Thursday, December 19, 2013

ನೀನೇ ನೀನೇ

ನೀನೇ ನೀನೇ
ಸಪ್ತವರ್ಣಿ ರೂಪಿಣಿಯೇ
ನೀನೇ ನೀನೇ
ಮನಸ್ಸ ಬಣ್ಣಗಾರತಿಯೇ
ಹೃದಯದ ನೆರಳು ನಿನ್ನೆರಳು
ಸಪ್ತವರ್ಣಿ ರೂಪಿಣಿಯೇ
ಮನಸ್ಸ ಬಣ್ಣಗಾರತಿಯೇ

ನೀನು ಸುಂದರಿ
ಯಾಕೆ ದೂರವಿರುವಿ
ನಿನ್ನದೇ ಭಾವಗಳು
ನೀನಿರುವಾಗ ಸನಿಹದಲಿ
ಸಪ್ತವರ್ಣಿ ರೂಪಿಣಿಯೇ
ಯಾವುದೇ ಕನಸೆ
ಅಥವಾ ನೆರಳೆ ನೀನು
ಸಪ್ತವರ್ಣಿ ರೂಪಿಣಿಯೇ
ಸಪ್ತವರ್ಣಿ ರೂಪಿಣಿಯೇ
ಈಗಂತೂ ಹೇಳು
ಈ ಚಂಡಮಾರುತ ಹೋಗಿ ನಿಲ್ಲುವುದೆಲ್ಲಿ ?

(ಪ್ರೀತಿಯ ಮೇಲೆ ಹಿಡಿತವಿಲ್ಲ ಯಾರದ್ದು, ಘಾಲಿಬ್
ಒಂದು ಬೆಂಕಿಯ ಸಾಗರ ಇದು

ಹತ್ತಿಸಿಯೂ ಹತ್ತಿಸಲಾಗದ
ನಂದಿಸಿಯೂ ನಂದಿಸಲಾಗದ

ಪ್ರೀತಿಯ ಮೇಲೆ ಹಿಡಿತವಿಲ್ಲ ಯಾರದ್ದು,ಘಾಲಿಬ್
ಒಂದು ಬೆಂಕಿಯ ಸಾಗರ ಇದು)

ಅವಳ ಕಂಗಳು
ಹೀಗೆ ಸ್ಪರ್ಶಿಸಿತು ನನ್ನನ್ನು
ಮೆಲ್ಲ ಮೆಲ್ಲ
ಸಮ್ಮೋಹಿತನಾದೆ ನಾನು
ಮೆಲ್ಲ ಮೆಲ್ಲ
ಸಮ್ಮೋಹಿತನಾದೆ ನಾನು
ಹೃದಯಕ್ಕಾಯಿತು ಈ ಅನುಭವ
ನೀನೇ ನೀನೇ
ಬದುಕುವ ಸುಗಂಧವೊಂದು
ನೀನೇ ನೀನೇ
ಬಯಕೆಯೊಂದು ಬಯಕೆಯೊಂದು
ನಿನ್ನ ಮೈಯ ತಾಪ ಸ್ಪರ್ಶಿಸುತ್ತಲೇ
ನನ್ನ ಉಸಿರು ಉರಿಯಲಾರಂಭಿಸುತ್ತದೆ
ನನಗೆ ಪ್ರೀತಿ ಆಶ್ವಾಸನೆ ನೀಡುತ್ತದೆ
ನನ್ನ ನೋವು ಕರಗಲಾರಂಭಿಸುತ್ತದೆ

ನೀನೇ ನೀನೇ
ಬದುಕುವ ಸುಗಂಧವೊಂದು

ನೀನೇ ನೀನೇ
ಬಯಕೆಯೊಂದು ಬಯಕೆಯೊಂದು

ಸ್ಪರ್ಶಿಸುವೆ ನೀ ನನ್ನನ್ನು ಗುಟ್ಟಿನಿಂದ
ಕಂಗಳಲ್ಲಿ ಮಿಶ್ರವಾಗಿದ ಮೌನದಿಂದ
ನಾನು ನೆಲದ ಮೇಲೆ ಕುಳಿತು ಪ್ರಾರ್ಥಿಸುವೆ
ಸ್ವಲ್ಪ ಪ್ರಜ್ಞೆಯಲಿ ಸ್ವಲ್ಪ ಪ್ರಜ್ಞಾಹೀನತೆಯಲಿ

ನೀನೇ ನೀನೇ......

ನಿನ್ನ ಹಾದಿಯಲಿ ಸಿಕ್ಕಿಕೊಂಡಿರುವೆ
ನಿನ್ನ ಬಾಹುಗಳಲ್ಲಿ ಸಿಕ್ಕಿಕೊಂಡಿರುವೆ
ಬಿಡಿಸಲು ಬಿಡು ಈ ಬಂಧನವನ್ನು
ನಿನ್ನ ಅಪೇಕ್ಷೆಯಲಿ ಸಿಕ್ಕಿಕೊಂಡಿರುವೆ
ಬದುಕುವುದು ಅನುರಾಗ ನನ್ನ
ಸಾಯುವುದು ಅನುರಾಗ ನನ್ನ

ಈಗ ಇದರ ಹೊರತು ಆರಾಮವೇನಿಲ್ಲ
ನೀನೇ ನೀನೇ ಸಪ್ತವರ್ಣಿ ರೂಪಿಣಿಯೇ
ನೀನೇ ನೀನೇ ಮನಸ್ಸ ಬಣ್ಣಗಾರತಿಯೇ
ನೀನೇ ನೀನೇ.........

