Saturday, November 17, 2012

ಮೌನವೆ ಒಳಿತು

ಮೌನವೆ ಒಳಿತು
ಸಂಭಾಷಣೆಯ ಸಂತೆಯಲಿ
ಮಾತುಗಳ ಕೊರತೆ ಉಂಟಾದಾಗ !

ಖಾಲಿ ಹಾಳೆಯೆ ಒಳಿತು
ಭಾವಗಳ ಮಂಥನದಲಿ
ಪದಗಳು ತೇಲಿ ಹೋದಾಗ !

ಅರ್ಥೈಸುವುದೆ ಒಳಿತು
ಮುಖವ ಓದಿ
ಕಣ್ಣೀರು ತುಂಬಿದ ಕಣ್ಣುಗಳು ಯಾಚಿಸುವಾಗ !

ಕ್ಷಮಿಸುವುದೆ ಒಳಿತು
ಪ್ರಮಾದ ತಿಳಿದು
ಪಶ್ಚಾತಾಪದ ಅಗ್ನಿಯಲಿ ಉರಿಯುವಾಗ !
by ಹರೀಶ್ ಶೆಟ್ಟಿ, ಶಿರ್ವ

3 comments:

  1. ಹಲವು ದಿನಗಳಿಂದ ನಿಮ್ಮ ಬ್ಲಾಗ್ ನೋಡುತ್ತಿದ್ದೆ. ಒಂದೇ ಗುಕ್ಕಿಗೆ ಸೆಳೆದುಕೊಂಡ ಈ ನುಡಿಗಟ್ಟುಗಳಿಗೆ ಓಡಿ ಬಂದುಬಿಟ್ಟೆ. ಮುಂದೆಯೂ ಇಂತಹದ್ದನ್ನೇ ಆಶಿಸುತ್ತೇನೆ. ಮನಸ್ಸಿಗೆ ಹಾಗೇ ಕಚ್ಚಿ ಕುಳಿತುಕೊಳ್ಳುವ ಭಾವುಕ ಪದಗಳು. ತುಂಬಾ ಖುಷಿ ಆಯಿತು. ಒಳ್ಳೆಯದಾಗಲಿ.

    ReplyDelete
  2. ಪ್ರತಿ ಚರಣವನ್ನೂ ಗೋಡೆ ಬರಹವಾಗಿಸುವ ಹಾಗೆ ತಿದ್ದುವಂತಿದೆ.

    ReplyDelete
  3. ತುಂಬಾ ಧನ್ಯವಾದಗಳು ರವಿ ಸರ್, ಬದರಿ ಸರ್ ....

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...