ಹಾಲನೇಕೆ ಕುಡಿಯಲಿ
ವಿಷದ ಲೋಟೆಯಲಿ
ಬರ ಮಾಡಿಕೊಂಡು
ನಿನ್ನ ಮನೆಯಲಿ
ಹಿಗ್ಗುವೆ ಏಕೆ ?
ನನ್ನ ಕರೆಯಲೆಂದು ನಾ ಹೇಳಲಿಲ್ಲ
ನಿನ್ನ ಐಶ್ವರ್ಯ
ನಿನಗೆ ಒಲಿಯಲಿ
ಜಗ ತೋರಿಸಿ
ವಿಷದ ಲೋಟೆಯಲಿ
ಬರ ಮಾಡಿಕೊಂಡು
ನಿನ್ನ ಮನೆಯಲಿ
ಹಿಗ್ಗುವೆ ಏಕೆ ?
ನನ್ನ ಕರೆಯಲೆಂದು ನಾ ಹೇಳಲಿಲ್ಲ
ನಿನ್ನ ಐಶ್ವರ್ಯ
ನಿನಗೆ ಒಲಿಯಲಿ
ಜಗ ತೋರಿಸಿ
ಕುಣಿಯುವೆ ಏಕೆ ?
ನಾ ಇದ್ದೆ ನನ್ನ ಪ್ರಪಂಚದಲಿ
ತುಂಡು ಬಟ್ಟೆ ಗಂಜಿಯೇ ಒಳಿತಿತ್ತು ಎನಗೆ
ನೀರ ಆಸೆ ತೋರಿಸಿ
ನನ್ನ ಪಾಳು ಬಾವಿಗೆ
ಇನ್ನು ಮಣ್ಣು ಹಾಕಿ ಮುಚ್ಚುವೆ ಏಕೆ ?
ಕಣ್ಣೀರಿಲ್ಲ ಈ ಕಣ್ಣಲ್ಲಿ ಈಗ
ಬೇಸರ ಬೇಜಾರ ನನಗಾಗದು
ಉಪದೇಶ ನೀಡಿ
ಇನ್ನು ಅವಮಾನ ಮಾಡಿ
ಮೆರೆಯುವೆ ಏಕೆ ?
ಬಡವನಾದರೂ ಗತಿ ಇಲ್ಲದವನಲ್ಲ ನಾನು
ನಿನ್ನ ಸಂಪತ್ತು ಉಡುಗೊರೆ ಬೇಡ ಎನಗೆ
ಕಪಟ ಕಾರುಣ್ಯ ತೋರಿಸಿ
ಸಹಾಯವೆಂದು
ಭಿಕ್ಷೆ ನೀಡುವೆ ಏಕೆ ?
by ಹರೀಶ್ ಶೆಟ್ಟಿ, ಶಿರ್ವ
ನಾ ಇದ್ದೆ ನನ್ನ ಪ್ರಪಂಚದಲಿ
ತುಂಡು ಬಟ್ಟೆ ಗಂಜಿಯೇ ಒಳಿತಿತ್ತು ಎನಗೆ
ನೀರ ಆಸೆ ತೋರಿಸಿ
ನನ್ನ ಪಾಳು ಬಾವಿಗೆ
ಇನ್ನು ಮಣ್ಣು ಹಾಕಿ ಮುಚ್ಚುವೆ ಏಕೆ ?
ಕಣ್ಣೀರಿಲ್ಲ ಈ ಕಣ್ಣಲ್ಲಿ ಈಗ
ಬೇಸರ ಬೇಜಾರ ನನಗಾಗದು
ಉಪದೇಶ ನೀಡಿ
ಇನ್ನು ಅವಮಾನ ಮಾಡಿ
ಮೆರೆಯುವೆ ಏಕೆ ?
ಬಡವನಾದರೂ ಗತಿ ಇಲ್ಲದವನಲ್ಲ ನಾನು
ನಿನ್ನ ಸಂಪತ್ತು ಉಡುಗೊರೆ ಬೇಡ ಎನಗೆ
ಕಪಟ ಕಾರುಣ್ಯ ತೋರಿಸಿ
ಸಹಾಯವೆಂದು
ಭಿಕ್ಷೆ ನೀಡುವೆ ಏಕೆ ?
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment