Sunday, December 29, 2013

ಇದು ನನ್ನ ಮರುಳುತನವೇ

ಹೃದಯದಿಂದ ನಿನಗೆ ಬೇಸರವಿದೆ
ನನಗೆ ಹೃದಯದ ಹೆಮ್ಮೆ ಇದೆ
ನೀನು ಒಪ್ಪು ಒಪ್ಪದಿರು
ಜನರೆಲ್ಲಾ ಖಂಡಿತ ಒಪ್ಪುವರು

!!ಇದು ನನ್ನ ಮರುಳುತನವೇ
ಅಥವಾ ಪ್ರೀತಿಯ ಅಮಲಿದು
ನಿನಗೆ ಗುರುತಿಸಲಾಗಲಿಲ್ಲ ಅಂದರೆ
ನಿನ್ನ ದೃಷ್ಟಿಯ ದೋಷ ಇದು !!
ಇದು ನನ್ನ.....

!!ಹೃದಯಕ್ಕೆ ನಿನ್ನದೇ ಬಯಕೆ
ಹೃದಯಕ್ಕೆ ಒಲವು ನಿನ್ನಿಂದಲೇ
ನೀನು ಬಾ, ಬಾರದಿರು
ನಾನಿರುವೆ ನಿನ್ನನ್ನು ಕಾಯುತ್ತಲೇ!!
ಇದು ನನ್ನ.....

!!ಈ ನಿರ್ಜನದಲಿ ಒಂದು ದಿನ
ಉಸಿರು ಕಟ್ಟಿ ಸಾಯುವೆ ನಾನು
ಮತ್ತೆಷ್ಟು ನೀನು ಕರೆದರೂ
ಮತ್ತೆಂದೂ ಬರಲಾರೆ ನಾನು!!
ಇದು ನನ್ನ.....

ಮೂಲ : ಶೈಲೇಂದ್ರ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ಶಂಕರ್ ಜೈ ಕಿಶನ್
ಚಿತ್ರ : ಯಹೂದಿ

dil se tujhko bedili hai, mujhko hai dil ka gurur
tu yeh maane ke na maane, log maanenge jarur
yeh mera diwanapan hai, ya mohabbat ka surur
yeh mera diwanapan hai, ya mohabbat ka surur
tu na pehchaane toh hai yeh, teri najro ka kusur
yeh mera diwanapan hai

dil ko teri hi tamanna, dil ko hai tujhse hi pyaar
dil ko teri hi tamanna, dil ko hai tujhse hi pyaar
chaahe tu aaye na aaye, ham karenge intejaar
yeh mera diwanapan hai, ya mohabbat ka surur
tu na pehchaane toh hai yeh, teri najro ka kusur
yeh mera diwanapan hai

aise viraane me ek din, ghut ke mar jaayenge ham
aise viraane me ek din, ghut ke mar jaayenge ham
jitna ji chaahe pukaaro, phir nahi aayenge ham
yeh mera diwanapan hai, ya mohabbat ka surur
tu na pehchaane toh hai yeh, teri najro ka kusur
yeh mera diwanapan hai, yeh mera diwanapan hai
http://www.youtube.com/watch?v=AppcdtqKuxE

2 comments:

  1. ಶೈಲೇಂದ್ರರ ಈ ರಚನೆ ತುಂಬಾ ಚೆನ್ನಾಗಿದೆ, ಅಂತೆಯೇ ತಮ್ಮ ಭಾವಾರ್ಥವೂ.
    ಯಹೂದೀ ಚಿತ್ರಕ್ಕೆ ದಿಲೀಪ್ ಗುಪ್ತರ ಛಾಯಾಗ್ರಹಣವಿತ್ತು.

    ReplyDelete
  2. “ತುಂಬಾ ಧನ್ಯವಾದಗಳು ಬದರಿ ಸರ್.”

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...