(ಪ್ರೀತಿಯ ಮೇಲೆ ಹಿಡಿತವಿಲ್ಲ ಯಾರದ್ದು,ಘಾಲಿಬ್
ಒಂದು ಬೆಂಕಿಯ ಸಾಗರ ಇದು
ಹತ್ತಿಸಿಯೂ ಹತ್ತಿಸಲಾಗದ,ನಂದಿಸಿಯೂ ನಂದಿಸಲಾಗದ)

ನನಗೆ ಮರಣದ ಮಡಿಲಲ್ಲಿ ಮಲಗಲು ಬಿಡು
ನಿನ್ನ ಅತ್ಮದಲಿ ದೇಹ ಸೇರಿಸಲು ಬಿಡು
ಸಪ್ತವರ್ಣಿ ರೂಪಿಣಿಯೇ
ಮನಸ್ಸ ಬಣ್ಣಗಾರತಿಯೇ

ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಸೋನು ನಿಗಮ್ , ಕವಿತಾ ಕೃಷ್ಣಮೂರ್ತಿ
ಸಂಗೀತ : ಎ. ಆರ್ . ರೆಹಮಾನ್
ಚಿತ್ರ : ದಿಲ್ ಸೆ

Tu Hi Tu Tu Hi Tu Satrangi Re 
Tu Hi Tu Tu Hi Tu Manrangi Re 
Tu Hi Tu Tu Hi Tu Satrangi Re 
Tu Hi Tu Tu Hi Tu Manrangi Re 
Dil Ka Saaya Humsaaya Satrangi Re Manrangi Re 
Koi Noor Hai Tu Kyon Door Hai Tu 
Jab Paas Hai Tu Ehsaas Hai Tu 
Koi Khwaab Hai Ya Phir Parchhai Satrangi Re 
Satrangi Re 
Is Baar Bata Munh Zor Hava Thehregi Kahan 
Ishq Kar Zor Nahin Hai Ye Voh Aatish Ghalib 
Jo Lagaye Na Lage Aur Bujhaye Na Bane 
Jo Lagaye Na Lage Aur Bujhaye Na Bane 
Ishq Kar Zor Nahin Hai Ye Voh Aatish Ghalib 
Aankhone Ne Kuchh Aisa Chhua Halka Halka Uns Hua 
Halka Halka Uns Hua Dil Ko Mehsoos Hua 
Tu Hi Tu Tu Hi Tu Jeene Ki Saari Khushboo 
Tu Hi Tu Thu Hi Tu Aarzoo Aarzoo 
Tere Jism Ki Aanch Ko Chhoote Hi 
Mere Saans Sulagne Lagte Hain 
Mujhe Ishq Dilaase Deta Hai 
Mere Dard Pilaghne Lagte Hain 
Tu Hi Tu Tu Hi Tu Jeene Ki Saari Khushboo 
Tu Hi Tu Thu Hi Tu Aarzoo Aarzoo 
Chhooti Hai Mujhe Sargoshi Se 
Aankhon Mein Ghuli Khaamoshi Se 
Main Farsh Pe Sajde Karta Hoon 
Kuchh Hosh Mein Kuch Behoshi Se 
Dil Ka Saaya Humsaaya Satrangi Re Manrangi Re 
Koi Noor Hai Tu Kyon Door Hai Tu 
Jab Paas Hai Tu Ehsaas Hai Tu 
Koi Khwaab Hai Ya Phir Parchhai Satrangi Re 
Teri Raahon Mein Uljha Uljha Hoon 
Teri Baahon Mein Uljha Hoon 
Suljhaane De Hosh Mujhe 
Teri Chaahon Mein Uljha Hoon 
Teri Raahon Mein Uljha Uljha Hoon 
Teri Baahon Mein Uljha Hoon 
Suljhaane De Hosh Mujhe 
Teri Chaahon Mein Uljha Hoon 
Mera Jeena Junoon Mera Marna Junoon 
Ab Iske Siva Nahin Koi Sukoon 
Mera Jeena Junoon Mera Marna Junoon 
Ab Iske Siva Nahin Koi Sukoon 
Mera Jeena Junoon Mera Marna Junoon 
Tu Hi Tu Tu Hi Tu Jeene Ki Saari Khushboo 
Tu Hi Tu Thu Hi Tu Aarzoo Aarzoo 
Tu Hi Tu Tu Hi Tu Jeene Ki Saari Khushboo 
Tu Hi Tu Thu Hi Tu Aarzoo Aarzoo 
Ishq Kar Zor Nahin Hai Ye Voh Aatish Ghalib 
Jo Lagaye Na Lage Aur Bujhaye Na Bane 
Jo Lagaye Na Lage Aur Bujhaye Na Bane 
Ishq Kar Zor Nahin Hai Ye Voh Aatish Ghalib 
Mujhe Maut Ki Goad Mein Sone De 
Mujhe Maut Ki Goad Mein Sone De 
Mujhe Maut Ki Goad Mein Sone De 
Teri Rooh Mein Jism Dibone De 
Teri Rooh Mein Jism Dibone De 
Satrangi Re Manrangi Re 
Satrangi Re Manrangi Re
http://www.youtube.com/watch?v=wqNgdlNK3Fo

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...