ಸೂರ್ಯ ಸ್ವಲ್ಪ ತಾಳು
ಕರಿ ಮೋಡಗಳೆ ಒಳಿತು ನನ್ನ ಜೀವನಕ್ಕಾಗಿ
ಬೇಸರದಿ ಮನಸ್ಸು ಶಾಂತವಾಗಿದೆ
ನೀ ಉದಯವಾದರೆ
ಮನಸ್ಸ ಕತ್ತಲು ಕವಿಯಬಹುದು
ಆಸೆಯ ಬೆಳಕು ಪ್ರಕಾಶಿಸಬಹುದು
ಅಡಗಿದ ವ್ಯಾಮೋಹ ಪುನಃ ಹುಟ್ಟಬಹುದು
ಪ್ರೀತಿಯ ಮೊಳಕೆ ಪುನಃ ಚಿಗುರೊಡೆಯಬಹುದು!
ಸೂರ್ಯ ಸ್ವಲ್ಪ ತಾಳು ನೀ
ಏನೂ ಬೇಡವಾಗಿದೆ
ನಿರುತ್ಸಾಹ ದೇಹ ಜಡವಾಗಿದೆ
ನೀ ಉದಯವಾದರೆ
ಪುನಃ ಮನಸ್ಸಲ್ಲಿ
ಹೊಸ ಉತ್ಸಾಹ ನಿರ್ಮಾಣವಾಗಬಹುದು
ನಿಸರ್ಗ ನನ್ನನ್ನು ತನ್ನಡೆ ಎಳೆಯಬಹುದು
ಕೋಗಿಲೆಯ ಹಾಡು ಮನ ಸೆಳೆಯಬಹುದು!
ಸೂರ್ಯ ಸ್ವಲ್ಪ ತಾಳು ನೀ
ಆಗಲಿ ಮನಸ್ಸು ಹಗುರ ಸ್ವಲ್ಪ
ನಿಲ್ಲಲಿ ಈ ಕಣ್ಣೀರ ಓಟ
ನೀ ಉದಯವಾದರೆ
ಜೀವನದ ಸತ್ಯ ಅರಿವಾಗಬಹುದು
ಪ್ರೀತಿಯ ಆಟ ಬಯಲಾಗಬಹುದು
ಹೃದಯದ ಗಾಯ ಗುಣವಾಗಬಹುದು
ಹೊಸ ಜೀವನ ಪ್ರಾರಂಭವಾಗಬಹುದು !
by ಹರೀಶ್ ಶೆಟ್ಟಿ, ಶಿರ್ವ
ಕರಿ ಮೋಡಗಳೆ ಒಳಿತು ನನ್ನ ಜೀವನಕ್ಕಾಗಿ
ಬೇಸರದಿ ಮನಸ್ಸು ಶಾಂತವಾಗಿದೆ
ನೀ ಉದಯವಾದರೆ
ಮನಸ್ಸ ಕತ್ತಲು ಕವಿಯಬಹುದು
ಆಸೆಯ ಬೆಳಕು ಪ್ರಕಾಶಿಸಬಹುದು
ಅಡಗಿದ ವ್ಯಾಮೋಹ ಪುನಃ ಹುಟ್ಟಬಹುದು
ಪ್ರೀತಿಯ ಮೊಳಕೆ ಪುನಃ ಚಿಗುರೊಡೆಯಬಹುದು!
ಸೂರ್ಯ ಸ್ವಲ್ಪ ತಾಳು ನೀ
ಏನೂ ಬೇಡವಾಗಿದೆ
ನಿರುತ್ಸಾಹ ದೇಹ ಜಡವಾಗಿದೆ
ನೀ ಉದಯವಾದರೆ
ಪುನಃ ಮನಸ್ಸಲ್ಲಿ
ಹೊಸ ಉತ್ಸಾಹ ನಿರ್ಮಾಣವಾಗಬಹುದು
ನಿಸರ್ಗ ನನ್ನನ್ನು ತನ್ನಡೆ ಎಳೆಯಬಹುದು
ಕೋಗಿಲೆಯ ಹಾಡು ಮನ ಸೆಳೆಯಬಹುದು!
ಸೂರ್ಯ ಸ್ವಲ್ಪ ತಾಳು ನೀ
ಆಗಲಿ ಮನಸ್ಸು ಹಗುರ ಸ್ವಲ್ಪ
ನಿಲ್ಲಲಿ ಈ ಕಣ್ಣೀರ ಓಟ
ನೀ ಉದಯವಾದರೆ
ಜೀವನದ ಸತ್ಯ ಅರಿವಾಗಬಹುದು
ಪ್ರೀತಿಯ ಆಟ ಬಯಲಾಗಬಹುದು
ಹೃದಯದ ಗಾಯ ಗುಣವಾಗಬಹುದು
ಹೊಸ ಜೀವನ ಪ್ರಾರಂಭವಾಗಬಹುದು !
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment