Saturday, December 14, 2013

ಶ್ಯಾಮಲ ಶ್ಯಾಮಲ ವರ್ಣ

!!ಶ್ಯಾಮಲ ಶ್ಯಾಮಲ ವರ್ಣ
ಕೋಮಲ ಕೋಮಲ ಚರಣ
ನಿನ್ನ ಮೊಗ ಗಗನದ ಚಂದಿರದಂತಿದೆ
ತುಂಬಾ ಜತನದಿಂದ
ಸೃಷ್ಟಿಕರ್ತನು ನಿನ್ನನ್ನು ನಿರ್ಮಿಸಿದಂತಿದೆ!!

!!ನಿನ್ನ ಕೇಶದಲಿ ಹರಡಿದೆ
ವರ್ಷ ಮೇಘಗಳು
ನಿನ್ನ ಗಲ್ಲದಲಿ ಹರಡಿದೆ
ಹುಣ್ಣಿಮೆಯ ಬೆಳದಿಂಗಳು
ತೀಕ್ಷ್ಣ ತೀಕ್ಷ್ಣ ನಯನ
ಸಿಹಿ ಸಿಹಿ ಅಧರ
ನಿನ್ನ ಅಂಗ ಅಂಗದಲಿ
ಸಂಪಿಗೆಯ ಬಣ್ಣ ಏರಿದೆ!!
ತುಂಬಾ ಜತನದಿಂದ
ಸೃಷ್ಟಿಕರ್ತನು ನಿನ್ನನ್ನು ನಿರ್ಮಿಸಿದಂತಿದೆ

!!ಈ ವಯಸ್ಸು
ಈ ನಡು ಬಲು ನಯವಾಗಿದೆ
ನಿನ್ನ ಕಣ್ಣ ಕುಡಿ ನೋಟದಿ
ಬಾಣ ಹೊರಡುತ್ತಿದೆ
ನಾಜೂಕು ನಾಜೂಕು ಶರೀರ
ಮೆದು ಮೆದು ನಡಿಗೆ
ನಿನ್ನ ಬಾಹುಗಳಲ್ಲಿ ಜಾದು ತುಂಬಿದೆ!!
ತುಂಬಾ ಜತನದಿಂದ
ಸೃಷ್ಟಿಕರ್ತನು ನಿನ್ನನ್ನು ನಿರ್ಮಿಸಿದಂತಿದೆ

!!ಯಾವ ಪರುಶದಿಂದ
ಈ ಚಿನ್ನ ಸ್ಪರ್ಶಿಸಿದೆ
ನಿನ್ನನ್ನು ನಿರ್ಮಿಸಿ
ಸೃಷ್ಟಿಕರ್ತನ ಮನಸ್ಸೂ ಸೋತಿದೆ
ಅಲ್ಲೂ ಹೋಗಲಾಗಲಿಲ್ಲ
ಇಲ್ಲೂ ಹೋಗಲಾಗಲಿಲ್ಲ
ಕೇವಲ ನಿನ್ನಲ್ಲಿಯೇ ಅವನ ದೃಷ್ಟಿ ನಿಂತಿದೆ!!
ತುಂಬಾ ಜತನದಿಂದ
ಸೃಷ್ಟಿಕರ್ತನು ನಿನ್ನನ್ನು ನಿರ್ಮಿಸಿದಂತಿದೆ

ಮೂಲ :ಭರತ್ ವ್ಯಾಸ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮಹೇಂದ್ರ ಕಪೂರ್
ಸಂಗೀತ : ಸಿ. ರಾಮಚಂದ್ರ
ಚಿತ್ರ : ನವರಂಗ್

श्यामल श्यामल बरन
कोमल कोमल चरण
तेरे मुखड़े पे चंदा गगन का जड़ा
बड़े मन से विधाता ने तुझको गढ़ा

तेरे बालों में सिमटी सावन की घटा
तेरे गालों पे छिटकी पूनम की छटा
तीखे तीखे नयन
मीठे मीठे बयन
तेरे अंगों पे चम्पा का रंग चढ़ा
बड़े मन से विधाता ने...

ये उमर, ये कमर, सौ सौ बल खा रही
तेरी तिरछी नज़र तीर बरसा रही
नाज़ुक नाज़ुक बदन
धीमे धीमे चलन
तेरी बाँकी लटक में है जादू बड़ा
बड़े मन से विधाता ने...

किस पारस से सोना ये टकरा गया
तुझे रचकर चितेरा भी चकरा गया
न इधर जा सका
न उधर जा सका
रह गया देखता वो खड़ा ही खड़ा
बड़े मन से विधाता ने...
http://www.youtube.com/watch?v=4_pJdsw09Cc

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...