Wednesday, December 18, 2013

ಈ ಪ್ರೀತಿಯಲಿ ಹೀಗೇಕಾಗುತ್ತದೆ

ಈ ಪ್ರೀತಿಯಲಿ ಹೀಗೇಕಾಗುತ್ತದೆ

ಯಾಕೆ ಯಾರಿಗೂ
ನಿಷ್ಠೆಯ ಬದಲು ನಿಷ್ಠೆ ಸಿಗುವುದಿಲ್ಲ
ಯಾಕೆ ಯಾರಿಗೂ
ಉಪಕಾರದ ಬದಲು ಉಪಕಾರ ಸಿಗುವುದಿಲ್ಲ
ಯಾಕೆ ಯಾರಿಗೂ
ಖುಷಿಯ ಬದಲು ಖುಷಿ ಸಿಗುವುದಿಲ್ಲ
ಈ ಪ್ರೀತಿಯಲಿ ಹೀಗೇಕಾಗುತ್ತದೆ
ಈ ಪ್ರೀತಿಯಲಿ ಹೀಗೇಕಾಗುತ್ತದೆ
ಯಾಕೆ ಯಾರಿಗೂ
ನಿಷ್ಠೆಯ ಬದಲು ನಿಷ್ಠೆ ಸಿಗುವುದಿಲ್ಲ

ಪ್ರೀತಿ ಎಷ್ಟೊಂದು ಕಣ್ಣೀರು ಹರಿಸುವುದು
ಎಲ್ಲಾ ಜಗವನ್ನು ಮರೆಸುವುದು
ಚಡಪಡಿಕೆ ಏರಿಸುವುದು
ನೆಮ್ಮದಿ ಒಂದು ಕ್ಷಣವೂ ಬರದು
ಜನರು ಪ್ರೀತಿಯಲಿ ಏನಿಂದ ಏನಾದರು
ಎಂದೋ ಭೇಟಿಯಾಗಿ
ನಂತರೊಂದು ದಿನ ಅಗಲಿದರು
ಕೇವಲ ಶಿಶಿರ ಸಿಕ್ಕಿದೆ ಈ ವಸಂತದಲಿ
ಕಾಲ ಕಳೆಯುತ್ತಿದೆ ನಿರೀಕ್ಷೆಯಲಿ

ಯಾಕೆ ಯಾರಿಗೂ
ನಗುವಿನ ಬದಲು ನಗು ಸಿಗುವುದಿಲ್ಲ
ಯಾಕೆ ಯಾರಿಗೂ
ನಿಷ್ಠೆಯ ಬದಲು ನಿಷ್ಠೆ ಸಿಗುವುದಿಲ್ಲ

ಈ ಕ್ಷಣ ಎಂದೂ ನಿಲ್ಲಲಿಲ್ಲ
ನೆನಪಲ್ಲಿ ಯಾರದ್ದೂ ಕಾವಲಿಲ್ಲ

ಔಷದಿಯಿಂದಲೂ
ಗಾಯ ಗುಣವಾಗದಿದ್ದರೆ ಎಂದೂ
ಆ ಅವಸ್ಥೆಯಲಿ ಯೋಚಿಸಿ
ಯಾರಾದರೂ ಏನು ಮಾಡುವುದೆಂದು

ಯಾಕೆ ಯಾರಿಗೂ
ಖುಷಿಯ ಬದಲು ಖುಷಿ ಸಿಗುವುದಿಲ್ಲ
ಯಾಕೆ ಯಾರಿಗೂ
ನಿಷ್ಠೆಯ ಬದಲು ನಿಷ್ಠೆ ಸಿಗುವುದಿಲ್ಲ

ಈ ಪ್ರೀತಿಯಲಿ ಹೀಗೇಕಾಗುತ್ತದೆ
ಈ ಪ್ರೀತಿಯಲಿ ಹೀಗೇಕಾಗುತ್ತದೆ
ಯಾಕೆ ಯಾರಿಗೂ
ನಿಷ್ಠೆಯ ಬದಲು ನಿಷ್ಠೆ ಸಿಗುವುದಿಲ್ಲ

ಮೂಲ :ಸಮೀರ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಉದಿತ್ ನಾರಾಯಣ್
ಸಂಗೀತ : ಹಿಮೇಶ್ ರೇಶಮಿಯಾ
ಚಿತ್ರ : ತೆರೆ ನಾಮ್
Ye Pyaar Mein Kyun Hotaa Hai
Hun Aa Aa Aa Aa Haan..

La La La La La La La La La La La, La La La La
Kyun Kisi Ko Vafaa Ke Badle Vafaa Nahin Milti
Kyun Kisi Ko Duaa Ke Badle Duaa Nahin Milti
Kyun Kisi Ko Khushi Ke Badle Khushi Nahin Milti
Ye Pyaar Mein Kyun Hotaa Hai
Ye Pyaar Mein Kyun Hotaa Hai
Kyun Kisi Ko Vafaa Ke Badle Vafaa Nahin Milti

Ishq Kitnaa Rulaaye Saari Duniyaa Bhulaaye
Beqaraari Badaaye Chain Ek Pal Na Aaye
Log Ishq Mein Kyaa Se Kyaa Hue
Mil Gaye Kabhi Phir Judaa Hue
Bas Khizaan Mili Is Bahaar Mein
Umr Kat Rahi Intazaar Mein..

Kyun Kisi Ko Hansi Ke Badle Hansi Nahin Milti
Kyun Kisi Ko Vafaa Ke Badle Vafaa Nahin Milti.

Aa Aa Aa Aa Aa Aa Aa Aa Aa Aa

Ni Dha Ni Sa Sa Ga Re Ma Pa Ga Re Ga Sa
Ni Dha Ni Sa Ga Sa

Ye Pal Kahin Thahraa Nahin
Yaadon Pe To Pahraa Nahin..

Jab Davaa Se Bhi Zakhm Na Bhare
Aise Haal Mein Socho Koi Kyaa Kare

Kyun Kisi Ko Khushi Ke Badle Khushi Nahin Milti
Kyun Kisi Ko Vafaa Ke Badle Vafaa Nahin Milti...

Ye Pyaar Mein Kyun Hotaa Hai..
Ye Pyaar Mein Kyun Hotaa Hai ...
Kyun Kisi Ko Vafaa Ke Badle Vafaa Nahin Milti.
http://www.youtube.com/watch?v=SaYKTDFEZgM

1 comment:

  1. ಒಳ್ಳೆಯ ಗೀತೆ ಮತ್ತು ಭಾವಾನುವಾದವೂ ಚೆನ್ನಾಗಿದೆ.

    ಈ ಚಿತ್ರದ ಛಾಯಾಗ್ರಾಹಕರು ತಪನ್ ಮಾಲ್ವಿಯಾ. 

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...