Wednesday, December 25, 2013

ಭಾವುಕ ಮನಸ್ಷಿನ ರೋಷ

ಅದೇಗೋ ಒಂದೇ ಕ್ಷಣದಲ್ಲಿ ಬದಲಾಗುತ್ತದೆ 
ಈ ಜಗತ್ತಿನ ಸತ್ಯ/ಸುಳ್ಳು ಸಂಬಂಧಗಳು

***

ನಿನಗೆ ಕೊಟ್ಟದ್ದು ನೆನಪಿಲ್ಲ 
ನೀನು ಕೊಟ್ಟದ್ದು ನಿನಗೆ ನೆನಪಿದೆ 
ವಾಹ್ ಜಗತ್ತೇ...

***

ಹೌದು ನಾನು ಭಾವುಕ, ಸ್ವಾಭಿಮಾನಿ
ನಿನ್ನ ಅಥವಾ ಯಾರದ್ದು ಉಪಕಾರ ನಾನು ಬಯಸುವುದಿಲ್ಲ 
ಅದಕ್ಕೇನು ನಾನು ನಿನ್ನ ವೈರಿಯೆ

***

ಹೀಗೆಯೇ ನಿನ್ನ ವ್ಯವಹಾರ ಎಂದಾದರೆ 
ಈ ಸುಳ್ಳು ಸಂಬಂಧ ಇಟ್ಟು ಏನು ಪ್ರಯೋಜನ
ಇಂದೇ ಸಂಕಲ್ಪ ಮಾಡುವ 
ನೀನು ನಿನ್ನ ಹಾದಿಯಲಿ 
ನಾನು ನನ್ನ ಹಾದಿಯಲಿ

***

ಬಿಟ್ಟ ಒಂದೇ ಒಂದು ಬಾಣದಿಂದ ಗಾಯಗೊಂಡಿರುವೆ ನೀನು, ಸರಿ 
ಆದರೆ ನಿನ್ನ ಎಷ್ಟೋ ವ್ಯಂಗ ಬಾಣಗಳನ್ನೆಲ್ಲ ಸಹಿಸಿದ ನನಗೆ, ನೋವಾಗುದಿಲ್ಲವೇ

***

ಹೌದು, ಒಪ್ಪುವೆ ಇಂದಿನ ನನ್ನ ಸ್ಥಿತಿಗೆ ನೀನೆ ಕಾರಣವೆಂದು 
ಆದರೆ ಈ ರೀತಿಯ ಉಪೇಕ್ಷೆ, ನನ್ನಿಂದ ಏನು ತಪ್ಪಾಯಿತೆಂದು?

by ಹರೀಶ್ ಶೆಟ್ಟಿ,ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...