Tuesday, December 24, 2013

ಕವಿ ಕನ್ನಡಿ

ಖಾಲಿ ಕಾಗದ 
ಹಾಗು ಲೇಖನಿ,
ಚೆಲ್ಲಿದ ಮಸಿ, 
ಮಸಿಯ ವ್ಯಥೆ 
"ಒಂದೊಳ್ಳೆ ಕವಿತೆಯಾಗುವ ಮುನ್ನವೇ..."

by ಹರೀಶ್ ಶೆಟ್ಟಿ, ಶಿರ್ವ 
-------

ಮಾರಟಕ್ಕೆ 
ಮಹಾನ ಕವಿಗಳ 
ಅತ್ಯೋತ್ತಮ ರಚನೆಗಳು
ಆದರೆ ಓದುಗರ ಕೊರತೆ, 
ಗಿರಾಕಿ ಅಂದರೆ 
ಕೆಲವು ಯುವ ಕವಿಗಳು ಅಷ್ಟೇ,
ಪುಸ್ತಕದ ಒಂದು ಕೋಣೆಯಲ್ಲಿ
ಪುಸ್ತಕ ಹುಳುಗಳು ನಿರೀಕ್ಷೆಯಲ್ಲಿ 


-------

ಒಳಗೆ 
ಮಹಾನ ಕವಿಯ 
ಸನ್ಮಾನ ಸಮಾರಂಭ 
ಹೊರಗೆ 
ಬಡ ಕವಿಯ 
ನನ್ನ 
ಕೃತಿಚೌರ್ಯ ಆಯಿತೆಂದು ಗೋಳಾಟ 

by ಹರೀಶ್ ಶೆಟ್ಟಿ, ಶಿರ್ವ 


2 comments:

  1. ಕವಿಯ ಪಾಡನ್ನು ಮನೋ ರೋಧಕವಾಗಿ ತೆರೆದಿಟ್ಡ ಈ ಮೂರು ಹನಿಗಳು ನಿಜಕ್ಕೆ ತುಂಬ ಹತ್ತಿರವಾಗಿವೆ.

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.”

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...