ಪ್ರೀತಿ ಅಂದರೆ ಇದೇ ಎಂದು
ತಿಳಿದಿದ್ದರೆ
ನಾನ್ಯಾಕೆ ಈ ಪಥದಲ್ಲಿ ನಡೆಯುವ
ಸಾಹಸ ಮಾಡುತ್ತಿದ್ದೆ !
ಒಟ್ಟಿಗೆ ನಡೆದ ಹಾದಿಯಲ್ಲಿ
ಈಗ ಒಬ್ಬಂಟಿ
ಅಲೆಮಾರಿಯಾಗಿ
ತಿರುಗುತ್ತಿದ್ದೇನೆ !
ಸುಟ್ಟು ಬೂದಿಯಾದ
ಬಯಕೆಗಳನ್ನು
ಗಂಗೆಯಲ್ಲಿ ಹರಿಸಿ
ತನ್ನ ದೇಹವನ್ನೂ ಶುಚಿಮಾಡಿ ಬಂದೂ ಆಯಿತು !
ಇನ್ನು ಪ್ರೀತಿಯ ಅಂತ್ಯಕ್ರಿಯೆ
ಆಯಿತೆಂದು ತಿಳಿದಿದ್ದೆ
ಆದರೆ ಈ ಹೃದಯ ಎಂಬ
ಶವವನ್ನು ಹೊತ್ತುಕೊಂಡೆ ತಿರುಗಬೇಕೆಂದು ಮರೆತಿದ್ದೆ !
ಸತ್ತ ಪ್ರೀತಿಯ
ನೆನಪ ಅನ್ನ ತಿನ್ನಲು
ಯಾವುದೇ ಕಾಗೆ ಬರಲ್ಲ
ಸ್ವತ ಇಡಿ ಜೀವನ ತಿನ್ನಬೇಕಲ್ಲವೇ !
ಪ್ರೀತಿಯಲ್ಲಿ ಕಾಲ್ಪನಿಕ
ತೃಪ್ತಿ ಪಡೆಯಲು ಹೋಗಿ
ಇಂದು ವಾಸ್ತವದಲ್ಲಿ
ಜೀವನದಲ್ಲಿ ಉಳಿದದ್ದು ಸಂಕಟ ಅತೃಪ್ತಿ !
by ಹರೀಶ್ ಶೆಟ್ಟಿ, ಶಿರ್ವ
ತಿಳಿದಿದ್ದರೆ
ನಾನ್ಯಾಕೆ ಈ ಪಥದಲ್ಲಿ ನಡೆಯುವ
ಸಾಹಸ ಮಾಡುತ್ತಿದ್ದೆ !
ಒಟ್ಟಿಗೆ ನಡೆದ ಹಾದಿಯಲ್ಲಿ
ಈಗ ಒಬ್ಬಂಟಿ
ಅಲೆಮಾರಿಯಾಗಿ
ತಿರುಗುತ್ತಿದ್ದೇನೆ !
ಸುಟ್ಟು ಬೂದಿಯಾದ
ಬಯಕೆಗಳನ್ನು
ಗಂಗೆಯಲ್ಲಿ ಹರಿಸಿ
ತನ್ನ ದೇಹವನ್ನೂ ಶುಚಿಮಾಡಿ ಬಂದೂ ಆಯಿತು !
ಇನ್ನು ಪ್ರೀತಿಯ ಅಂತ್ಯಕ್ರಿಯೆ
ಆಯಿತೆಂದು ತಿಳಿದಿದ್ದೆ
ಆದರೆ ಈ ಹೃದಯ ಎಂಬ
ಶವವನ್ನು ಹೊತ್ತುಕೊಂಡೆ ತಿರುಗಬೇಕೆಂದು ಮರೆತಿದ್ದೆ !
ಸತ್ತ ಪ್ರೀತಿಯ
ನೆನಪ ಅನ್ನ ತಿನ್ನಲು
ಯಾವುದೇ ಕಾಗೆ ಬರಲ್ಲ
ಸ್ವತ ಇಡಿ ಜೀವನ ತಿನ್ನಬೇಕಲ್ಲವೇ !
ಪ್ರೀತಿಯಲ್ಲಿ ಕಾಲ್ಪನಿಕ
ತೃಪ್ತಿ ಪಡೆಯಲು ಹೋಗಿ
ಇಂದು ವಾಸ್ತವದಲ್ಲಿ
ಜೀವನದಲ್ಲಿ ಉಳಿದದ್ದು ಸಂಕಟ ಅತೃಪ್ತಿ !
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment