Monday, December 23, 2013

ಪ್ರೀತಿಯಲಿ ಏನೆಲ್ಲ

ಅದೆಷ್ಟೋ ಮುಚ್ಚಿದೆ ಕಂಗಳನ್ನು
ಅದರೂ ನಿನ್ನದೇ ಚಿತ್ರದ ನೋಟ 
-----

ನನ್ನ ಖುಷಿಯ 
ಬೇರುಗಳೆಲ್ಲ
ಮಣ್ಣಿನ ಅಡಿಯಲಿ ದಫನ
ಮೇಲೆ ಬೆಳೆದಿದೆ ಹಸನ್ಮುಖ ಮಿಥ್ಯ ಮರ 
-----

ಸಂಕೋಲೆ ಕಾಣುತ್ತಿಲ್ಲ 
ಆದರೆ 
ನಾನು 
ಪ್ರೀತಿಯ ಬಂಧನದಲಿ
----

ಬಯಕೆಗೆ ಮಿತಿಯಿಲ್ಲ,
ಕೋಟಿ ತಾರೆಗಳ 
ಮಧ್ಯೆ 
ಅವಳನ್ನು ಕಾಣುವ ಬಯಕೆ 
----

ಅವಳು
ಇಕ್ಕಟ್ಟಿನ ಸ್ಥಿತಿಯಲ್ಲಿ,
ಚಿಂತನೆಯಲಿ 
ನನ್ನ 
ಮುಗ್ಧ 
ಪ್ರೀತಿ 
----

ಕನ್ನಡಿಯೆ,
ದಿನ 
ನಿನ್ನಲ್ಲಿ ಕಾಣುವ 
ಪ್ರತಿಬಿಂಬ 
ಇಂದೇಕೆ 
ನಗುತ್ತಿದ್ದಂತೆ ಕಾಣುತ್ತಿದೆ 
----

ತುಂಬಾ ತಾಪತ್ರಯದ 
ನಂತರ 
ಅವಳೀಗ ನನ್ನ ಬಾಹುಗಳಲ್ಲಿ,
ನಾನು 
ಜೀವನದ 
ಶಿಖರದಲಿ 

by ಹರೀಶ್ ಶೆಟ್ಟಿ, ಶಿರ್ವ 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...