Wednesday, November 21, 2012

ಇತ್ತೀಚಿನ ದಿನಗಳಲ್ಲಿ

ಇತ್ತೀಚಿನ ದಿನಗಳಲ್ಲಿ
ನನ್ನ ಪಾದಗಳು ನೆಲದ ಮೇಲಿರುವುದಿಲ್ಲ
ಹೇಳಿ ನನ್ನನ್ನು ಹಾರುವುದನ್ನು ನೀವೆಂದೂ ನೋಡಿದ್ದೀರಾ

ನಿನ್ನ ಕೈಯ ಹಿಡಿದಾಗಲೆಲ್ಲಾ
ನೋಡಿದೆ ನಾ ಅಂದು
ಜನರೆಲ್ಲ ಹೇಳುತ್ತಾರೆ
ಅದು ಕೇವಲ ಹಸ್ತ ರೇಖೆಯೆಂದು
ನಾನು ನೋಡಿದ್ದೇನೆ
ಭಾಗ್ಯವನ್ನು ಸೇರುವುದನ್ನು ಇಲ್ಲಿ
ಇತ್ತೀಚಿನ ದಿನಗಳಲ್ಲಿ......

ನಿದ್ರೆಯ ಹಾಗಿರುತ್ತದೆ
ಸ್ವಲ್ಪ ಮಾದಕತೆ ಇರುತ್ತದೆ
ಹಗಲು ರಾತ್ರಿ ಕಣ್ಣಲಿ
ಒಂದು ಮುಖ ನೆಲೆಸಿರುತ್ತದೆ
ಎಂದೂ ನೋಡಿದ್ದೀರಾ ರೆಕ್ಕೆ ಇದ್ದ ಕಣ್ಣನ್ನು ಇಲ್ಲಿ
ಹೇಳಿ
ಇತ್ತೀಚಿನ ದಿನಗಳಲ್ಲಿ......

ಏನಾಗುತ್ತದೋ
ಪ್ರತಿ ವಿಷಯದಲಿ ಏನೋ ಆಗುತ್ತದೆ
ಹಗಲಲ್ಲಿ ಏನೋ ಆಗುತ್ತದೆ 
ರಾತ್ರಿಯಲಿ ಏನೋ ಆಗುತ್ತದೆ
ಹಿಡಿದಿಡಿ ನನ್ನನ್ನು
ಎಂದಾದರೂ ನೋಡಿದ್ದರೆ ಹಾರುವುದನ್ನು ಅಲ್ಲಲ್ಲಿ
ಇತ್ತೀಚಿನ ದಿನಗಳಲ್ಲಿ....

ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಆರ್ .ಡಿ. ಬರ್ಮನ್
ಚಿತ್ರ : ಘರ್

aaj kal paw jamin par nahee padate mere
bolo dekha hain kabhee, tumane mujhe udate huye

jab bhee thama hain teraa hath toh dekha hain
log kahate hain kee, bas hath kee rekha hain
ham ne dekha hain do takadiron ko judate huye

nind see rahatee hai, halakasa nasha rahata hain
rat din aakhon me, ek chehara basa rahata hain
par lagee aakhon ko dekha hain kabhee udate huye

jane kya hota hai, har bat pe kuchh hota hain
din me kuchh hota hai, aur rat me kuchh hota hain
tham lena jo kabhee dekho humei udate ಹುಯೆ
http://www.youtube.com/watch?v=xtK9KEKXFT8

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...