Thursday, November 8, 2012

ಕಣ್ಣಿನ ಕಂಡಿಯಿಂದ


ಕಣ್ಣಿನ ಕಂಡಿಯಿಂದ
ನಾ ಕಾಣಲು ಹೋದಲ್ಲಿ
ನೀ ದೂರ ಕಂಡು ಬಂದೆ
ಬಲು ದೂರ ಕಂಡು ಬಂದೆ
ಮುಚ್ಚಿಕೊಂಡು ಕಂಡಿಯನ್ನು
ಸ್ವಲ್ಪ ಕುಳಿತೆ ಯೋಚಿಸಲು
ಮನಸ್ಸಲ್ಲಿ ನೀನೆ ನಗುತ್ತಿದ್ದೆ
ಮನಸ್ಸಲ್ಲಿ ನೀನೆ ನಗುತ್ತಿದ್ದೆ
ಕಣ್ಣಿನ ಕಂಡಿಯಿಂದ......

ಒಂದು ಮನಸ್ಸಿತ್ತು ಹತ್ತಿರ
ಅದು ಮರೆಯಾಗುತ್ತಿದೆ
ನಿನ್ನನ್ನು ಪಡೆದು ನನಗೀಗ
ಏನೇನೋ ಆಗುತ್ತಿದೆ
ಒಂದು ನಿನ್ನದೇ ವಿಶ್ವಾಸದಲಿ
ಮರೆತೆ ಎಲ್ಲವನ್ನೂ
ಹೀಗೆಯೇ ಜೀವಮಾನ ಕಳೆಯಲಿ
ನಿನ್ನೊಟ್ಟಿಗೆ ಕಳೆಯಲಿ
ಕಣ್ಣಿನ ಕಂಡಿಯಿಂದ......

ಜೀವಿಸುವೆ ನಿನ್ನನ್ನು ನೋಡಿ
ಈ ಜೀವನ ನಿನಗಾಗಿ
ನೀನೆಲ್ಲಿ ನನ್ನ ಪ್ರಿಯೆ
ನನ್ನ ಪ್ರಪಂಚ ಅಲ್ಲಿಯೇ
ದಿನ ರಾತ್ರಿ ಬೇಡುತ್ತಿದೆ 
ನನ್ನ ಮನಸ್ಸು ನಿನಗಾಗಿ
ನಮ್ಮ ಬಯಕೆಯ
ಹೂವೆಂದೂ ಬಾಡದಿರಲಿ
ಕಣ್ಣಿನ ಕಂಡಿಯಿಂದ......

ನಾನೆಂದಿನಿಂದ ನಿನ್ನ ಪ್ರೀತಿಯ
ಬಣ್ಣದಲಿ ಮುಳುಗಿದೆ
ಎಚ್ಚರದಲ್ಲಿದ್ದು ಮಲಗಲಿಲ್ಲ
ನಿದ್ರೆಯಲ್ಲಿಯೂ ಎಚ್ಚರವಾಗಿದ್ದೆ
ನನ್ನ ಪ್ರೀತಿಯ ಕನಸುಗಳು
ಯಾರೂ ಕಸಿದುಕೊಳ್ಳದಿರಲಿ
ಮನಸ್ಸು ಯೋಚಿಸಿ ಭಯ ಪಡುತ್ತಿದೆ
ಇದೇ ಯೋಚಿಸಿ ಭಯ ಪಡುತ್ತಿದೆ
ಕಣ್ಣಿನ ಕಂಡಿಯಿಂದ......

ಮೂಲ : ರವಿಂದ್ರ ಜೈನ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಹೇಮಲತಾ
ಸಂಗೀತ :ರವಿಂದ್ರ ಜೈನ

Ankhiyon Ke Jharokhon Se Maine Dekha Jo Saanware
Tum Door Nazar Aaye Badi Door Nazar Aaye
Band Karke Jharokhon Ko Zara Baithee Jo Sochne
Man Mein Tumhi Muskaye Man Mein Tumhi Muskaye
Ankhiyon Ke Jharokhon Se

Ek Man Tha Mere Paas Woh Ab Khone Laga Hai
Paakar Tujhe Hai Mujhe Kuchh Hone Laga Hai
Ek Tere Bharose Pe Sab Baithee Hoon Bhool Ke
Yoon Hi Umar Guzar Jaye Tere Saath Guzar Jaye
Ankhiyon Ke Jharokhon Se...

Jeeti Hoon Tujhe Dekh Ke Marti Hoon Tumhi Pe
Tum Ho Jahan Saajan Meri Duniya Hai Wahin Pe
Din Raat Dua Maange Mera Man Tere Waaste
Kabhi Apni Ummeedon Ka Kahin Phool Na Murjhaye
Ankhiyon Ke Jharokhon Se...

Maein Jab Se Tere Pyar Ke Rangon Mein Rangi Hoon
Jaagte Hue Soi Nahin Neendon Mein Jagi Hoon
Mere Pyar Bhare Sapne Kahin Koi Na Chheen Le
Man Soch Ke Ghabraye Yahi Soch Ke Ghabraye
Ankhiyon Ke Jharokhon Se...
www.youtube.com/watch?v=4YW7EbO79oA

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...