Sunday, December 29, 2013

ಮನದ ಭಾವ

ಒಬ್ಬ ಕವಿಯ 
ಕಣ್ಣೀರು ಬಿತ್ತು
ನೆಲದ ಮೇಲೆ 
ಕವನ ಮೂಡಿತು 

------

ಬರೆದದ್ದನ್ನು
ಯಾರೂ ಓದಲಿಲ್ಲ, 
ಆದರೆ ಕಾಗದ ಹೆಮ್ಮೆಯಲಿ 
ಕವಿ ತೃಪ್ತಿಯಲಿ 

------

ಅವನೇನು 
ಕವಿ ಏನಲ್ಲ 
ಕೇವಲ ಮನ ಸಂತೃಪ್ತಿ 
ಹಾಗು ಸಮಯ ಕಳೆಯಲು ಗೀಚುತ್ತಿದ್ದ 
ಆದರೆ ಕೆಲವೊಮ್ಮೆ 
ಕಾಗದದ ಮೇಲೆ ಕವನ, ಕಥೆ ನಗುತಿತ್ತು 

------

ಬರೆಯುವದು 
ಅವನ ಹವ್ಯಾಸ,
ಓದುಗರಿಲ್ಲ ಎಂಬ 
ಚಿಂತೆ ಅವನಿಗಿಲ್ಲ 

by ಹರೀಶ್ ಶೆಟ್ಟಿ,ಶಿರ್ವ   

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...