜಾರಿತು, ಬಹುಶಃ ತಂದೆ  ಮಗನಿಗೆ ನೀಡುವ ಉತ್ತಮ  ನೋಡಿ.

by ಹರೀಶ್ ಶೆಟ್ಟಿ,ಶಿರ್ವ  

1 comment:

  1. ಅಪರೂಪದ ತಂದೆ. ಸಂಸ್ಕಾರ ಕಲಿಸುವವರೇ ಅಪರೂಪವಾಗಿದೆ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...